“ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಮಿತಗೊಳಿಸುವ ನೆಟ್ ಝೀರೋ ಗುರಿಯನ್ನು ಭಾರತವು 2070 ತಲುಪಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ತಡೆ ಸಮಾವೇಶದಲ್ಲಿ ಘೋಷಿಸಿದ್ದಾರೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಈ ಗುರಿ ಹಾಕಿಕೊಂಡ ಮೊದಲ ದೇಶ ಭಾರತ ವಾಗಿದೆ. 2015ರ ಪ್ಯಾರಿಸ್ ಶೃಂಗಸಭೆಯಲ್ಲಿ ಹಾಕಿಕೊಂಡಿದ್ದ ಗುರಿಗಳನ್ನು ಪೂರ್ಣಪ್ರಮಾಣದಲ್ಲಿ ತಲುಪುವಲ್ಲಿ ಭಾರತವು ವಿಫಲವಾಗಿದೆ.
ಹೀಗಾಗಿ ಈ ನೂತನ ಕಾರ್ಯ ಯೋಜನೆಯನ್ನು ಪ್ರಕಟಿಸಿದೆ. ಈ ಮೂಲಕ ನೆಟ್ ಜೀರೋ ಗುರಿಯನ್ನು ತಲುಪಲು ಅವಕಾಶ ಮಾಡಿಕೊಂಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
“2070ರ ವೇಳೆಗೆ ನೆಟ್ ಝಿರೋ ಸಾಧಿಸುತ್ತೇವೆ ಎಂಬುವುದು ಮಹತ್ವಕಾಂಕ್ಷಿ ಘೋಷಣೆ. ಈ ಗುರಿಯನ್ನು ತಲುಪುವುದು ಸವಾಲಿನ ಕೆಲಸ” ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರೋನ್ಮೆಂಟ್ ನಿರ್ದೇಶಕಿ ಸುನಿತಾ ನಾರಾಯಣ ಅವರು ತಿಳಿಸಿದ್ದಾರೆ.
ಮೋದಿಯವರು ಈ ಗುರಿಯನ್ನು ಘೋಷಿಸುವ ಮೂಲಕ, ಅಭಿವೃದ್ಧಿ ಹೊಂದಿದ ದೇಶಗಳ ಮೇಲೆ ಮತ್ತೆ ಒತ್ತಡ ಸೃಷ್ಟಿಸಲು ಯತ್ನಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳು ಈಗ ಆರ್ಥಿಕ ನೆರವು ನೀಡಲೇಬೇಕಾದ ಒತ್ತಡದ ಪರಿಸ್ಥಿತಿಗೆ ಸಿಲುಕಲಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಗ್ಲಾಸ್ಗೋ ಸಮಾವೇಶದಲ್ಲಿ ನೇಪಾಳ ಪ್ರಧಾನಿ ಹಾಗೂ ಇಸ್ರೇಲ್ ಪ್ರಧಾನಿ ಜತೆಗೆ ಮಾತುಕತೆ ನಡೆಸಿದರು. ಗೇಟ್ಸ್ ಪ್ರತಿಷ್ಠಾನದ ಬಿಲ್ ಗೇಟ್ಸ್ ಅವರ ಜೊತೆಯೂ ಮೋದಿ ಮಾತುಕತೆ ನಡೆಸಿದರು.
2030ರ ವೇಳೆಗೆ ದೇಶದಲ್ಲಿ 450- 500 ಗಿಗಾವಾಟ್ ನಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವುದು. 2030ರ ವೇಳೆಗೆ ರೈಲ್ವೆಯ ಇಂಗಾಲ ಹೊರಸೂಸುವಿಕೆಯನ್ನು ಶೇಕಡ ನೂರರಷ್ಟು ಕಡಿತ ಮಾಡಲಾಗುವುದು. ಇದರಿಂದ ವಾರ್ಷಿಕ 6 ಕೋಟಿ ಟನ್ ಇಂಗಾಲದ ಮಾಲಿನ್ಯ ಕಡಿಮೆಯಾಗಲಿದೆ ಎಂಬ ಘೋಷಣೆಯನ್ನು ಮೋದಿ ಮಾಡಿದರು.
ಆರೋಗ್ಯಕರ ಹವಾಮಾನದತ್ತ ಭಾರತದ ಚಿತ್ತ
Date: