Friday, December 5, 2025
Friday, December 5, 2025

Honey ಇಂದ Money

Date:

ಆ್ಯಂಕರ್ : ವೀಕ್ಷಕರೆ ನಿಮಗೆಲ್ಲಾ ನಮಸ್ಕಾರ ನಾನು ಅಶ್ವಿನಿ ನಾಯಕ ನಿಮಗೆಲ್ಲ ಕೆ-ಲೈವ್ ಯುಟ್ಯೂಬ್ ಚಾನೆಲ್ ಗೆ ಸ್ವಾಗತ.

ಇಂದಿನ ವಿಶೇಷ ಕಾರ್ಯಕ್ರಮ Hony ಇಂದಾ Mony

ಅಬ್ಬಾ..!! ಅಲ್ಲೆಲ್ಲಾ ಜೇನುನೊಣಗಳ ಝೇಂಕಾರ… ಮೂಗಿಗೆ ಬಡಿಯುತ್ತಿರುವ ಜೇನುತುಪ್ಪದ ಸುವಾಸನೆ..(.ವಿ ) ಸುಂದರ ಪ್ರಕೃತಿಯ ಮಧ್ಯೆ ನೂರಾರು ಜೇನುಪೆಟ್ಟಿಗೆಗಳು…(. ) ಜೇನಿನ ಲೋಕದಲ್ಲಿ ವಿಹರಿಸಿದ ಅನುಭವ..(ಜೇನು ಪೆಟ್ಟಿಗೆ ಫೋಟೋ) ಇವನ್ನೆಲ್ಲಾ ನೀವೂ ನೋಡ್ಬೇಕಾ…? ಹಾಗಾದ್ರೆ ಬನ್ನಿ ಸೊರಬದ ನಿಸರಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಕಾಲುಕೊಪ್ಪ ಎಂಬ ಪುಟ್ಟ ಊರಿಗೆ.(. ವಿ) ಅತಿಥಿ ಉಪನ್ಯಾಸಕ ವೃತ್ತಿ ಬದುಕಿನ ಜೊತೆ ಜೇನು ಕೃಷಿಗೆ ಕೈ ಜೋಡಿಸಿರುವ ಆ ಯುವ ರೈತನ ಯಶೋಗಾಥೆ. ವೀಕ್ಷಕರೆ ನಮಗೆಲ್ಲ ತಿಳಿದಿರುವ ಹಾಗೆ ಇತ್ತೀಚೆಗೆ ಹನಿಟ್ರ್ಯಾಪ್ ಬಹಳ ಸುದ್ದಿ ಮಾಡುತ್ತಿದೆ ಆದರೆ ಬೆವರು ಸುರಿಸಿ ಹನಿಯಿಂದ ಮನಿ ಟ್ರ್ಯಾಪ್ ಮಾಡೋದನ್ನ ವಿಘ್ನೇಶ್ ಅವರಿಂದ ತಿಳ್ಕೊಳೋಣ. ಲಾಕ್ ಡೌನ್ ವೇಳೆ ಈತ ಮಾಡಿದ ಜೇನು ಕೃಷಿಯ ಕಥೆ ನಾವ್ ಹೇಳ್ತಿವಿ ನೋಡಿ….(ಜೇನುಕೃಷಿ ವಿಡಿಯೋ)

ವಾಯ್ಸ್ ಓವರ್ 1: ಹೌದು.. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಪುಟ್ಟಗ್ರಾಮ ತಲಕಾಲುಕೊಪ್ಪ.(ವಿ) ಸಾಗರ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಎಂಕಾಂ ಮುಗಿಸಿ ಸೊರಬದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ವಿಘ್ನೇಶ್ ಜೇನು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. (ವಿಘ್ನೇಶ್ ಫೋಟೋ, ವಿ) ಕೋವಿಡ್ ಲಾಕ್ ಡೌನ್ ನಿಂದಾಗಿ ಹಲವರು ಕೆಲಸಗಳನ್ನು ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದರು. ಇವರು ಪ್ರವೃತ್ತಿ 20 ವರ್ಷದಿಂದಲೂ ಜೇನುಕೃಷಿ. ಆದರೆ ಲಾಕ್ ಡೌನ್ ಸಮಯದಲ್ಲಿ ವಿಘ್ನೇಶ್ ಅವರು ಕಂಗೆಡದೆ ಜೇನುಕೃಷಿಯತ್ತ ಮುಖ ಮಾಡಿ ಯಶಸ್ಸಿನ ದಾರಿ ಹಿಡಿದು ಯುವಕರಿಗೆ ಮಾದರಿಯಾಗಿದ್ದಾರೆ.(ವಿ) ವಿಘ್ನೇಶ್ ಅವರು ಬಳಿ 31 ಗುಂಟೆ ಜಮೀನಿದೆ. ಪ್ರಾರಂಭದಲ್ಲಿ 30 ಜೇನುಪೆಟ್ಟಿಗೆಗಳಿಂದ ಆರಂಭವಾದ ಇವರ ಕೆಲಸ, 370 ಜೇನುಪೆಟ್ಟಿಗೆಗಳನ್ನ ಮುಟ್ಟಿದೆ(ವಿಡಿಯೋ, ಜೇನು ಪೆಟ್ಟಿಗೆ). ಇವರು ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ರೈತರಿಗೆ ಜೇನು ಕೃಷಿಯ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. (ಜೇನು ಕೃಷಿ ತರಬೇತಿ ವಿಡಿಯೋ) ಇವರಿಂದ ಪ್ರೇರಿತರಾದ ರೈತರು ಇವರಿಂದ ಜೇನುಪೆಟ್ಟಿಗೆಗಳನ್ನ ಕೊಂಡೊಯ್ದಿದ್ದಾರೆ. ಅಷ್ಟೆ ಅಲ್ಲದೆ ಜೇನು ಕೃಷಿ ಕುರಿತು ಅತಿ ಹೆಚ್ಚು ಆಸಕ್ತಿ ನೀಡುವುದಲ್ಲದೆ ಇತರೆ ರೈತರಿಗೂ ಜೇನು ಕೃಷಿ ಕುರಿತು ಅಧ್ಯಯನ‌ ಶಿಬಿರವನ್ನೂ ಮಾಡುತ್ತಿದ್ದಾರೆ.

ಜೇನುನೊಣಗಳು ಪರಿಸರದಲ್ಲಿನ ಸಸ್ಯಗಳಿಗೆ ಸಂಬಂಧಿಸಿದಂತೆ ಪರಾಗಸ್ಪರ್ಶ ಉಂಟುಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಎಂಬುದನ್ನು ಸಸ್ಯವಿಜ್ಞಾನಿ ಕೆಂಗ್ ಲೋ ಜೇಮ್ಸ್ ಹಂಗ್ ಅವರು ಹೇಳಿದ್ದಾರೆ.

ಪರಿಸರದ ಸಮೃದ್ಧಿಯಲ್ಲಿ ಜೇನುನೊಣಗಳ ಪಾತ್ರ ಬಹಳ ಹಿರಿದಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ವಿಘ್ನೇಶ್ ರೈತರಿಗೆ ತಿಳಿಸುತ್ತಾರೆ.(ವಿಡಿಯೋ) …

ತೋಟಗಾರಿಕೆ ಇಲಾಖೆಗೆ ಅಧಿಕೃತವಾಗಿ ಜೇನು ಸಾಕಾಣಿಕೆ ಉಪಕರಣಗಳು ಹಾಗೂ ಜೇನುಗೂಡು ಸರಬರಾಜು ಕೂಡ ಮಾಡುತ್ತಾರೆ. ರಾಜ್ಯದಲ್ಲಿ 19 ಜನರನ್ನು ಜೇನುಕೃಷಿಯಲ್ಲಿ ಪರಿಗಣಿಸಿದ್ದಾರೆ ಅದರಲ್ಲಿ ನಾನು ಕೂಡ ಒಬ್ಬ ಎಂದು ಹೇಳುತ್ತಾರೆ ವಿಘ್ನೇಶ್.

ಬೈಟ್: ವಿಘ್ಬೇಶ್. ಜೇನು ಕೃಷಿಕ

ವಾಯ್ಸ್ ಓವರ್ ೨: ಜಿಲ್ಲೆಯಲ್ಲಿ ಜೇನು ಕೃಷಿಯನ್ನು ಪ್ರಾರಂಭಿಸಿವರಲ್ಲಿ ವಿಘ್ನೇಶ್ ಅವರು ಮೊದಲಿಗರು. ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ವಾರಕ್ಕೆ ಒಂದು ಬ್ಯಾಚ್ ನಂತೆ ಜಿಲ್ಲೆಯ ನಾನಾ ಭಾಗಗಳಿಂದ ರೈತರು ಅವರ ಬಳಿ ಜೇನು ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಬರುತ್ತಾರೆ. ಈ ಮೂಲಕ ಜೇನುಕೃಷಿಯನ್ನು ಮುಂದುವರೆಸುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಆದಾಯ ಗಳಿಸಲು ಸಾಧ್ಯ ಎಂಬುದಕ್ಕೆ ವಿಘ್ನೇಶ್ ಅವರು ರೈತರಿಗೆ ಮಾದರಿಯಾಗಿದ್ದಾರೆ.

ಬೈಟ್ ೨: ತೋಟಗಾರಿಕೆ ಇಲಾಖೆ.

ಆ್ಯಂಕರ್….: ಒಟ್ಟಾರೆ ರಾಜ್ಯದಲ್ಲಿ ಲಾಕ್ ಡೌನ್ ಹಲವರನ್ನ ಬೀದಿಗೆ ಬೀಳಿಸಿದ್ರೆ, ಇನ್ನೊಂದೆಡೆ ಇಂತಹ ಕೃಷಿಗೆ ಒತ್ತು ಕೊಡುವಲ್ಲಿ ಯುವ ಸಮೂಹ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ. ಸದ್ಯ ಅತಿಥಿ ಉಪನ್ಯಾಸಕರಾಗಿ ವೃತ್ತಿ ಬದುಕು ರೂಪಿಸಿಕೊಂಡ ವಿಘ್ನೇಶ್ ಇದೀಗ ಜೇನುಕೃಷಿಯತ್ತ ಮುಖ ಮಾಡಿ ರೈತರಿಗೆ ಹಾಗೂ ಯುವಕರಿಗೆ ಮಾದರಿಯಾಗಿದ್ದಾರೆ. ಇವರ ಈ ಯಶಸ್ಸು ಹೀಗೆ ಮುಂದುವರೆಯಲಿ ಎಂಬುವುದೇ ಕೆ-ಲೈವ್ ಮೀಡಿಯಾದ ಆಶಯವಾಗಿದೆ.

ಈ ಕಾರ್ಯಕ್ರಮ ನಿಮಗೆ ಇಷ್ಟ ಆಯ್ತಲ್ಲ ಹಾಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...