Monday, November 23, 2026
Monday, November 23, 2026

ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು: ಕೆ.ಬಿ. ರವಿಶಂಕರ್

Date:

ವಿದ್ಯಾಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯಲು ಪೋಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪೋಷಕರ ಮಾರ್ಗದರ್ಶನ, ಸಹಕಾರ ಹಾಗೂ ಪ್ರೋತ್ಸಾಹ ನಮಗೆ ಸದಾ ದಾರಿದೀಪವಾಗಿದೆ ಎಂದು ರೋಟರಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಬಿ. ರವಿಶಂಕರ್ ಅಭಿಪ್ರಾಯಪಟ್ಟರು.

ನಗರದ ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗಾಗಿ ಆಯೋಜಿಸಿದ್ದ ಪೋಷಕರ ದಿನಾಚರಣೆ ಹಾಗೂ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ವಿದ್ಯಾಸಂಸ್ಥೆ ಸಮಗ್ರವಾಗಿ ಹಾಗೂ ಪರಿಪೂರ್ಣವಾಗಿ ಅಭಿವೃದ್ಧಿ ಹೊಂದಲು ಅಗತ್ಯವಾದ ಸೌಲಭ್ಯಗಳ ಜೊತೆಗೆ ಪೋಷಕರು ಮತ್ತು ಸಂಸ್ಥೆಯ ನಡುವಿನ ಬಾಂಧವ್ಯವೂ ಗಟ್ಟಿಯಾಗಿರಬೇಕು. ಇಂತಹ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರು ಮತ್ತು ಸಂಸ್ಥೆಯ ನಡುವಿನ ಆತ್ಮೀಯತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಈ ಉದ್ದೇಶದಿಂದ ಆಡಳಿತ ಮಂಡಳಿಯ ವತಿಯಿಂದ ಪೋಷಕರಿಗಾಗಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅವರಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಸಿ. ರಾಮಚಂದ್ರ ಮಾತನಾಡಿ, ಕ್ರೀಡೆಗೆ ವಯಸ್ಸಿನ ಅಂತರವಾಗಲಿ, ಜಾತಿ-ಮತದ ಭೇದವಾಗಲಿ ಇರುವುದಿಲ್ಲ. ಕ್ರೀಡಾ ಚಟುವಟಿಕೆಗಳು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯನ್ನು ವೃದ್ಧಿಸುವುದರ ಜೊತೆಗೆ ಎಲ್ಲರ ಸಂತೋಷವನ್ನು ಇಮ್ಮಡಿಗೊಳಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಪೋಷಕರಿಗಾಗಿ ವಿವಿಧ ಮನರಂಜನಾತ್ಮಕ ಆಟಗಳು, ಬುದ್ಧಿಶಕ್ತಿಗೆ ಸವಾಲೊಡ್ಡುವ ಸ್ಪರ್ಧೆಗಳು ಹಾಗೂ ದೈಹಿಕ ಕಸರತ್ತಿನ ಆಟಗಳನ್ನು ಆಯೋಜಿಸಲಾಗಿತ್ತು. ಪೋಷಕರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಜಿ. ವಿಜಯ್ ಕುಮಾರ್, ಉಪಾಧ್ಯಕ್ಷರಾದ ನಾಗವೇಣಿ, ಎಸ್.ಆರ್., ಸೂರ್ಯನಾರಾಯಣ, ಇತರ ಟ್ರಸ್ಟಿಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕುಮಾರ ವ್ಯಾಸ ..ನಾನು ಕಂಡಂತೆ ಲೇ: ಪ್ರಸಾದ್ ಶ್ರೀವತ್ಸ, ದಾವಣಗೆರೆ

“ಕುಮಾರ ವ್ಯಾಸನು ಹಾಡಿದನೆಂದರೆಕಲಿಯುಗ ದ್ವಾಪರವಾಗುವುದುಭಾರತ ಕಣ್ಣಲಿ ಕುಣಿವುದು! ಮೈಯಲಿಮಿಂಚಿನ ಹೊಳೆ ತುಳುಕಾಡುವುದು!“ ಕುಮಾರವ್ಯಾಸನ...

Klive Editorial ಶಿವಮೊಗ್ಗ ಏರ್ ಪೋರ್ಟ್: ಕೇಂದ್ರಕ್ಕೆ ವಹಿಸಿ ಕೈತೊಳೆದು ಕೊಳ್ಳುವುದೇ ಕ್ಷೇಮ

Klive Editorial ಬಹಳ ಪ್ರಮುಖ ವಿಚಾರವೀಗ ಬಿಸಿಬಿಸಿ ಚರ್ಚೆಯ ಬಿಂದುವಾಗಿದೆ.ಶಿವಮೊಗ್ಗೆಗೆ ವಿಮಾನ...