Sunday, October 6, 2024
Sunday, October 6, 2024

ಪರೀಕ್ಷೆಯ ಅಂಕಗಳಿಗಿಂತ ಜೀವನವೆಂಬ ಪರೀಕ್ಷೆಯ ಅಂಕಗಳೇ ಮುಖ್ಯ

Date:

ವಾರ್ಷಿಕ ಪರೀಕ್ಷೆ ಎದುರಿಸಿ ಅಂಕಗಳಿಸಲು ಶಾಲಾ ಕಾಲೇಜು ಶಿಕ್ಷಣ ಸಾಕು, ಆದರೆ, ಬದುಕು ಎದುರಿಸಲು ಜೀವನ ಶಿಕ್ಷಣ ಬೇಕೇ ಬೇಕು. ಜೀವನ ಶಿಕ್ಷಣವನ್ನು ಪಠ್ಯೇತರ ಚಟುವಟಿಕೆಗಳ ಮೂಲಕವೂ ಪಡೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ ಅವರು ತಿಳಿಸಿದರು.
ಹರಿಹರದ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪಠ್ಯೇತರವಾದ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಮುಂತಾದ ಯಾವುದೇ ಚಟುವಟಿಕೆಗಳಿಗೆ ಆದ್ಯತೆ ಕೊಡಬೇಕು. ಭಾರತೀಯ ಸಂಸ್ಕೃತಿಯಲ್ಲಿ ಸೌಹಾರ್ದತೆಗೂ, ಜೀವನ ಮೌಲ್ಯಗಳಿಗೂ ಪ್ರಾಶಸ್ತ್ಯವಿದೆ. ಆದ್ದರಿಂದಲೇ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತೀಯ ಸಂಸ್ಕೃತಿಗೆ ಹೆಚ್ಚು ಗೌರವ ನೀಡುತ್ತಿವೆ ಎಂದರು.

ವಿಶ್ವದಲ್ಲಿ ದೊಡ್ಡ ಮೊತ್ತದಲ್ಲಿ ರುವ ಭಾರತೀಯ ಯುವ ಶಕ್ತಿಯ ಬಗ್ಗೆ ಜಗತ್ತಿನ ಬೇರೆ ರಾಷ್ಟ್ರಗಳು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ವೈಯಕ್ತಿಕ ನಿರೀಕ್ಷೆ, ತಂದೆ-ತಾಯಿಗಳ ನಿರೀಕ್ಷೆ, ಸಮಾಜ ಮತ್ತು ರಾಷ್ಟ್ರದ ನಿರೀಕ್ಷೆ ಯೊಂದಿಗೆ ಜಾಗತಿಕ ನಿರೀಕ್ಷೆಯೂ ಸಾಕಾರವಾಗಿ ಪ್ರಪಂಚವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆಯಬೇಕಿದ್ದು ಈ ಸಾಮರ್ಥ್ಯ ಭಾರತದ ಯುವ ಜನರಲ್ಲಿದೆ.


ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಎಂ.ಹಾಲಸ್ವಾಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಮ್ಮನೆ ಬದುಕಿದರೆ ಪ್ರಯೋಜನವಿಲ್ಲ, ಏನಾದರೂ ಸಾಧನೆ ಬೇಕು. ಯುವಜನತೆಯನ್ನು ಬಳಸಿಕೊಳ್ಳುವುದು ಎಷ್ಟು ಮುಖ್ಯವೋ, ಉತ್ತಮ ಕಾರ್ಯಕ್ಕೆ ಯುವಜನತೆಯ ಸ್ಪಂದನೆಯೂ ಅಷ್ಟೇ ಮುಖ್ಯ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಎಂ.ಮುರಗಿಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎನ್.ಎಂ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಹಾಗೂ ಕಲಾ ವೇದಿಕೆಯ ಸಂಯೋಜಕ ಪ್ರೊ.ಸಿದ್ದಯ್ಯ ಎಸ್. ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಕ್ ಸಂಯೋಜಕ ಪ್ರೊ.ಬಿ. ಕೆ. ಮೊಹಮ್ಮದ್ ಸ್ವಾಲೇಹಾ, ಮಾನವ ಹಕ್ಕುಗಳ ವೇದಿಕೆ ಸಂಯೋಜಕ ಪ್ರೊ.ಹೆಚ್. ಎಂ. ವೇದಮೂರ್ತಿ ಆರಾಧ್ಯ, ಮಹಿಳಾ ವೇದಿಕೆಯ ಸಂಯೋಜಕಿ ಡಾ.ಎಂ.ಹೆಚ್. ಶಿವಗಂಗಮ್ಮ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವೇದಿಕೆ ಸಂಯೋಜಕ ಡಾ.ಪರಮೇಶ್ವರ ನಾಯ್ಕ, ಉದ್ಯೋಗ ಮಾಹಿತಿ ವೇದಿಕೆ ಸಂಯೋಜಕ ಪ್ರೊ. ರಮೇಶ್ ಕೆ.ಪರ್ವತಿ, ಕನ್ನಡ ವಿಭಾಗ ಮುಖ್ಯಸ್ಥೆ ರೇಣುಕಾ ಸಂಕನಗೌಡರ, ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಡಾ.ರಶ್ಮಿ ಜಿ. ಹೆಚ್, ಉರ್ದು ವಿಭಾಗ ಮುಖ್ಯಸ್ಥ ಅಪ್ಸರ್ ಅಲಿ ಮುಂತಾದವರು ವೇದಿಕೆಯಲ್ಲಿದ್ದರು. ಕಲಾವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಫೌಜಿಯಾ ಖಾನಂ, ಗೌತಮ್ ಜಿ. ಹೆಚ್. ಭಾಗವಹಿಸಿದ್ದರು.ಮುಖ್ಯ ಅತಿಥಿ ಎಚ್. ಬಿ.ಮಂಜುನಾಥ ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅಕ್ಟೋಬರ್ 7 ರಂದು ಆಲ್ಕೊಳ‌ ಸುತ್ತಮುತ್ತ ವಿದ್ಯುತ್ ಸರಬರಾಜು ಇರುವುದಿಲ್ಲ

MESCOM ಶಿವಮೊಗ್ಗ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಶಿವಮೊಗ್ಗ...

Nehru Stadium Shimoga ಪ್ರಾಥಮಿಕ ಶಾಲಾಮಕ್ಕಳ ಕ್ರೀಡಾಕೂಟ ಉದ್ಘಾಟನೆ

Nehru Stadium Shimoga ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ...

Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ

Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ...

Shivamogga News ಕೆರೆ,ಕಟ್ಟೆ,ಹಳ್ಳ ಜಮೀನು ಇತರೆ ಸರ್ಕಾರದ ಸ್ವತ್ತು ಒತ್ತುವರಿ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳಿ-ನ್ಯಾ.ಬಿ.ಎ.ಪಾಟೀಲ್

Shivamogga News ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು...