ನಮ್ಮೂರ ಬಳಗದಿಂದ 71ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸುತ್ತಾ, ನಾಡು-ನುಡಿಯ ಅಭಿವೃದ್ಧಿಗಾಗಿ ಮುನ್ನಡೆಯೋಣ. ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸೋಣ ಎಂಬ ಸಂಕಲ್ಪದೊಂದಿಗೆ ಆಚರಿಸಲಾಯಿತು
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರಾದ ಸಿ ರವಿ,ಎಚ್ ಪಾಲಾಕ್ಷಿ, ಸಂಚಾಲಕರುಗಳಾದ ಎಚ್ಪಿ ಗಿರೀಶ್, ಬಿ ಲೋಕೇಶ್,ರಾಜೇಶ್ ಮಂದಾರ, ಎಸ್ ಬಸವರಾಜ್, ವಿನಯ್, ಜಯಪ್ರಕಾಶ್, ಶಿವು, ಕೇಬಲ್ ಲೋಕೇಶ್, ಗಿರೀಶ್ ಶಾಸ್ತ್ರಿ,ಎಂ ರಾಕೇಶ್, ಮನ್ವಿಕ್ ಜೈನ್, ಸಂತೋಷ್ ,ದೇವದಾಸ್ ನಾಯಕ್ ,ಮಿಥುನ್, ಹಾಗೂ ನಾಗರಿಕ ಬಂಧುಗಳು ಉಪಸ್ಥಿತರಿದ್ದರು.
