Tuesday, October 6, 2026
Tuesday, October 6, 2026

ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜೂನಿಯರ್ ರೇಂಜರ್ಸ್‌ಗೆ ಪ್ರಾಯೋಗಿಕ ಅರಣ್ಯ ಕಲಿಕಾ ತರಬೇತಿ

Date:

72ನೇ ವನ್ಯಜೀವಿ ಸಪ್ತಾಹ–2026ರ ಅಂಗವಾಗಿ ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ “ಜೂನಿಯರ್ ರೇಂಜರ್ಸ್” ಪ್ರಾಯೋಗಿಕ ಅರಣ್ಯ ಕಲಿಕಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವನ್ಯಜೀವಿ ಪರಿಚಯ, ಜೀವವೈವಿಧ್ಯ, ಪ್ರಕೃತಿ ಅಧ್ಯಯನ, ಅರಣ್ಯ ಅನುಭವ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ತಂತ್ರಜ್ಞಾನಗಳ ಬಳಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ವಿವಿಧ ಅರಣ್ಯ ಹಾಗೂ ವನ್ಯಜೀವಿ ಅಧ್ಯಯನ ಉಪಕರಣಗಳ ಬಳಕೆ ಕುರಿತು ಕೂಡ ಮಾಹಿತಿ ನೀಡಲಾಯಿತು.

ಕಾರ್ಯಕ್ರಮವನ್ನು IUCN–WCPA ಸದಸ್ಯರಾದ ವಿನಾಯಕ ಎಸ್.ಜಿ., ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಪರಿಸರ ನಾಗರಾಜ, ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಯೋಗೇಶ್ ಹಾಗೂ ಸಂಪನ್ಮೂಲ ವ್ಯಕ್ತಿ ಗುರುಮೂರ್ತಿ ಬೆಳ್ಳೂರು ಉದ್ಘಾಟಿಸಿ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅರಣ್ಯಾಧಿಕಾರಿ ಬಾಬು ಕೆ. ವಹಿಸಿದ್ದರು. ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ವಲಯ ಅರಣ್ಯಾಧಿಕಾರಿ ನೂರ್ ಅಹ್ಮದ್ ಕಾರ್ಯನಿರ್ವಹಿಸಿದರು. ವಲಯ ಅರಣ್ಯಾಧಿಕಾರಿ ಅಂಥೋಣಿ ರೇಗೂ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಜೂನಿಯರ್ ರೇಂಜರ್ಸ್ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...

Klive Special Article ಮರೆಯಲಾಗದ ಮಹಾಶಯರು

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ...