ಸಿ.ಜಿ.ಮಧುಸೂದನ್ ಅಂತಾ ಕೇಳಿದರೆ, ಶಿವಮೊಗ್ಗದಲ್ಲಿ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಬದಲಾಗಿ ಎನ್.ಎಸ್.ಯು.ಐ ಮಧು ಅಂತಾ ಕೇಳಿದರೆ, ಓಹ್ ಅವರಾ, ನಮ್ಮವರು ಅಂಥಾ ಹೇಳುವಷ್ಟು ಆಪ್ತರು.2002 ರಲ್ಲಿ ವಿದ್ಯಾರ್ಥಿ ಸಂಘಟನೆಯ ಹಾದಿ ತುಳಿದ ಇವರು, ಇವತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನಲ್ಲಿ ಪ್ರಮುಖ ಮುಂಚೂಣಿ ಕಾರ್ಯಕರ್ತ. SSLC ಹಂತದಲ್ಲಿಯೇ ಎನ್.ಎಸ್.ಯು.ಐ ಸೇರಿದ ಮಧು ಕಲವೇ ವರ್ಷಗಳಲ್ಲಿ ಸಂಘಟನೆಯನ್ನೆ ಮುನ್ನೆಡೆಸುವ ನಾಯಕರಾಗುತ್ತಾರೆ. ವಿಶೇಷ ಅಂದರೆ, ಆ ಹೊತ್ತಿಗಾಗಲೇ ಶಿವಮೊಗ್ಗದಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರಬಲವಾಗಿದ್ದವು. ಹೋರಾಟದ ಕುದಿನೆಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದ ಅಂದಿನ ವಿದ್ಯಾರ್ಥಿ ಹೋರಾಟಗಳಲ್ಲಿ ಎನ್.ಎಸ್.ಯು.ಐ ಸಂಘಟನೆಯನ್ನ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಿ.ಜಿ.ಮಧುಸೂದನ್.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾಕ್ಕೆ ದೇವೇಂದ್ರಪ್ಪ ಅವರ ಪ್ರೇರಣೆಯಿಂದ ಸೇರಿಕೊಂಡ ಇವರು, ಇವತ್ತಿನ ಎನ್ಎಸ್ಯುಐ ಮಧು ಅಂತಲೇ ಫೇಮಸ್, 2002 ರಿಂದ 2026 ರವರೆಗೂ ಎನ್ಎಸ್ಯುಐನ ಪ್ರತಿ ಹೋರಾಟ, ಸಂಘಟನೆಯಲ್ಲಿಯು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಡಿಯುತ್ತಲೇ ಇದ್ದಾರೆ ಸಿ.ಜಿ.ಮಧುಸೂದನ್. ಸಂಘಟನೆಯಲ್ಲಿನ ನಿರಂತರ ಒಡನಾಟ ಹಾಗೂ ಕ್ರಿಯಾಶೀಲತೆಯಿಂದಾಗಿ, 2010ರಲ್ಲಿ ಮಧುಸೂದನ್ , ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎನ್.ಎಸ್.ಯು.ಐ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು.
ರಾಹುಲ್ ಗಾಂಧಿ ತಂದ ಚುನಾವಣೆ: 2009-10ರಲ್ಲಿ ರಾಹುಲ್ ಗಾಂಧಿಯವರು ಯುವ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ ಗೆ ಚುನಾವಣೆ ತಂದರು, ಪ್ರತಿಯೊಬ್ಬ ಸಕ್ರಿಯ ಹೊರಾಟಗಾರ, ಸಂಘಟಕನಿಗೆ ಆಧ್ಯತೆ ನೀಡುವುದು ಅವರ ಉದ್ದೇಶವಾಗಿತ್ತು. ಹಾಗೆ ನಡೆದ ಚುನಾವಣೆಯಲ್ಲಿ, ಕುವೆಂಪು ವಿವಿ ವ್ಯಾಪ್ತಿಗೆ (ಶಿವಮೊಗ್ಗ-ಚಿಕ್ಕಮಗಳೂರು) ಸಿ.ಜಿ. ಮಧುಸೂದನ್ ಮೊದಲ ಚುನಾಯಿತ ಅಧ್ಯಕ್ಷರಾಗಿದ್ದರು.
ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅವರು, 2011-12ನೇ ಸಾಲಿನಲ್ಲಿ ಎನ್.ಎಸ್.ಯು.ಐನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು ಹಾಗೂ ಹಲವು ಜಿಲ್ಲೆಗಳ ಉಸ್ತುವಾರಿಯನ್ನು ನಿರ್ವಹಿಸಿದರು. ಈ ಅವಧಿಯಲ್ಲಿ ಅವರು ಹಲವಾರು ಹೊಸ ಯುವಕರಿಗೆ ಮಾರ್ಗದರ್ಶನ ನೀಡಿ, ಅವರಲ್ಲಿ ನಾಯಕತ್ವದ ಗುಣಗಳನ್ನು ತುಂಬಿ ಅಧ್ಯಕ್ಷರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಹಾಗೂ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರಗಳಿದ್ದ ಆ ಕಾಲಘಟ್ಟದಲ್ಲಿ, ಎಬಿವಿಪಿಗೆ ಅತ್ಯಂತ ಪ್ರಬಲ ಪೈಪೋಟಿ ನೀಡಿ ಎನ್.ಎಸ್.ಯು.ಐ ಅನ್ನು ಮಧುಸೂದನ್ ಅವರು ಬಲಿಷ್ಠವಾಗಿ ಕಟ್ಟಿದರು. ಇವರ ಸಂಘಟನಾ ಶಕ್ತಿಯಿಂದಾಗಿ ಇಡೀ ದಕ್ಷಿಣ ಭಾರತದಲ್ಲಿಯೇ ಶಿವಮೊಗ್ಗ ಜಿಲ್ಲೆ ಎನ್.ಎಸ್.ಯು.ಐ ನ ಅತಿ ಬಲಿಷ್ಠ ಜಿಲ್ಲೆಯಾಗಿ ಹೊರಹೊಮ್ಮಿತು. ಈ ಅತ್ಯುತ್ತಮ ಸಂಘಟನಾ ಸಾಧನೆಯನ್ನು ಗುರುತಿಸಿ, 2012-13ರಲ್ಲಿ ದೆಹಲಿಯಲ್ಲಿ ರಾಹುಲ್ ಗಾಂಧಿಯವರ ಕೈಯಾರೇ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ‘ಅತ್ಯುತ್ತಮ ಜಿಲ್ಲಾಧ್ಯಕ್ಷ (ಬೆಸ್ಟ್ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್ ಆಫ್ ಇಂಡಿಯಾ)’ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ಮಧುಸೂದನ್ರ ಆಪ್ತ ಚೇತನ್ ಅವರು ಸ್ವೀಕರಿಸಿದರೂ, ಆ ಭಾರಿ ಯಶಸ್ಸಿನ ಹಿಂದಿನ ರೂವಾರಿ ಸಿ.ಜಿ. ಮಧುಸೂದನ್ ಅವರಾಗಿದ್ದರು.
ಮಧುಸೂದನ್ ಅವರ ಮತ್ತೊಂದು ಬಹುದೊಡ್ಡ ಸಾಧನೆಯೆಂದರೆ ಯುವ ನಾಯಕತ್ವವನ್ನು ಹಂಚಿದ್ದು. ತಾವು ಮಾತ್ರ ಬೆಳೆಯದೆ, ತಮ್ಮ ಜೊತೆಗಿದ್ದ ಚೇತನ್, ಶ್ರೀಜಿತ್, ಬಾಲಾಜಿ, ವಿಜಿ ಹಾಗೂ ಅರ್ಷಿತ್ ಗೌಡ, ಚರಣ್ ಜೆ.ಶೆಟ್ಟಿ, ಅರಮಗಟ್ಟ ಪ್ರವೀಣ ಸೇರಿದಂತೆ ಸುಮಾರು ಸಾಕಷ್ಟು ಯುವಕರಿಗೆ ಮಾರ್ಗದರ್ಶನ ನೀಡಿ ಅವರನ್ನು ಎನ್.ಎಸ್.ಯು.ಐ ಮತ್ತು ಯುವ ಕಾಂಗ್ರೆಸ್ನಲ್ಲಿ ನಾಯಕರನ್ನಾಗಿ ಬೆಳೆಸಿದರು. ಇಂದಿಗೂ ಆ ಯುವಕರು ಸಂಘಟನೆಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿಪರ ಹೋರಾಟಗಳು ಮತ್ತು ಯಶಸ್ಸು
ವಿದ್ಯಾರ್ಥಿ ನಾಯಕರಾಗಿ ಮಧುಸೂದನ್ ಅವರು ಶೈಕ್ಷಣಿಕ ವ್ಯವಸ್ಥೆಯ ಲೋಪಗಳ ವಿರುದ್ಧ ಅನೇಕ ಬೃಹತ್ ಹೋರಾಟಗಳನ್ನು ರೂಪಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿನ ಅಂಕಪಟ್ಟಿಗಳಲ್ಲಿನ ದೋಷ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಅವರು ಬೃಹತ್ ಪ್ರತಿಭಟನೆ ನಡೆಸಿದ್ದರು. ಕುವೆಂಪು ವಿವಿಯಲ್ಲಿ ಪರೀಕ್ಷಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಇದನ್ನು ವಿರೋಧಿಸಿ ಮಧುಸೂದನ್ ಅವರು ಸಾವಿರಾರು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಹೋರಾಟ ನಡೆಸಿ, ಆ ಶುಲ್ಕವನ್ನು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ದೂರ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಹಾಗೂ ಶಾಲಾ-ಕಾಲೇಜುಗಳಲ್ಲಿನ ಡೊನೇಷನ್ ಹಾವಳಿಯನ್ನು ವಿರೋಧಿಸಿ ಬೀದಿಗಿಳಿದಿದ್ದರು. ಬಿ.ಸಿ.ಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ನಿರಂತರ ಹೋರಾಟ ಮಾಡಿದ್ದರು. ಅತ್ಯಂತ ಗಮನಾರ್ಹ ಸಂಗತಿಯೆಂದರೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿದಾಗಲೆಲ್ಲ, ಅದರಲ್ಲಿ ಶೇ. 80 ರಿಂದ 90 ರಷ್ಟು ಸಮಸ್ಯೆಗಳಿಗೆ ಅವರು ಸ್ಪಷ್ಟವಾದ ಪರಿಹಾರ ಒದಗಿಸಿಕೊಟ್ಟಿದ್ದರು
ಯುವ ಕಾಂಗ್ರೆಸ್ ಪಯಣ ಹಾಗೂ ‘ಭಾರತ್ ಜೋಡೋ’ ಜವಾಬ್ದಾರಿ
ಎನ್.ಎಸ್.ಯು.ಐ ನಲ್ಲಿ ಯಶಸ್ವಿ ಹೆಜ್ಜೆಗಳನ್ನಿಟ್ಟ ನಂತರ, 2017ರಲ್ಲಿ ಮಧುಸೂದನ್ ಅವರು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. ಸುಮಾರು 5-6 ವರ್ಷಗಳ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು, ಅಂದಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಿಕೊಂಡು ಬಂದರು.
ಅವರ ಈ ಸುದೀರ್ಘ ಸಂಘಟನಾ ಚಾತುರ್ಯವನ್ನು ಗುರುತಿಸಿದ ಪಕ್ಷವು ಇತ್ತೀಚೆಗೆ ಮಹತ್ವದ ಹುದ್ದೆ ನೀಡಿದೆ. 2026ರಲ್ಲಿ ಸಿಎಂ ಡಿಕೆ ಶಿವಕುಮಾರ್ ರವರು ಯುವಕರನ್ನ ಪ್ರೋತ್ಸಾಹಿಸುವ ಸಲುವಾಗಿ ಭಾರತ್ ಜೋಡೋ ಯೋಜಚನೆಯನ್ನ ಜಾರಿಗೆ ತಂದರು. ಈ ಯೋಜನೆಗೆ ಯುವ ಕಾಂಗ್ರೆಸ್ನಿಂದ ರಾಜ್ಯ ಸಂಯೋಜಕರನ್ನಾಗಿ ಮಧು ಅವರನ್ನು ನೇಮಿಸಿಲಾಗಿದೆ. ಪ್ರಸ್ತುತ ಅವರು ಒಟ್ಟು 11 ಜಿಲ್ಲೆಗಳ ಉಸ್ತುವಾರಿಯನ್ನು ಹೊತ್ತುಕೊಂಡು ಸಂಘಟನಾ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. 2002 ರಿಂದ ಇಂದಿನವರೆಗೂ ಸತತವಾಗಿ ವಿದ್ಯಾರ್ಥಿ ಮತ್ತು ಯುವಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಮಧುಸೂದನ್ ಅವರನ್ನು, ಅವರ ಒಡನಾಡಿಗಳು ಹಾಗೂ ಜನರು ಪ್ರೀತಿಯಿಂದ ಇಂದಿಗೂ ‘ಎನ್.ಎಸ್.ಯು.ಐ ಮಧು ಎಂದೇ ಗುರುತಿಸುತ್ತಾರೆ.
ಮಧುಸೂದನ್ ವಿದ್ಯಾರ್ಥಿ ನಾಯಕನಿಂದ ‘ಭಾರತ್ ಜೋಡೋ’ ರಾಜ್ಯ ಸಂಯೋಜಕನವರೆಗಿನ ಪಯಣ
Date:
