ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಶಾಲೆಗಳ ಆರಂಭದ ಕುರಿತು ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿದೆ.
ಶಾಲೆ ಆರಂಭಿಸುವ ನಿರ್ಧಾರವನ್ನು ಆಯಾ ರಾಜ್ಯದ ಸರ್ಕಾರಗಳಿಗೆ ಬಿಟ್ಟಿದೆ.
ಕೊರೊನಾ ಭೀತಿ ಇರುವುದರಿಂದ ಶಾಲೆ ಆರಂಭ ಯೋಚನೆ ಮಾಡಬೇಕಾದ ವಿಷಯವಾಗಿದೆ. ಆದರೂ ಮಕ್ಕಳ ಶೈಕ್ಷಣಿಕ ಏಳಿಗೆಯು ಪ್ರಮುಖವಾಗಿರುವುದರಿಂದ ಮುಂಜಾಗೃತಾ ಕ್ರಮ ತೆಗೆದುಕೊಂಡು ಶಾಲೆ ಆರಂಭಿಸಬಹುದು.
ಆದರೆ ಇದಕ್ಕೆ ಪೋಷಕರ ಅಭಿಪ್ರಾಯವೇ ಮುಖ್ಯ.
ಹಾಗಾಗಿ ಆಯಾ ರಾಜ್ಯಗಳ ಪರಿಸ್ಥಿತಿ, ಪೋಷಕರ ಅಭಿಪ್ರಾಯದಂತೆ ರಾಜ್ಯ ಸರ್ಕಾರಗಳೇ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ.ವಿ.ಕೆ.ಪೌಲ್ ಅವರು ತಿಳಿಸಿದ್ದಾರೆ.
ಶಾಲೆಗಳಲ್ಲಿ ಬೌದ್ಧಿಕ ತರಗತಿಗಳು ಆರಂಭಿಸುವ ಕುರಿತು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತೀರ್ಮಾನ ತೆಗೆದುಕೊಳ್ಳಬಹುದು. ಆಫ್ ಲೈನ್ ಅಥವಾ ಆನ್ ಲೈನ್ ಯಾವುದು ಬೇಕೆಂದು ಮಕ್ಕಳ ಪೋಷಕರ ಒಪ್ಪಿಗೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.