ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವ ಉದ್ದೇಶದಿಂದ ಇ-ಕೆವೈಸಿ ಸಂಪೂರ್ಣಗೊಳಿಸಿರುವ ಐದು ವರ್ಷ, ಒಂದು ವರ್ಷ ಹಾಗೂ ಒಂದು ಬಾರಿಯೂ ಇ- ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವಂತೆ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರು ತಿಳಿಸಿದ್ದಾರೆ.
ಈವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಇ-ಕೆವೈಸಿ ಮಾಡಿಸಿ ಐದು ವರ್ಷ ಪೂರೈಸಿರುವ ಒಟ್ಟು -7,90,815 ಫಲಾನುಭವಿಗಳ ಪೈಕಿ ಈಗಾಗಲೇ 6,71,681 ಫಲಾನುಭವಿಗಳು ಇ-ಕೈವಿಸಿ ಮಾಡಿಸಿದ್ದು, ಬಾಕಿ 1,19.134 ಫಲಾನುಭವಿಗಳ ಪ್ರಕ್ರಿಯೆ ಬಾಕಿ ಇರುತ್ತದೆ. ಅದೇ ರೀತಿ ಇ-ಕೆವೈಸಿ ಮಾಡಿಸಿ ಒಂದು ವರ್ಷ ಪೂರೈಸಿರುವ ಒಟ್ಟು 4,00,444 ಫಲಾನುಭವಿಗಳ ಪೈಕಿ ಈಗಾಗಲೇ 5,574 ಫಲಾನುಭವಿಗಳು ಇ-ಕೆವೈಸಿ ಮಾಡಿಸಿದ್ದು, ಬಾಕಿ 3,94,870 ಫಲಾನುಭವಿಗಳ ಪ್ರಕ್ರಿಯೆ ಬಾಕಿ ಇರುತ್ತದೆ.
ಈವರೆಗೂ ಒಮ್ಮೆ ಯೂ ಇ-ಕೆವೈಸಿ ಮಾಡಿಸದ 19,065 ಫಲಾನುಭವಿಗಳ ಪೈಕಿ ಈಗಾಗಲೇ 3782 ಫಲಾನುಭವಿಗಳು ಇ-ಕೆವೈಸಿ ಮಾಡಿಸಿದ್ದು, ಬಾಕಿ 15,283 ಫಲಾನುಭವಿಗಳ ಪ್ರಕ್ರಿಯೆ ಬಾಕಿ ಇರುತ್ತದೆ.
ಉಳಿದಿರುವ ಎಲ್ಲಾ ಫಲಾನುಭವಿಗಳು ದಿ.30-11-2026 ರೊಳಗೆ ತಮ್ಮ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಅಥವಾ ಅನ್ನ ಸೇವೆ ಮೊಬೈಲ್ ಅಪ್ಲಿಕೇಷನ್ ಮೂಲಕ ನಿಗಧಿತ ಅವಧಿಯೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು. ಈ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಮತ್ತು ಸಹಾಯಕ ನಿರ್ದೇಶಕರು. ಶಿವಮೊಗ್ಗ/ಭದ್ರಾವತಿ ನಗರ ಇವರನ್ನು ಸಂಪರ್ಕಿಸಬಹುದಾಗಿದೆ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ಪಡಿತರ ಚೀಟಿದಾರರ ಇ- ಕೆವೈಸಿ ಕಡ್ಡಾಯ- ಶಿವಮೊಗ್ಗ ಡೀಸಿ ಕಾರ್ಯಾಲಯದ ಪ್ರಕಟಣೆ
Date:
