Monday, October 5, 2026
Monday, October 5, 2026

‘ಪ್ರಜಾ ಸೇವೆ’ ಕಾರ್ಯಕ್ರಮದಲ್ಲೇ ಜನರಿಗೆ ಸಂಕಷ್ಟ: ತೆರೆದ ಚರಂಡಿ ದಾಟಿ ಅರ್ಜಿ ಸಲ್ಲಿಸಲು ಸಾರ್ವಜನಿಕರ ಪರದಾಟ

Date:

ಜನರ ಸಮಸ್ಯೆ ಆಲಿಸಬೇಕಾದ ‘ಪ್ರಜಾ ಸೇವೆ’ ಕಾರ್ಯಕ್ರಮವೇ ಜನರಿಗೆ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ. ಅರ್ಜಿ ಸಲ್ಲಿಸಲು ತೆರೆದ ಚರಂಡಿ ದಾಟಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಸ್ವಲ್ಪ ಆಯ ತಪ್ಪಿದರೂ ಚರಂಡಿಗೆ ಬೀಳುವ ಅಪಾಯವಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಕಲಚೇತನರು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸಿದ್ದಾರೆ.

ಸರಿಯಾದ ರಾಂಪ್ ಹಾಗೂ ಸುಗಮ ಹಾದಿ ವ್ಯವಸ್ಥೆ ಇಲ್ಲದೆ ವಿಕಲಚೇತನರು ಅಹವಾಲು ಸಲ್ಲಿಸಲು ಪರದಾಡಿದ್ದಾರೆ. ಕನಿಷ್ಠ ಮೂಲಭೂತ ಸೌಕರ್ಯವನ್ನೂ ಕಲ್ಪಿಸದ ಅಧಿಕಾರಿಗಳು ಹಾಗೂ ಸಂಘಟಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಕಲಚೇತನರು ಮತ್ತು ವೃದ್ಧರಿಗಾಗಿ ಪ್ರತ್ಯೇಕ ಕೌಂಟರ್ ಹಾಗೂ ಸುಲಭ ಹಾದಿ ಕಲ್ಪಿಸುವಂತೆ ಆಗ್ರಹಿಸಿರುವ ಸಾರ್ವಜನಿಕರು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಮರೆಯಲಾಗದ ಮಹಾಶಯರು

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ...