ಗಾಳಿ, ಗುಡುಗು-ಸಿಡಿಲು, ಮಳೆಯಿಂದಾಗಿ ಮಲೆನಾಡಿನ ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ. ಅಕ್ಟೋಬರ್ ತಿಂಗಳ ಅಂತ್ಯ ಸಮೀಪಿಸಿದರು ಕಡಿಮೆಯಾಗದ ಕಾರಣ ಮಲೆನಾಡು ಭಾಗದ ಅಡಕೆ ಮತ್ತು ಭತ್ತದ ಬೆಳೆಗಳ ಹಾನಿಉಂಟಾಗಿದೆ.

ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಅಧಿಕವಾಗಿದ್ದರು ಅಡಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಇಲ್ಲದಂತಾಗಿದೆ. ಅಕಾಲಿಕ ಮಳೆಯಿಂದಾಗಿ ಅಡಕೆ ಕೊಯ್ಲು ಮಾಡಲು ಆಗದ ಕಾರಣ ಅಡಕೆ ಹಣ್ಣಾಗಿ ಉದುರ ತೊಡಗಿದೆ. ಅಲ್ಲದೆ ಅಡಿಕೆ ಕೊಳೆರೋಗ ಕಾಣಿಸಿಕೊಂಡಿದ್ದು ರೈತರಿಗೆ ದಿಕ್ಕೆ ತೋಚದಂತಾಗಿದೆ.
ವಾಡಿಕೆಗಿಂತ ಈ ಬಾರಿ ಅಕ್ಟೋಬರ್ 22 ರವರೆಗೆ ಜಿಲ್ಲೆಯಾದ್ಯಂತ ಅಧಿಕ ಮಳೆಯಾಗಿದು. ಅಂಕಿಅಂಶಗಳ ಪ್ರಕಾರ ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಶೇಕಡಾ 42ರಷ್ಟು ಮಳೆಯಾದರೆ, ಶಿವಮೊಗ್ಗ ಶೇಕಡ 84, ಸೊರಬ ಶೇಕಡ 114, ತೀರ್ಥಹಳ್ಳಿ ಶೇಕಡ 84, ಶಿಕಾರಿಪುರ ಶೇಕಡಾ 157, ಭದ್ರಾವತಿ ಶೇಕಡ 141 ರಷ್ಟು ಅಧಿಕ ಮಳೆಯಾಗಿದೆ.
ಅಕಾಲಿಕ ಮಳೆ ಅಡಕೆ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ ಬಯಲುಸೀಮೆ ಪ್ರದೇಶದಲ್ಲಿ ಈಗಾಗಲೇ ಅಡಿಕೆ ಕೊಯ್ಲು ಮುಗಿದು ಮಾರುಕಟ್ಟೆಗೆ ಅಡಿಕೆ ಬಂದಿದೆ. ಆದರೆ ಮಲೆನಾಡ ರೈತರು ಇನ್ನೂ ಕೊಳೆ ಔಷಧಿ ಸಿಂಪರಣೆ ಮಾಡುವ ಪರಿಸ್ಥಿತಿ ಬಂದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಡಕೆ ಬೆಳೆಗಾರರಿಗೆ ಬೆಳೆನಷ್ಟ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮ್ಯಾಮ್ ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.