ಕೇರಳದ ಕಣ್ಣೂರಿನಲ್ಲಿ ನವೆಂಬರ್ 1ರಿಂದ 4ರವರೆಗೆ ನಡೆದ ದಕ್ಷಿಣ ಭಾರತ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಶಿವಮೊಗ್ಗದ ಫಾಜಿಲ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪುರುಷರ ಜೂನಿಯರ್ ವಿಭಾಗದ 59 ಕೆ.ಜಿ. ತೂಕದ ವಿಭಾಗದಲ್ಲಿ ಸ್ಪರ್ಧಿಸಿದ್ದ ಫಾಜಿಲ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ‘ಬೆಸ್ಟ್ ಲಿಫ್ಟರ್ ಆಫ್ ಸೌತ್ ಇಂಡಿಯಾ’ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಫಾಜಿಲ್ ಅವರ ಈ ಸಾಧನೆಯಿಂದ ಶಿವಮೊಗ್ಗ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇವರು ಶಿವಮೊಗ್ಗದ ಫಿಟ್ ಕೇರ್ ಜಿಮ್ನಲ್ಲಿ ರಾಷ್ಟ್ರೀಯ ಕ್ರೀಡಾಪಟು ಹಾಗೂ ತರಬೇತುದಾರ ಸಲೀಂ ಎಂ. ಅವರ ಮಾರ್ಗದರ್ಶನದಲ್ಲಿ ಪವರ್ಲಿಫ್ಟಿಂಗ್ ತರಬೇತಿ ಪಡೆಯುತ್ತಿದ್ದಾರೆ.
