Friday, October 30, 2026
Friday, October 30, 2026

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಆರ್ಥಿಕ ಯೋಜನೆಗಳಿಗೆ ಅರ್ಜಿ ಆಹ್ವಾನ

Date:

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ವಿವಿಧ ಯೋಜನೆಗಳಡಿ ಪ್ರವರ್ಗ-ಎ ಆದಿಜಾಂಬವ ಅಭಿವೃದ್ಧಿ ನಿಗಮ, ಪ್ರವರ್ಗ-ಬಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಪ್ರವರ್ಗಗಳ ಎ ಮತ್ತು ಬಿ ಉಪಜಾತಿಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ನವೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, 2023-24, 2024-25 ಮತ್ತು 2025-26ನೇ ಸಾಲಿನಲ್ಲಿ ಆನ್‌ಲೈನ್ ಮುಖಾಂತರ ಈಗಾಗಲೇ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ನಿಗಮದ ವಿವಿಧ ಆರ್ಥಿಕ ಯೋಜನೆಗಳಾದ ನೇರಸಾಲ ಯೋಜನೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಫಾಸ್ಟ್ ಫುಡ್ ಟ್ರಕ್ ಟ್ರೇಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್, ಮೈಕ್ರೋಕ್ರೆಡಿಟ್ ಪ್ರೇರಣಾ ಯೋಜನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಗಳಿಗೆ ಶಿವಮೊಗ್ಗ1, ಗ್ರಾಮ1, ಕರ್ನಾಟಕ1 ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://sevaone.karnataka.gov.in/services/ ಅಥವಾ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ಪತ್ರಿಕಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ರಾಜ್ಯೋತ್ಸವ – ನಮ್ಮ ಹೆಮ್ಮೆಯ ಹಬ್ಬ

Kannada Rajyotsava ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ರಾಜ್ಯೋತ್ಸವವು ಹೆಮ್ಮೆ, ಸ್ವಾಭಿಮಾನ ಮತ್ತು...

Kuvempu University ಕುವೆಂಪು ವಿವಿ ಸಂಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನ

Kuvempu University ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ...

Radio Shivamogga ಕನ್ನಡ ರಾಜ್ಯೋತ್ಸವಕ್ಕೆ ರೇಡಿಯೋ ಶಿವಮೊಗ್ಗ 90.8 ಎಫ್.ಎಂ.ನಿಂದ 24 ಗಂಟೆಗಳ ನಿರಂತರ ನೇರಪ್ರಸಾರ

‘ರೇಡಿಯೋ ಶಿವಮೊಗ್ಗ ೯೦.೮ಎಫ್.ಎಂ. ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನ್ನಡ...

Breaking News ಪತಿ ಮತ್ತು ಪತಿಮನೆಯವರಿಂದ ಕಿರುಕುಳ: ಗೃಹಿಣಿ ಆತ್ಮಹತ್ಯೆ.

Breaking News ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ವಿಷ ಸೇವಿಸಿ...