Sunday, November 1, 2026
Sunday, November 1, 2026

ಕೃಷಿ ಮೇಳದಲ್ಲಿ ಮತ್ಸ್ಯ ಕೃಷಿ, ಸಾವಯವ ಕೃಷಿ, ಜಾನುವಾರು ಪ್ರದರ್ಶನ ಸೇರಿದಂತೆ ಹಲವು ವಿಶೇಷ ಆಕರ್ಷಣೆಗಳು

Date:

ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ಈ ಬಾರಿ ರೈತರು, ಕೃಷಿ ಆಸಕ್ತರು ಹಾಗೂ ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ವಿಶೇಷ ಪ್ರದರ್ಶನಗಳು, ಪ್ರಾತ್ಯಕ್ಷಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮೇಳದಲ್ಲಿ ಬರ ನಿರ್ವಹಣೆ, ಮತ್ಸ್ಯ ಕೃಷಿ, ಅಡಿಕೆ ಕೃಷಿ, ಸಾವಯವ ಮತ್ತು ನೈಸರ್ಗಿಕ ಕೃಷಿ ಸೇರಿದಂತೆ ವಿವಿಧ ಕೃಷಿ ಸಂಬಂಧಿತ ವಿಭಾಗಗಳ ಪ್ರದರ್ಶನ ಇರಲಿದೆ. ಸಿಹಿನೀರು ಮತ್ತು ಉಪ್ಪುನೀರಿನ ಏಡಿ ಸಾಕಣೆ, ಮುತ್ತು ಕೃಷಿ, ಮೀನುಗಾರಿಕೆ, ಹೈನುಗಾರಿಕೆ, ಮೇಕೆ ಮತ್ತು ಕುರಿ ಸಾಕಣೆ ಹಾಗೂ ಇತರ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಕಣ್ಮರೆಯಾಗುತ್ತಿರುವ, ಹಿಂದೆ ಕಬ್ಬಿನ ಆಲೆಮನೆಗಳಲ್ಲಿ ಜೋನಿ ಬೆಲ್ಲ ತಯಾರಿಸಲು ಬಳಸುತ್ತಿದ್ದ ಕಬ್ಬಿನ ಗಾಣದ ಅಪರೂಪದ ‘ಕೋಣದ ಕಣ್ಣಿ’ಯನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

ಜಾನುವಾರುಗಳ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ವಿವಿಧ ತಳಿಗಳ ಹಸು, ಎಮ್ಮೆ, ಕುರಿ, ಆಡು ಹಾಗೂ ಮುದ್ದು ಪ್ರಾಣಿಗಳ ಪ್ರದರ್ಶನ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ವಲಯಮಟ್ಟದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ, ಉತ್ತಮ ಕುರಿ ಮತ್ತು ಆಡುಗಳ ಸ್ಪರ್ಧೆ, ಉತ್ತಮ ಹಸು ಮತ್ತು ಎಮ್ಮೆ ತಳಿಗಳ ಸ್ಪರ್ಧೆ ಹಾಗೂ ಮರೆತುಹೋದ ಸಿರಿಧಾನ್ಯಗಳ ಪಾಕ ಸ್ಪರ್ಧೆ ನಡೆಯಲಿದೆ.

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ‘ಮತ್ಸ್ಯಾಂಗಣ’ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ಬೆಳೆಗಳಿಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವಿಶ್ವವಿದ್ಯಾಲಯದ ತಜ್ಞ ವಿಜ್ಞಾನಿಗಳಿಂದ ಸಲಹೆ ಮತ್ತು ಮಾರ್ಗದರ್ಶನ ನೀಡುವ ಸಲಹಾ ಕೇಂದ್ರವೂ ಕಾರ್ಯನಿರ್ವಹಿಸಲಿದೆ.

ಮಣ್ಣಿನ ತೇವಾಂಶ ಸಂರಕ್ಷಣೆ, ಸಾವಯವ ಇಂಗಾಲ ಹೆಚ್ಚಳ ಹಾಗೂ ಬೆಳೆ ಇಳುವರಿ ವೃದ್ಧಿಗೆ ಬಯೋಚಾರ್ ಬಳಕೆಯ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ, ವಿವಿಧ ಬೆಳೆಗಳಲ್ಲಿ ಬೀಜಾಮೃತ, ಜೀವಾಮೃತ, ಜೈವಿಕ ಗೊಬ್ಬರ, ಜೈವಿಕ ನಿಯಂತ್ರಕಗಳ ಬಳಕೆ ಹಾಗೂ ಬೀಜೋಪಚಾರದ ಕುರಿತು ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತದೆ.

ಸಾವಯವ ಸಂಶೋಧನಾ ಕೇಂದ್ರದ ವತಿಯಿಂದ ಕಣ್ಮರೆಯಾಗುತ್ತಿರುವ ಸುಮಾರು 240 ದೇಶಿ ಭತ್ತದ ತಳಿಗಳನ್ನು ಸಂರಕ್ಷಿಸಿ, ಅವುಗಳ ವೈಜ್ಞಾನಿಕ ಗುಣಲಕ್ಷಣಗಳ ದಾಖಲಾತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿದೇಶಿ ಮತ್ತು ದೇಶಿ ತಳಿಗಳ ಹೂವು ಹಾಗೂ ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ, ಮಕ್ಕಳಿಗಾಗಿ ಕೃಷಿ ಯಾನ ಮತ್ತು ಕೃಷಿ ಪ್ರವಾಸೋದ್ಯಮ, ಜೇನು ವನ ಸೇರಿದಂತೆ ಕೃಷಿ ಸಂಬಂಧಿತ ವಿವಿಧ ತರಬೇತಿಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಆರು ಜಿಲ್ಲೆಗಳ ಜನಪದ ಮತ್ತು ಸಾಂಸ್ಕೃತಿಕ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಮೇಳದಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಲೆನಾಡಿನ ಜನಪದ ಸಂಸ್ಕೃತಿಯ ಪ್ರಮುಖ ಭಾಗವಾಗಿರುವ ಹೋರಿಹಬ್ಬದ ಪರಂಪರೆಯನ್ನು ಪರಿಚಯಿಸುವ ಸಲುವಾಗಿ ಶಿವಮೊಗ್ಗದ ನಂದಿ, ಅಬ್ಬಲಗೆರೆಯ ಅಜ್ಜಯ್ಯ ಹಾಗೂ ಅಬ್ಬಲಗೆರೆ ಸರ್ಕಾರ್ ಹೋರಿಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಈ ಎಲ್ಲ ವಿಶೇಷ ಆಕರ್ಷಣೆಗಳು ಕೃಷಿ ಮೇಳಕ್ಕೆ ರೈತರು, ಕೃಷಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...

Karnataka Media Academy ಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ...