ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಎರಡು ವರ್ಷ ಹಿಂದೆ ನಡೆದ ಸಂಘರ್ಷದ ವೇಳೆ ಮೃತಪಟ್ಟ ಭಾರತೀಯ ಸೈನಿಕರ ಸಂಖ್ಯೆ ಕುರಿತು ಚೀನಾ ಸುಳ್ಳು ಹೇಳಿರುವುದು ಬಯಲಾಗಿದೆ.
2020ರ ಜೂನ್ 15ರ ತಡರಾತ್ರಿ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ ಚೀನಾದ 38 ಸೈನಿಕರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದ ದಿ ಕ್ಲಾಕ್ಸನ್ ಪತ್ರಿಕೆ ವಿಶೇಷ ವರದಿ ಪ್ರಕಟಿಸಿದೆ.
ಸಂಘರ್ಷಣೆ ವೇಳೆ ನಾಲ್ವರು ಯೋಧರು ಮಾತ್ರ ಮೃತಪಟ್ಟಿದ್ದಾರೆ ಎಂದು ಘಟನೆ ನಡೆದ ಎಂಟು ತಿಂಗಳ ಬಳಿಕ ಚೀನಾ ಒಪ್ಪಿಕೊಂಡಿತ್ತು. ಅಲ್ಲದೇ ನಾಲ್ವರಿಗೂ ಸೇನಾ ಮೇಡಲ್ ನೀಡಿತ್ತು . ಆದರೆ ಸೈನಿಕರ ಸಾವಿನ ಸಂಖ್ಯೆಯಲ್ಲಿ ಚೀನಾ ಕಳ್ಳಾಟ ಈಗ ಬಯಲಾಗಿದೆ. ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.
ಸಾಮಾಜಿಕ ಜಾಲತಾಣ ಸಂಶೋಧಕರು, ಚೀನಾ ಬ್ಲಾಗರ್ ಗಳು , ಕಮುನಿಸ್ಟ್ ರಾಷ್ಟ್ರದ ಗಡಿ ನಾಗರಿಕರು ಹಾಗೂ ಮಾಧ್ಯಮಗಳ ವರದಿ ಆಧರಿಸಿ ಆಸ್ಟ್ರೇಲಿಯ ಪತ್ರಿಕೆಯು ಚೀನಾ ಸೈನಿಕರ ಸಾವಿನ ಸಂಖ್ಯೆ ಪ್ರಕಟಿಸಿದೆ.
ಇದಕ್ಕೂ ಮೊದಲು ಸಾವಿನ ಕುರಿತ ವರದಿಗಳನ್ನು ಚೀನಾ ಡಿಲೀಟ್ ಮಾಡಿಸಿತ್ತು. ಆದರೆ ಈಗ ವಿದೇಶಿ ಪತ್ರಿಕೆ ವರದಿ ಪ್ರಕಟಿಸಿರುವುದರಿಂದ ಚೀನಾ ಅಸಹಾಯಕವಾದಂತಾಗಿದೆ