ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಬಡಾವಣೆ 1ನೇ ಕ್ರಾಸ್ ವಾಸಿ ಇಸ್ಮಾಯಿಲ್ ಎಂಬುವವರ ಮಗಳು ಫರೀದಾ ಖಾನಂ ಜೀಶಾನ್ ಎಂಬ 27 ವರ್ಷದ ಮಹಿಳೆ ತನ್ನ 4 ವರ್ಷದ ಮಗ ಉಮೇರ್‌ನನ್ನು ಕರೆದುಕೊಂಡು ಅ.05 ರಂದು ಶಾಲೆಗೆಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಕಾಣೆಯಾದ ಫರೀದಾ ಖಾನಂ 5.2 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಕಾಣೆಯಾದ ಉಮೇರ್ 2.5 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಈ ತಾಯಿ, ಮಗನ ಬಗ್ಗೆ ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 9632171696 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
ತಾಯಿ ಮಗ ಕಾಣೆ : ಸುಳಿವು ನೀಡಲು ಮನವಿ
Date:
