S. N. Channabasappa “ಮಾತೃಭೂಮಿಯ ರಕ್ಷಣೆಗಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ಇಡೀ ದೇಶದಲ್ಲೇ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಿಡಿ ಹೊತ್ತಿಸಿದ ಕೀರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಸಲ್ಲುತ್ತದೆ. ಅವರ ಸ್ವಾಭಿಮಾನ ಮತ್ತು ಶೌರ್ಯದ ಗುಣಗಳು ಪ್ರತಿಯೊಬ್ಬರಿಗೂ ನಿತ್ಯ ಪ್ರೇರಣಾದಾಯಕ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
S. N. Channabasappa “ದೇಶದಲ್ಲಿ ಹೆಣ್ಣುಮಕ್ಕಳು ಅಬಲೆಯರಲ್ಲ, ಸಬಲೆಯರು ಎಂಬುದನ್ನು ಶತಮಾನಗಳ ಹಿಂದೆಯೇ ರಣರಂಗದಲ್ಲಿ ಸಾಬೀತುಪಡಿಸಿದ ಧೀರ ಮಹಿಳೆ ಚೆನ್ನಮ್ಮ. ಅವರ ತ್ಯಾಗ, ಬಲಿದಾನ ಮತ್ತು ತಾಯ್ನಾಡಿನ ಮೇಲಿನ ಅಪ್ರತಿಮ ಭಕ್ತಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದಿನ ಯುವಜನತೆ ಇತಿಹಾಸದ ಇಂತಹ ಮಹಾನ್ ದೇಶಭಕ್ತರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಶಾಸಕರು ಕರೆ ನೀಡಿದರು.
