ಶಿವಮೊಗ್ಗದ ದುರ್ಗಿಗುಡಿಯಲ್ಲಿರುವ ಜಿಲ್ಲಾ ಮೀನುಗಾರರ ಸಹಕಾರ ಸಂಘ ನಿಯಮಿತ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಟಿ.ಯು. ಮಲ್ಲೇಶನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಆರ್. ಮಹದೇವಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿ ಆವರಣದಲ್ಲಿ ಚುನಾವಣಾಧಿಕಾರಿಗಳಾದ ಎಂ.ಸಿ. ಮಂಜುನಾಥ ಅವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.
ನಿರ್ದೇಶಕರಾಗಿ ಕೆ.ಎಲ್. ಶ್ರೀಧರ, ಲಕ್ಷ್ಮಣ್ ಕೆ.ಎನ್., ಮಂಜುನಾಥ ನಾಯ್ಕ ಎಂ.ಎಲ್., ಎಸ್.ಡಿ. ಶಿವಾನಾಯ್ಕ, ನಾಗರಾಜ ಎ., ಗಣೇಶ ಆರ್., ತಿಪ್ಪೇಶಪ್ಪ ಎಸ್., ಡಿ.ಕೆ ಪ್ರಹ್ಲಾದ್ ., ರೇಣುಕಾ ಎನ್. ಹಾಗೂ ಕವಿತಾ ಸಿ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸೀತಾನಾಯ್ಕ ಅವರು ತಿಳಿಸಿದ್ದಾರೆ.
