Friday, October 2, 2026
Friday, October 2, 2026

ಶಿವಮೊಗ್ಗ ರಂಗಾಯಣದಲ್ಲಿ ರೆಪರ್ಟರಿಗೆ ಆಸಕ್ತ ಕಲಾವಿದರು/ತಂತ್ರಜ್ಞರಿಂದ ಅರ್ಜಿ ಆಹ್ವಾನ

Date:

ಶಿವಮೊಗ್ಗದ ರಂಗಾಯಣದಲ್ಲಿ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇಬ್ಬರು ಮಹಿಳಾ ಕಲಾವಿದರು, ಮತ್ತು ಇಬ್ಬರು ಪುರುಷ ಕಲಾವಿದರನ್ನು ಹಾಗೂ ಒಬ್ಬ ಸಂಗೀತ ಸಂಯೋಜಕರು/ಪಕ್ಕವಾದ್ಯಗಾರರನ್ನು ನೇಮಕ ಮಾಡಿಕೊಳ್ಳಲು ಆಸಕ್ತರಿಂದ ಅರ್ಜಿಯನ್ನು ಕರೆಯಲಾಗಿದೆ.
ಕಲಾವಿದರ ನೇಮಕದ ನಿಬಂಧನೆಗಳು:-
ಆಯ್ಕೆಯಾದ ಕಲಾವಿದರು ರೆಪರ್ಟರಿಯ ಭಾಗವಾಗಿದ್ದು, ರಂಗಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿನಯದ ಜವಾಬ್ದಾರಿಯನ್ನು ನಿಭಾಯಿಸಬೇಕು.
ಈ ನೇಮಕ ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ.
ಆಯ್ಕೆಯಾದ ಕಲಾವಿದರಿಗೆ ಮೊದಲನೇ ವರ್ಷ ಮಾಸಿಕ ರೂ.18,000/-, ಈಗಾಗಲೇ ರಂಗಾಯಣಗಳಲ್ಲಿ ಕಲಾವಿದರಾಗಿ ಕಾರ್ಯ ನಿರ್ವಹಿಸಿರುವವರಿಗೆ ಮಾಸಿಕ ರೂ.20,000/-ಗಳನ್ನು ಸಂಚಿತ ವೇತನವಾಗಿ ನಿಯಮಾನುಸಾರ ನೀಡಲಾಗುವುದು. ಇತರೆ ಯಾವುದೇ ಭತ್ಯೆಗಳನ್ನು ನೀಡುವುದಿಲ್ಲ. ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲಾವಿದರೇ ಮಾಡಿಕೊಳ್ಳಬೇಕು.
ರಂಗಾಯಣಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿರುವವರು ದೃಢೀಕರಣ ಪತ್ರವನ್ನು ಆಯಾ ರಂಗಾಯಣಗಳಿಂದ ಪಡೆದು ಸಲ್ಲಿಸಬೇಕು.
ದಿನಾಂಕ: 29-09-2026ಕ್ಕೆ ಕಲಾವಿದರ ವಯಸ್ಸು ಕನಿಷ್ಠ 18 ವರ್ಷಗಳಿಂದ ಗರಿಷ್ಠ 32 ವರ್ಷ ಮೀರಿರಬಾರದು.
ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇಂತಹ ಪ್ರಕರಣದಲ್ಲಿ ವಯೋಮಿತಿಯನ್ನು 05 ವರ್ಷ ಸಡಿಲಿಸಬಹುದು. ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವುದು.
ಆಯ್ಕೆಯಾದ ಕಲಾವಿದರು ರಂಗಾಯಣ, ಶಿವಮೊಗ್ಗದ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು.
ಈ ಮೇಲ್ಕಂಡ ಷರತ್ತುಗಳಲ್ಲದೆ ಇತರೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಆಯ್ಕೆ ಸಮಿತಿಗಿರುತ್ತದೆ.
ತಂತ್ರಜ್ಞರ ನೇಮಕದ ನಿಬಂಧನೆಗಳು:-
ಸಂಗೀತ ಸಂಯೋಜಕರು/ಪಕ್ಕವಾದ್ಯಗಾರರು ಪ್ರತಿ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರಬೇಕು.
ತಂತ್ರಜ್ಞರಿಗೆ ಕನಿಷ್ಠ ಕನ್ನಡ ಭಾಷೆಯ ಓದುವ, ಬರೆಯುವ, ಗ್ರಹಿಸುವ ಸಾಮರ್ಥ್ಯವಿರಬೇಕು.
ರಂಗಾನುಭವದ ಜೊತೆಗೆ ಶೈಕ್ಷಣಿಕ ಅರ್ಹತೆ ಮತ್ತು ರಂಗಶಿಕ್ಷಣದ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆದ್ಯತೆ ನೀಡಲಾಗುವುದು.
ಈ ನೇಮಕ ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ.
ತಂತ್ರಜ್ಞರಿಗೆ ಸಂಚಿತ ವೇತನ, ಕ್ರೋಡೀಕೃತವಾಗಿ ಮಾಸಿಕ ರೂ.25,000/-ಗಳನ್ನು ನೀಡಲಾಗುವುದು. ಇತರೆ ಯಾವುದೇ ಭತ್ಯೆಗಳು ಇರುವುದಿಲ್ಲ. ಊಟ, ವಸತಿ ವ್ಯವಸ್ಥೆಯನ್ನು ತಂತ್ರಜ್ಞರೇ ಮಾಡಿಕೊಳ್ಳಬೇಕು.
ತಂತ್ರಜ್ಞರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅವರ ನೇಮಕವನ್ನು ಯಾವುದೇ ಸಂದರ್ಭದಲ್ಲಿ ರದ್ದುಗೊಳಿಸುವ ಅಧಿಕಾರ ರಂಗಸಮಾಜಕ್ಕೆ ಇರುತ್ತದೆ.
ತಂತ್ರಜ್ಞರ ನೇಮಕದ ಸಂದರ್ಭದಲ್ಲಿ ರೋಸ್ಟರ್ ನಿಯಮಗಳು ಕಡ್ಡಾಯವಾಗಿರುವುದಿಲ್ಲ. ತಂತ್ರಜ್ಞರಿಗೆ ವಯಸ್ಸಿನ ವಯೋಮಿತಿ ಇರುವುದಿಲ್ಲ.
ಆಸಕ್ತ ಕಲಾವಿದರು, ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 08-10-2026 ರ ಸಂಜೆ 5.30 ಗಂಟೆಯೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಹೆಲಿಪ್ಯಾಡ್ ಹಿಂಭಾಗ, ಶಿವಮೊಗ್ಗ-577201 ವಿಳಾಸಕ್ಕೆ ಅಂಚೆ ಮೂಲಕ, ಖುದ್ದಾಗಿ ಅಥವಾ
ಇ-ಮೇಲ್ ವಿಳಾಸ:admn.rangayanashivamogga@gmail.com ಮೂಲಕ ಅಥವಾ ಗೂಗಲ್ ಫಾರಂನ್ನು ವೆಬ್‌ಸೈಟ್ https://rangayanashivamogga.karnataka.gov.in/ ನಿಂದ ಅಥವಾ ಫೇಸ್ಬುಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಆನ್ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 08182-256353 ಅಥವಾ ಮೊಬೈಲ್ ಸಂಖ್ಯೆ 7975229166 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ರಂಗಾಯಣದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಕುಟುಂಬ ಮಿಲನದಿಂದ ಬಾಂಧವ್ಯ ವೃದ್ಧಿ, ಪ್ರತಿಭೆ ಅನಾವರಣ: ವಿಜಯಲಕ್ಷ್ಮಿ ಕಡಂಬ

JCI Shivamogga ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ವತಿಯಿಂದ ಸ್ನೇಹ ಮಿಲನ...

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...