ಇತ್ತೀಚಿಗೆ ಟಾಟಾ ಅಂಗಳಕ್ಕೆ ಮರಳಿರುವ ಏರ್ ಇಂಡಿಯಾದ ನೂತನ ಸಿಇಒ ಆಗಿ ಬ್ರಿಟಿಷ್ ಏರ್ ವೇಸ್ ನ ಮಾಜಿ ಸಿಇಸಿ ಮತ್ತು ಅಧ್ಯಕ್ಷರಾದ ಅಲೆಕ್ಸ್ ಕ್ರೂಜ್ ನೇಮಕವಾಗುವ ಸಾಧ್ಯತೆ ಇದೆ. ಅಲೆಕ್ಸ್ ಕ್ರೂಜ್ ಅವರು ಕಡಿಮೆ ದರದ ಏರ್ ಲೈನ್ಸ್ ನಿರ್ವಹಣೆಯಲ್ಲಿ ಪರಿಣತಿ ಸಾಧಿಸಿದ್ದಾರೆ. 2020 ರ ತನಕ 5 ವರ್ಷಗಳಲ್ಲಿ ಬ್ರಿಟಿಷ್ ಏರ್ ವೇಸ್ ನ ಸಿಇಓ ಆಗಿದ್ದರು. ಅದಕ್ಕೂ ಮುಂಚೆ ಸ್ಪಾನಿಷ್ ಮೂಲದ ಕಡಿಮೆ ವೆಚ್ಚದ ಏರ್ಲೈನ್ ಒಂದರ ಸಿಇಒ ಆಗಿದ್ದರು.
ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬ್ರಿಟಿಷ್ ಏರ್ ವೇಸ್ 2020ರ ಅಕ್ಟೋಬರ್ ತಿಂಗಳಿನಲ್ಲಿ 13,000 ಹುದ್ದೆಗಳನ್ನು ಕಡಿತಗೊಳಿಸಿತ್ತು. ಅದೇ ಸಂದರ್ಭದಲ್ಲಿ ಕ್ರೂಜ್ ಪದತ್ಯಾಗ ಮಾಡಿದ್ದರು. ಲಿಂಕ್ಡ್ ಇನ್ ಕಥೆ ಪ್ರಕಾರ ಅವರಿಗೆ ಒಬ್ಬ ಹೂಡಿಕೆದಾರ. ಅವರು ಐಇಎಸ್ಇ ಬಿಸಿನೆಸ್ ಸ್ಕೂಲ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ಹೊಸ ತಂಡದ ಸಾರಥ್ಯ ವನ್ನು ಸ್ವತಃ ಗ್ರೂಪ್ ಅಧ್ಯಕ್ಷ ಎನ್. ಚಂದ್ರಶೇಖರನ್ ವಹಿಸುವ ಸಾಧ್ಯತೆ ಇದೆ.
ಏರ್ ಇಂಡಿಯಾದಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸುವುದು. ಸಕಾಲಕ್ಕೆ ವಿಮಾನಗಳ ಹಾರಾಟ, ನಷ್ಟವನ್ನು ಕಡಿಮೆ ಮಾಡುತ್ತಾ ಲಾಭದ ಹಳಿಗೆ ತರುವುದು ಮುಖ್ಯವಾಗಿದೆ.
ಟಾಟಾ ಸಮೂಹ ಈಗ ಏರ್ ಇಂಡಿಯಾ, ಏರ್ ಇಂಡಿಯ ಎಕ್ಸ್ಪ್ರೆಸ್, ವಿಸ್ತಾರ ಮತ್ತು ಏರ್ ಏಷ್ಯಾ ಇಂಡಿಯಾ ಏರ್ಲೈನ್ಸ್ ಸಂಸ್ಥೆಗಳನ್ನು ಹೊಂದಿದೆ. ಇದರಲ್ಲಿ ಒಂದನ್ನು ವಿಲೀನಗೊಳಿಸುವ ಸಾಧ್ಯತೆ ಇದೆ.