ತಾಳಗುಪ್ಪ: ಕವಿಗಳು ಹೂವನ್ನು ವರ್ಣಿಸಿ ಹಲವಾರು ಕವಿತೆ ರಚಿಸಿದ್ದಾರೆ. ಗುಲಾಬಿ, ಮಲ್ಲಿಗೆ, ಸಂಪಿಗೆ ಹೀಗೆ ಎಲ್ಲಾ ಹೂವುಗಳೂ ಕವಿತೆಗಳಾಗಿವೆ, ಹಾಡುಗಳಲ್ಲಿ ತಮ್ಮ ಸ್ಥಾನ ಪಡೆದುಕೊಂಡಿದೆ. ಅವುಗಳಲ್ಲಿ ಸೇವಂತಿಯೂ ಒಂದು. ಮಲೆನಾಡಿನ ಗೃಹಣಿಯರ ಕೈ ಸೇವೆಯಲ್ಲಿ ಸಿಕ್ಕ ಸೇವಂತಿಗೆ ಸುಂದರವಾಗಿ ಬೆಳೆಯುತ್ತಿದೆ. ತಾಳಗುಪ್ಪ ಸಮೀಪದ ಹಳ್ಳಿಗಳಾದ ಗೋಟಗಾರು, ಅರೆಹದ್ದ, ತಲವಾಟ ಮುಂತಾದ ಮಹಿಳೆಯರು ಏಪ್ರಿಲ್ ತಿಂಗಳಿನಿಂದ ಮನೆಯ ಸುತ್ತಮುತ್ತ ಸೇವಂತಿಗೆ ಗಿಡದ ಆರೈಕೆ ಮಾಡುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಇವು ಹೂ ಬಿಟ್ಟು ಎಲ್ಲರ ಮನ ತಣಿಸುತ್ತದೆ. ಕಾರದಕಡ್ಡಿ, ಮುದ್ದೆಬಿಳಿ, ಹೊಸಬಾಳೆ ಸೇವಂತಿಗೆ, ಡೆಲ್ಲಿ ಸೇವಂತಿಗೆ,ತೊಗರುಮಡ್ಡಿ,ಬೆಂಕಿಕಡ್ಡಿ, ಹೀಗೆ ಗ್ರಾಮೀಣ ಸೊಗಡಿನ ಹೆಸರುಳ್ಳ ಸೇವಂತಿಗೆ ಹೆಸರಿನ ಮೂಲಕವೂ ಮುದ ನೀಡುತ್ತವೆ. ಇಲ್ಲಿನ ಮಹಿಳೆಯರು ಮಾರಟಕ್ಕಾಗಿ ಈ ಕೆಲಸ ಮಾಡದೆ ಕೇವಲ ನೋಡುಗರ ಕಣ್ಣಿಗೆ ಮುದ ನೀಡಲಷ್ಟೆ ಸೇವಂತಿಗೆ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಪೋಟೋ: ಕವಿತಾ ಆರ್ ,ಕಡವಿನಮನೆ, ಗೃಹಿಣಿ ವರದಿ ಕೃಪೆ – ಆರ್. ಶರ್ಮಾ ತಲವಾಟ
ಮನ ಸೆಳೆಯುವ ಸುಂದರ, ಸೇವಂತಿಗೆ
Date: