Friday, October 16, 2026
Friday, October 16, 2026

ಪ್ರಸ್ತುತ ಸೂರ್ಯ ತನ್ನ ಅರ್ಧದಷ್ಟು ವಯಸ್ಸು ಕಳೆದಿದ್ದಾನೆ.ಇನ್ನೂಐದು ಶತಕೋಟಿ ವರ್ಷಗಳ ಕಾಲ ಸೂರ್ಯನ ಸ್ವರೂಪ ಮುಂದುವರೆಯಲಿದೆ- ಪ್ರೊ.ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ

Date:

ನಕ್ಷತ್ರಗಳ ಪ್ರಪಂಚವು ಅನೇಕ ವಿಚಿತ್ರಗಳು, ರಹಸ್ಯಗಳು ಹಾಗೂ ಕುತೂಹಲಕಾರಿ ಸಂಗತಿಗಳಿಂದ ಕೂಡಿದೆ. ನಕ್ಷತ್ರಗಳ ವರ್ತನೆ, ಅವುಗಳ ಹುಟ್ಟು, ಬೆಳವಣಿಗೆ ಮತ್ತು ಅಂತ್ಯವು ವಿಜ್ಞಾನದ ದೃಷ್ಟಿಯಿಂದ ಅತ್ಯಂತ ಆಸಕ್ತಿದಾಯಕವಾಗಿವೆ ಎಂದು ಶಿವಮೊಗ್ಗದ ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಚ್. ಆರ್. ಶಂಕರನಾರಾಯಣ ಶಾಸ್ತ್ರಿ ತಿಳಿಸಿದರು.

ನಗರದ ರಾಜೇಂದ್ರ ನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಲಾಗಿದ್ದ ವಾರದ ಸಭೆಯಲ್ಲಿ “ನಕ್ಷತ್ರಗಳ ಗುಟ್ಟು” ವಿಷಯದ ಕುರಿತು ಮಾತನಾಡಿದ ಅವರು, ನಕ್ಷತ್ರಗಳ ವೈಜ್ಞಾನಿಕ ಸಂಗತಿಗಳು ಹಾಗೂ ಅವುಗಳ ಹಿಂದಿರುವ ರಹಸ್ಯಗಳ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಾಚೀನ ಕಾಲದಿಂದಲೂ ನಕ್ಷತ್ರಗಳು ಕಥೆ ಹೇಳುವಿಕೆ, ಕೃಷಿ ಋತುಗಳ ಬದಲಾವಣೆ ಗುರುತಿಸುವುದು ಹಾಗೂ ಆಕಾಶದ ಮೂಲಕ ದಿಕ್ಕುಗಳನ್ನು ಪತ್ತೆಹಚ್ಚಲು ಪ್ರಮುಖ ಸಾಧನಗಳಾಗಿದ್ದವು ಎಂದರು.

ನಕ್ಷತ್ರಗಳು ಆಧುನಿಕ ಖಗೋಳ ಭೌತಶಾಸ್ತ್ರವು ಇಂದಿಗೂ ಅಧ್ಯಯನ ಮಾಡುತ್ತಿರುವ ಅನೇಕ ಭೌತಿಕ ಮತ್ತು ಬ್ರಹ್ಮಾಂಡದ ರಹಸ್ಯಗಳನ್ನು ಒಳಗೊಂಡಿವೆ. ಗುರುತ್ವಾಕರ್ಷಣೆಯ ಪರಿಣಾಮವಾಗಿ ನಕ್ಷತ್ರಗಳ ಒಳಭಾಗದಲ್ಲಿ ಅಪಾರ ಒತ್ತಡ ಮತ್ತು ಉಷ್ಣತೆ ಉಂಟಾಗುತ್ತದೆ. ಇದರಿಂದ ಹೈಡ್ರೋಜನ್ ಪರಮಾಣುಗಳು ಪರಸ್ಪರ ಬೆಸೆದು ಹೀಲಿಯಂ ಆಗುವ ಪರಮಾಣು ಸಮ್ಮಿಳನ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುವುದರಿಂದ ನಕ್ಷತ್ರಗಳು ಬೆಳಗುತ್ತವೆ ಎಂದು ವಿವರಿಸಿದರು.

ಕಪ್ಪು ಕುಳಿಗಳು ಬಾಹ್ಯಾಕಾಶದಲ್ಲಿರುವ ಅತ್ಯಂತ ಪ್ರಬಲ ಗುರುತ್ವಾಕರ್ಷಣೆಯ ಪ್ರದೇಶಗಳಾಗಿದ್ದು, ಅವುಗಳ ಗಡಿಯೊಳಗೆ ಪ್ರವೇಶಿಸಿದ ಬೆಳಕು ಕೂಡ ಹೊರಬರಲು ಸಾಧ್ಯವಿಲ್ಲ. ನಮ್ಮ ಸೌರವ್ಯೂಹದ ಕೇಂದ್ರದಲ್ಲಿರುವ ಸೂರ್ಯನು ಬಿಸಿ ಪ್ಲಾಸ್ಮಾದಿಂದ ಕೂಡಿದ ಬೃಹತ್ ನಕ್ಷತ್ರವಾಗಿದೆ. ಸೂರ್ಯನ ಬೆಳಕು ಮತ್ತು ಶಾಖವಿಲ್ಲದೆ ಭೂಮಿಯ ಮೇಲಿನ ಜೀವಜಗತ್ತು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಸುಮಾರು 4.6 ಶತಕೋಟಿ ವರ್ಷಗಳಷ್ಟು ವಯಸ್ಸಾಗಿರುವ ಸೂರ್ಯನು ತನ್ನ ಜೀವನದ ಮಧ್ಯದ ಹಂತದಲ್ಲಿದ್ದು, ಇನ್ನೂ ಸುಮಾರು ಐದು ಶತಕೋಟಿ ವರ್ಷಗಳ ಕಾಲ ತನ್ನ ಪ್ರಸ್ತುತ ಸ್ವರೂಪದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್‌ನ ಅಧ್ಯಕ್ಷ ಶೇಷಗಿರಿ ಮಾತನಾಡಿ, ನಕ್ಷತ್ರಗಳ ಕುರಿತು ಜಗತ್ತಿನ ವಿವಿಧ ನಾಗರಿಕತೆಗಳಲ್ಲಿ ಅನೇಕ ಪುರಾಣಗಳು ಮತ್ತು ಐತಿಹ್ಯಗಳು ರೂಪುಗೊಂಡಿವೆ. ಇವು ಋತುಮಾನಗಳ ಬದಲಾವಣೆ, ಹವಾಮಾನ ಹಾಗೂ ಬ್ರಹ್ಮಾಂಡದ ಸೃಷ್ಟಿಯ ಕುರಿತು ಜನರ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತವೆ. ಸಾವಿರಾರು ವರ್ಷಗಳಿಂದ ವಿವಿಧ ಸಂಸ್ಕೃತಿಗಳು ನಕ್ಷತ್ರಗಳನ್ನು ಕಥೆಗಳ ಮೂಲಕ ಅರ್ಥೈಸಿಕೊಂಡಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್‌ನ ಕಾರ್ಯದರ್ಶಿ ಆರ್. ಮನೋಹರ್, ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ. ವಿಜಯ್ ಕುಮಾರ್, ಮಾಜಿ ಅಧ್ಯಕ್ಷರಾದ ಹೆಚ್.ಬಿ. ಗಣೇಶ್, ಎಸ್. ಶ್ರೀಕಾಂತ್, ಎನ್.ಹೆಚ್. ಅರುಣ್ ದೀಕ್ಷಿತ್, ಆದಿಮೂರ್ತಿ, ಕೃಷ್ಣಮೂರ್ತಿ, ನಿಕಟಪೂರ್ವ ಅಧ್ಯಕ್ಷರಾದ ಡಿ. ಕಿಶೋರ್ ಕುಮಾರ್, ಬಿ.ಆರ್. ಧನಂಜಯ್, ರವಿಪ್ರಕಾಶ್ ಕಾಳಾಚಾರ್, ಕೇಶವಪ್ಪ, ಹೆಚ್. ಎಸ್. ಸೂರ್ಯನಾರಾಯಣ ಹೊಸತೋಟ, ರಮೇಶ್ ಭಟ್, ಡಾ. ಮಹದೇವಸ್ವಾಮಿ, ಕೆ.ಟಿ. ಗುರುಮೂರ್ತಿ ಸೇರಿದಂತೆ ಅನೇಕ ಪದಾಧಿಕಾರಿಗಳು, ಗೌರವಾನ್ವಿತ ರೋಟರಿ ಸದಸ್ಯರು, ರೊಟೇರಿಯನ್ ಆನ್ಸ್ ಹಾಗೂ ಇನ್ನರ್ ವೀಲ್‌ನ ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...