ಶಿವಮೊಗ್ಗ ನಗರದ ಹೊಸಮನೆ 3ನೇ ಕ್ರಾಸ್ನ ಅಜ್ಜಿ ಮನೆಯಲ್ಲಿ ವಾಸವಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ದೀಕ್ಷಿತಾ ಎಂಬ 23 ವರ್ಷದ ಯುವತಿ ನ.18 ರಂದು ಕಾಣೆಯಾಗಿದ್ದು, ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ.
ಯುವತಿಯು 4.10 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ಕೋಲುಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಕಾಣೆಯಾದ ವೇಳೆ ಕಪ್ಪು ಬಣ್ಣದ ಚೂಡಿದಾರ, ಬಿಳಿ ಜಾಕೇಟ್ ಧರಿಸಿರುತ್ತಾರೆ.
ಈ ಯುವತಿಯ ಬಗ್ಗೆ ಸುಳಿವು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414, 9480803345, 6360185433 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
ಶಿವಮೊಗ್ಗದಿಂದ ಯುವತಿ ನಾಪತ್ತೆ ಪೊಲೀಸ್ ಪ್ರಕಟಣೆ
Date:
