Tuesday, November 3, 2026
Tuesday, November 3, 2026

ಕೋಣಂದೂರು ರೋಟರಿ ಕ್ಲಬ್‌ನಲ್ಲಿ ಗ್ರಂಥಾಲಯ ಲೋಕಾರ್ಪಣೆ

Date:

ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಣಂದೂರು ರೋಟರಿ ಕ್ಲಬ್, ಕೆ.ವಿ. ಸರೋಜಿನಿ ಗಿರಿರಾಜ್ ಫ್ಯೂಯಲ್ಸ್ ಹಾಗೂ ಕೋಣಂದೂರು ಕನ್ನಡ ಸಾಹಿತ್ಯ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ವಿ. ಸರೋಜಿನಿ ಗಿರಿರಾಜ್ ಫ್ಯೂಯಲ್ಸ್ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಡಾ. ಎಂ.ಎಂ. ಮಂಜುನಾಥ್, ಡಾ. ಆರ್.ಡಿ. ಮಲ್ಲಯ್ಯ, ಕೋಣಂದೂರು ರೋಟರಿ ಕ್ಲಬ್ ಅಧ್ಯಕ್ಷರಾದ ಸಂದೇಶ್ ಕುಮಾರ್ ಹಾಗೂ ಸರೋಜಿನಿ ಗಿರಿರಾಜ್ ಅವರು ಧ್ವಜಾರೋಹಣ ನೆರವೇರಿಸಿದರು.

ನಂತರ ಕೋಣಂದೂರು ರೋಟರಿ ಭವನದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಂ.ಎಂ. ಮಂಜುನಾಥ್ ಅಧ್ಯಪಕರು ಶಿಮೊಗ್ಗ ಡಾ. ಆರ್.ಡಿ. ಮಲ್ಲಯ್ಯ, ಪ್ರಾಂಶುಪಾಲರು, ಶರಾವತಿ ಪ್ರಥಮ ದರ್ಜೆ ಕಾಲೇಜು, ಕೋಣಂದೂರು; ಹಾಗೂ ಡಾ. ಶ್ರೀಪತಿ ಹಳಗುಂದ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕೋಣಂದೂರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ಸಂದೇಶ್ ಕುಮಾರ್ ವಹಿಸಿದ್ದರು. ಜೋನಲ್ ಲೆಫ್ಟಿನೆಂಟ್ ವಿಷ್ಣುಮೂರ್ತಿ, ಕೆ.ವಿ. ಸರೋಜಿನಿ ಗಿರಿರಾಜ್ ಫ್ಯೂಯಲ್ಸ್ ಮಾಲೀಕರಾದ ಸರೋಜಿನಿ ಗಿರಿರಾಜ್ ಗೌಡ, ಜೆಡ್.ಎಲ್. ವಿಷ್ಣುಮೂರ್ತಿ, ಎಸ್.ಎಂ. ರೋಟರಿ ಕ್ಲಬ್ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕೋಣಂದೂರು ರೋಟರಿ ಭವನದಲ್ಲಿ ನೂತನ ಗ್ರಂಥಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು. ರೋಟರಿ ಸದಸ್ಯರಾದ ಎಚ್.ಜಿ. ರತೀಶ್ ಅವರ ವಿಶೇಷ ಕಲ್ಪನೆ ಮತ್ತು ಚಿಂತನೆಯ ಫಲವಾಗಿ ಗ್ರಂಥಾಲಯದ ಪರಿಕಲ್ಪನೆ ಸಾಕಾರಗೊಂಡಿತು.

ಸಭಾ ಕಾರ್ಯಕ್ರಮದಲ್ಲಿ ಮೂವರು ಗಣ್ಯ ಅತಿಥಿಗಳು ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಹಾಗೂ ಕನ್ನಡದ ಮಹತ್ವದ ಕುರಿತು ಸಂಕ್ಷಿಪ್ತವಾಗಿ ಮತ್ತು ಅರ್ಥಪೂರ್ಣವಾಗಿ ಮಾತನಾಡಿದರು. ಗ್ರಂಥಾಲಯವು ಜ್ಞಾನಾರ್ಜನೆಗೆ ಹಾಗೂ ಓದುವ ಹವ್ಯಾಸವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಸದಸ್ಯರಾದ ಸದಾಶಿವ, ಎಂ.ಟಿ. ಪುಟ್ಟಪ್ಪ, ಧರ್ಮನಾಯ್ಕ, ದಿವಾಕರ್, ಮುರಳೀಧರ್, ರಾಶೇಕರ್, ಸುರೇಶ್, ಸುಬ್ಬಣ್ಣ, ಸುರೇಂದ್ರ, ಗಿರೀಶ್, ಸುರೇಶ್ ಹೆಚ್.ಎಂ., ವೀರೇಂದ್ರ, ರಂಜನ್, ದರ್ಶನ್ ಬಿ.ಟಿ., ಈಶ್ವರ್ ನಾಯ್ಕ್ ಸೇರಿದಂತೆ ಹಲವಾರು ರೋಟರಿ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ 3 ಜನ ಅತಿಥಿ ಯವರಿಗೆ ಸನ್ಮಾನಿಸಲಾಯಿತು ಹಾಗೂ ರೋಟರಿ ನಿವೇಶನ ದಾನಿಯವರಧ ಸರೋಜಿನಿ ಗಿರಿರಾಜ್ ಗೌಡ ಇವರಿಗೆ ಸನ್ಮಾನಿಸಲಾಯಿತು.

ಕನ್ನಡ ರಾಜ್ಯೋತ್ಸವದ ಸಂಭ್ರಮದ ಜೊತೆಗೆ ಗ್ರಂಥಾಲಯ ಲೋಕಾರ್ಪಣೆಯ ಮೂಲಕ ಜ್ಞಾನ ಮತ್ತು ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹ ನೀಡಿದ ಈ ಕಾರ್ಯಕ್ರಮವು ಕೋಣಂದೂರು ಪಟ್ಟಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ರೋಟರಿ ಕ್ಲಬ್ ಅಧ್ಯಕ್ಷರು ಆಧಾ ರೋ ಸಂದೇಶ್ ಕುಮಾರ್ ಎಲರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...