Monday, October 12, 2026
Monday, October 12, 2026

D.K. Shivakumar ಜನಪದ ಕ್ರೀಡೆ ” ನಾಡ ಕುಸ್ತಿ ಸ್ಪರ್ಧೆ. ಕುಸ್ತಿಪಟುಗಳ ಭುಜ ತಟ್ಟಿ ಚಾಲನೆ ನೀಡಿದ ಸೀಎಂ ಡಿ.ಕೆ.ಶಿವಕುಮಾರ್

Date:

D.K. Shivakumar ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ನಾಡಕುಸ್ತಿ ಪಂದ್ಯಾವಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕುಸ್ತಿಪಟುಗಳಿಗೆ ಭುಜ ತಟ್ಟುವ ಮೂಲಕ ಉದ್ಘಾಟಿಸಿದರು.

ನಗರದ ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರ ಆವರಣದ ಶ್ರೀ ಡಿ.ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದಸರಾ ನಾಡಕುಸ್ತಿ ಪಂದ್ಯಾವಳಿಯಲ್ಲಿ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳಾರತಿ ನೆರವೇರಿಸಿ,
ಮೊದಲ ಮಾರ್ಫಿಟ್ ಕುಸ್ತಿಯನ್ನು ಕೆಲ ಸಮಯ ವೀಕ್ಷಿಸಿ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡಿದರು.

2025ನೇ ದಸರಾ ಕಂಠೀರವ ಪ್ರಶಸ್ತಿ ವಿಜೇತ ಬೆಳಗಾವಿಯ ಪೈಲ್ವಾನ್ ಕಾಮೇಶ್ ಪಾಟೀಲ್ ಹಾಗೂ ಮಹಾರಾಷ್ಟ್ರದ ಪೈಲ್ವಾನ್ ಶ್ರೀಮಂತ್ ಬ್ಹೊಸ್ಲೆ ನಡುವೆ ಮೊದಲ ಮಾರ್ಫಿಟ್ ಕುಸ್ತಿ ರೋಚಕವಾಗಿ ನಡೆಯಿತು. ಇದಕ್ಕ ತೀರ್ಪುಗಾರರಾಗಿ ಪೈ‌ಶ್ರೀನಿವಾಸ್ ಹಾಗೂ ಪೈ.ಮಹೇಶ್ ಕಾರ್ಯನಿರ್ವಹಿಸಿದರು.

ಇನ್ನೂ ಕುಸ್ತಿ ವೀಕ್ಷಣೆಗೆ ಆಗಮಿಸಿದ್ದ ಕ್ರೀಡಾಭಿಮಾನಿಗಳು ತಡವಾಗಿ ಕುಸ್ತಿ ಪಂದ್ಯಾವಳಿ ಪ್ರಾರಂಭಗೊಂಡರು ಸಹ ಶಿಳ್ಳೆ ಚಪ್ಪಾಳೆ ಮೂಲಕ ಕುಸ್ತಿ ಕ್ರೀಡಾಪಟುಗಳನ್ನು
ಉರಿದುಂಬಿಸಿ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಅನಿಲ್ ಚಿಕ್ಕಮಾದು, ಶ್ರೀವತ್ಸ , ಹರೀಶ್ ಗೌಡ, ಡಿ.ರವಿಶಂಕರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಸಿ.ನರೇಂದ್ರ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ದಸರಾ ಕುಸ್ತಿ ಉಪಸಮಿತಿ ಅಧ್ಯಕ್ಷ ಶ್ರೀನಿವಾಸಗೌಡ, ವಿಶೇಷಾಧಿಕಾರಿ ಎಲ್.ನಾಗೇಶ್, ಕಾರ್ಯಧ್ಯಾಕ್ಷ ಎಂ.ಧರ್ಮೇಂದ್ರ, ಕಾರ್ಯದರ್ಶಿ ನರಸಿಂಹ ಮೂರ್ತಿ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...