S. N. Channabasappa ಚುನಾವಣೆಗಳಲ್ಲಿ ಸತತವಾಗಿ ಧೂಳೀಪಟವಾಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತನ್ನ ಭ್ರಷ್ಟಾಚಾರ, ಜನವಿರೋಧಿ ನೀತಿಗಳು ಮತ್ತು ಆಡಳಿತ ವೈಫಲ್ಯಗಳನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲ. ಸೋತಾಗಲೆಲ್ಲಾ ಇವಿಎಂ (EVM) ಮೇಲೆ ಗೂಬೆ ಕೂರಿಸಿ ಅಳುತ್ತಿದ್ದ ಕಾಂಗ್ರೆಸ್ಸಿಗರಿಗೆ ಈಗ ಜನಾದೇಶವೇ ಚಪಾತಿ ತಟ್ಟಿದಂತೆ ಬಾರಿಸಿದೆ. ಇವಿಎಂ ಬದಲಿಗೆ ನೀವು ಬಯಸಿದಂತೆ ಬ್ಯಾಲೆಟ್ ಪೇಪರ್‌ನಲ್ಲೇ ಚುನಾವಣೆ ನಡೆಸಿದರೂ, ಮತದಾರರ ಪಟ್ಟಿ ಪರಿಷ್ಕರಣೆಯ (SIR) ಪ್ರಕ್ರಿಯೆಯೇ ನಡೆಯದಿದ್ದರೂ ಜನತೆ ನಿಮ್ಮನ್ನು ಕಸದಬುಟ್ಟಿಗೆ ಎಸೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.
ಗೆದ್ದರೆ ತಮ್ಮ ಮಹಾನ್ ನಾಯಕತ್ವದ ಸಾಧನೆ, ಸೋತರೆ ಇವಿಎಂ ಮಷಿನ್‌ನಲ್ಲಿ ದೋಷ ಎನ್ನುವ ಇಬ್ಬಗೆಯ, ನಿರ್ಲಜ್ಜ ವರಸೆಯನ್ನು ಕಾಂಗ್ರೆಸ್ ಮೊದಲಿನಿಂದಲೂ ಮೈಗೂಡಿಸಿಕೊಂಡು ಬಂದಿದೆ. ಬ್ಯಾಲೆಟ್ ಪೇಪರ್ ಇರಲಿ ಅಥವಾ ಬೇರಾವುದೇ ಚುನಾವಣಾ ಪದ್ಧತಿಯೇ ಇರಲಿ; ಮತಗಟ್ಟೆಯಲ್ಲಿ ನಿಲ್ಲುವ ಮತದಾರನಿಗೆ ಕಾಂಗ್ರೆಸ್‌ನ ತುಷ್ಟೀಕರಣ, ಲೂಟಿಕೋರ ಆಡಳಿತ ಹಾಗೂ ಹಿಂದೂ ವಿರೋಧಿ ಮನಸ್ಥಿತಿಯ ಬಗ್ಗೆ ಸ್ಪಷ್ಟ ಅರಿವಿದೆ. ವ್ಯವಸ್ಥೆಯ ಮೇಲೆ ಅನುಮಾನ ಹುಟ್ಟಿಸಿ, ಸಾಂವಿಧಾನಿಕ ಸಂಸ್ಥೆಗಳನ್ನು ಹೀಯಾಳಿಸುವ ಕಾಂಗ್ರೆಸ್ಸಿಗರ ಕುತಂತ್ರಗಳನ್ನು ರಾಜ್ಯದ ಸ್ವಾಭಿಮಾನಿ ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.
S. N. Channabasappa ಎಸ್ಐಆರ್ (SIR) ಪ್ರಕ್ರಿಯೆಯ ಸಬೂಬು ಹೇಳಿಕೊಂಡು ಮತದಾರರ ದಿಕ್ಕುತಪ್ಪಿಸಲು ಹೊರಟಿರುವ ಕಾಂಗ್ರೆಸ್ ನ ಸೋ ಕಾಲ್ಡ್ ನಾಯಕ ರಾಹುಲ್ ಗಾಂಧಿ ನಿಜವಾದ ಆತ್ಮಾವಲೋಕನದ ಕನಿಷ್ಠ ಪ್ರಜ್ಞೆಯೂ ಇಲ್ಲ. ನಿಮ್ಮ ದುರಾಡಳಿತ, ಸುಳ್ಳು ಗ್ಯಾರಂಟಿಗಳ ವಂಚನೆ ಹಾಗೂ ದೇಶವಿರೋಧಿ ಮನಸ್ಥಿತಿಗೆ ದೇಶದ ಜನತೆ ಈಗಾಗಲೇ ಶಾಶ್ವತ ಗೇಟ್‌ಪಾಸ್ ನೀಡಿದ್ದಾರೆ. ನೀವು ಯಂತ್ರವನ್ನು ದೂರಿದರೂ, ಕಾಗದವನ್ನು ತಂದರೂ ಮತದಾರರ ತೀರ್ಪು ಒಂದೇ—ಅದು ಕಾಂಗ್ರೆಸ್ ಮುಕ್ತ ಭಾರತ ಮತ್ತು ಸಮರ್ಥ ರಾಷ್ಟ್ರ ನಿರ್ಮಾಣ!
