Wednesday, October 21, 2026
Wednesday, October 21, 2026

ಸೊರಬದಲ್ಲಿ ದಸರೆಯ ಅಂಗವಾಗಿ ನಡೆದ ಯಕ್ಷಗಾನ ಪ್ರಸಂಗ. ಜನಮನ ಗೆದ್ದ “ಕವಿರತ್ನ ಕಾಳಿದಾಸ”

Date:

ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ತಾಲೂಕು ಆಡಳಿತ ಹಾಗೂ ಪುರಸಭೆ ಸಹಕಾರದೊಂದಿಗೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಹಿತ್ತಲಗದ್ದೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ನಡೆದ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರಸಂಗ ಪ್ರೇಕ್ಷಕರ ಮನ ಗೆದ್ದಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಾಗರಾಜ ಹೆಗಡೆ ಮಗವಳ್ಳಿ, ಮದ್ದಳೆಯಲ್ಲಿ ಶರತ್ ಭಟ್ ಹೆಗ್ಗೋಡು, ಚಂಡೆಯಲ್ಲಿ ಗಣೇಶ್ ಭಟ್ ಸಭಿಕರಿಂದ ಮೆಚ್ಚುಗೆಗೆ ಪಾತ್ರರಾದರು. ಮುಮ್ಮಳದಲ್ಲಿ ಕಾಳನಾಗಿ (ಕಾಳಿದಾಸ) ಪಾತ್ರದಲ್ಲಿ ವೆಂಕಟರಮಣ ಹೆಗಡೆ ಕಾನ್ಸೂರು, ಕುಮುದಪ್ರಿಯವಾಗಿ ಉಮೇಶ್ ಹೆಗಡೆ ಉಮ್ಮಚಗಿ, ವೀರವರ್ಮನಾಗಿ ಪ್ರಶಾಂತ್ ಹೆಗಡೆ ಉಮ್ಮಚಗಿ, ಕಲಾಧರನಾಗಿ ಪ್ರಣವ್ ಭಟ್ ಸಿದ್ದಾಪುರ, ವಿದ್ಯಾಧರೆಯಾಗಿ ನಾಗರಾಜ ಖಾರ್ವಿ ಕುಂದಾಪುರ, ಬಾಲಗೋಪಾಲನಾಗಿ ಕುಶ ಕಾನ್ಸೂರು, ದೇವಿಯಾಗಿ ಕೌಶಲ್ಯ ಕಾನ್ಸೂರು ಅವರ ಮನೋಜ್ಞ ಅಭಿನಯ ಕಲಾಪ್ರೇಕ್ಷಕರ ಮನಸೂರೆಗೊಂಡಿತು.
ಕಾಳನ ಪಾತ್ರದಲ್ಲಿ ಹಾಸ್ಯ ಸಕಾಲಿಕವಾಗಿತ್ತು. ಕಾಳನು ವಿದ್ಯಾಧರೆಯ ವಿವಾಹದ ತರುವಾಯ ದೇವಿಯಿಂದ ಕೃಪೆ ಪಡೆದು ಕಾಳಿದಾಸನಾಗಿ ನಿರ್ವಹಿಸಿದ ಪಾತ್ರ ನೆರೆದವರ ಮಂತ್ರಮುಗ್ದರನ್ನಾಗಿತು. ಶೀರ್ಷಿಕೆಗೆ ತಕ್ಕಂತೆ ಅರ್ಥವನ್ನು ರಂಗಸಜ್ಜಿಕೆಯಲ್ಲಿ ಮೂಡಿದ ಯಕ್ಷಗಾನ ಅಪೂರ್ವ ಸಾಂಸ್ಕೃತಿಕ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕಾಲಮಿತಿಯ ಸವಾಲಿನ ನಡುವೆ ಯಕ್ಷಗಾನದ ಪಾರಂಪರಿಕ ರಂಗನಡೆಯನ್ನು ಉಳಿಸಿ ಬೆಳೆಸುತ್ತಿರುವುದು ಸ್ವಾಗತಾರ್ಹವಾಗಿದೆ. ಗಾಯನದ ಏರಿಳಿತಗಳು ಹಾಗೂ ಹಿಮ್ಮೇಳ ಕಲಾವಿದರ ನಾದವೈಭವವು ಪ್ರಸಂಗಕ್ಕೆ ಮತ್ತಷ್ಟು ಮೆರಗು ನೀಡಿತು. ರಂಗದಲ್ಲಿ ಹೆಜ್ಜೆಗಾರಿಕೆ, ಶರೀರಭಾಷೆ ಮೂಲಕ ಜೀವಂತಿಕೆ ಮೂಡಿಸಿದ ಕವಿರತ್ನ ಕಾಳಿದಾಸ ವೀಕ್ಷಕರ ಮನದಾಳದಲ್ಲಿ ಉಳಿಯುವಂತೆ ಮಾಡಿತು.
ಇನ್ನು ಮೇಳದ ಸಂಯೋಜಕರಾಗಿ ವಾಸುದೇವ ನಾಯ್ಕ್ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು. ಯಕ್ಷಗಾನಕ್ಕೆ ರಾಷ್ಟçಪತಿ ಪುರಸ್ಕöÈತ ವೈದ್ಯ ಹಾಗೂ ಯಕ್ಷಗಾನ ಕಲಾವಿದರಾದ ಡಾ. ಎಂ.ಕೆ. ಭಟ್ ಪುಷ್ಪಗುಚ್ಚ ನೀಡುವ ಮೂಲಕ ಚಾಲನೆ ನೀಡಿದರು. ಯಕ್ಷಗಾನದ ತರುವಾಯ ದಸರಾ ಉತ್ಸವ ಸಮಿತಿಯಿಂದ ಕಲಾವಿದರನ್ನು ಗೌರವಿಸಲಾಯಿತು.
ಫೋಟೋ
೨೧ ಸೊರಬ ೦೩: ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಅವರಣದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಹಿತ್ತಲಗದ್ದೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ನಡೆದ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರಸಂಗ ಜರುಗಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...

Klive Special Article ಶರನ್ನರಾತ್ರಿ…-೯.ಸಿದ್ಧಿಧಾತ್ರಿ ದೇವಿ ಆರಾಧನೆ. ಲೇ: ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article "ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ...