ಪಿ.ಸಿ.ಡಿ.ಎ ಪ್ರತಿನಿಧಿಗಳಿಂದ ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರ ನಾರಿಯರುಗಳಿಗಾಗಿ “ಸ್ಪರ್ಶ್ ಸಹಾಯತಾ ಶಿಬಿರ” ವನ್ನು ಮಲ್ಟಿ ಪರ್ಪಸ್ ಹಾಲ್, ಪಿ.ಸಿ.ಡಿ.ಎ, ಬೆಂಗಳೂರು ಇಲ್ಲಿ ದಿನಾಂಕ 04/11/2026 ಮತ್ತು 05/11/ 2026 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ಆಯೋಜಿಸಲಾಗಿದೆ.
ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರ ನಾರಿಯರು, ಸ್ಪರ್ಶ್ ಸಂಬಂಧಿಸಿದಂತೆ ಹಾಗೂ ಜೀವನ ಪ್ರಮಾಣ ಪತ್ರ ಸಲ್ಲಿಸುವ ಕುರಿತಾದ ಸೂಕ್ತ ಸಲಹೆ ಮತ್ತು ಪರಿಹಾರಕ್ಕಾಗಿ ಸಂಬಂಧಿತ ಎಲ್ಲಾ ಪೂರಕ ದಾಖಲೆಗಳೊಂದಿಗೆ ಭಾಗವಹಿಸಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ದೂರವಾಣಿ ಸಂಖ್ಯೆ 08182-220925 ಅಥವಾ ಇಮೇಲ್ : soldiers_shimoga@rediffmail.com ಮುಖಾಂತರ ಅ. 30 ರೊಳಗಾಗಿ ನೋಂದಾಯಿಸಿಕೊಳ್ಳಬೇಕೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ(ಪ್ರ) ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.
ಮಾಜಿ ಯೋಧರು ಮತ್ತು ಅವಲಂಬಿತರಿಗೆ “ಸ್ಪರ್ಶ್ ಸಹಾಯತಾ ಶಿಬಿರ”
Date:
