Tuesday, September 22, 2026
Tuesday, September 22, 2026

ಅಡಿಕೆ ಗೋಡನ್‌ ಮೇಲೆ ದಾಳಿ, ರಸಾಯನಿಕ ಬಣ್ಣ ಬಳಸಿದಲ್ಲಿ ಕಾನೂನು ಕ್ರಮದ ಎಚ್ಚರಿಕೆ : ಡಾ.ಮೈತ್ರಿ

Date:

ಶಿವಮೊಗ್ಗ ನಗರದ ಹೊರವಲಯ ಬುಳ್ಳಾಪುರದಲ್ಲಿ ರೈತರಿಂದ ಅಡಿಕೆ ಖರೀದಿಸಿ, ಅದನ್ನು ಸಂಸ್ಕರಿಸಿ, ದೊಡ್ಡಪ್ರಮಾಣದಲ್ಲಿ ರಾಜ್ಯ, ಹೊರರಾಜ್ಯಗಳಿಗೆ ರವಾನಿಸುವ ಘಟಕಕ್ಕೆ ಭೇಟಿ ನೀಡಿ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲಿಸಿದರು.
ಅಡಿಕೆ ಗೋಡನ್‌ಗಳಲ್ಲಿ ಅಡಿಕೆಗೆ ಹೆಚ್ಚು ಕೆಂಪು, ಆಕರ್ಷಕ ಬಣ್ಣ ಬರಲೆಂದು ನಿಷೇಧಿತ ಹಾಗೂ ಕಾನೂನು ಬಾಹಿರವಾದ ರಸಾಯನಿಕಯುಕ್ತ ಕೈಗಾರಿಕಾ ಬಣ್ಣಗಳನ್ನು ಬಳಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಬಣ್ಣವು ಕಡಿಮೆ ದರ್ಜೆಯ ಅಡಿಕೆಯನ್ನು ಉತ್ತಮ ದರ್ಜೆಯಂತೆ ತೋರಿಸಲು ಮಾಡುವ ಮೋಸದ ಮತ್ತು ಕಾನೂನುಬಾಹಿರವಾದ ಅನುಚಿತ ವ್ಯವಹಾರ ಪದ್ದತಿಯಾಗಿದೆ. ಇದರಿಂದಾಗಿ ಅಡಿಕೆ ಬೆಳೆಗಾರರು ಮತ್ತು ಅದನ್ನು ಬಳಸುವವರ ಮೇಲೆ ತೀವ್ರ ತರಹದ ತೊಂದರೆಯನ್ನು ಉಂಟು ಮಾಡಲಿದೆ ಎಂದರು.
ರಸಾಯನಿಕಯುಕ್ತ ಬಣ್ಣಗಳು ಆಹಾರ ಪದಾರ್ಥಕ್ಕೆ ಬಳಸುವಂತದ್ದಲ್ಲ, ಇವು ಕೈಗಾರಿಕಾ ಬಣ್ಣಗಳು. ದೇಹದೊಳಗೆ ಹೋದರೆ ಯಕೃತ್ತು ಮತ್ತು ಮೂತ್ರಪಿಂಡ ಹಾಳಾಗುತ್ತದೆ. Rhodamine B ಮತ್ತು Sudan ಬಣ್ಣಗಳು ಕ್ಯಾನ್ಸರ್ ಕಾರಕ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಇಂತಹ ಅಡಿಕೆಯ ನಿರಂತರ ಸೇವನೆಯಿಂದ ಬಾಯಿ ಕ್ಯಾನ್ಸರ್, ಹೊಟ್ಟೆ ಹುಣ್ಣು, ಅಲರ್ಜಿ, ಉಸಿರಾಟದ ತೊಂದರೆ ಆಗಲಿದೆ. ಅಡಿಕೆ ಜಗಿಯುವಾಗ ಬಣ್ಣ ನೇರವಾಗಿ ಬಾಯಿಯ ಲೋಳೆಪೊರೆಗೆ ಅಂಟಿಕೊಳ್ಳುವುದರಿಂದ ಆಗುವ ಅಪಾಯ ಊಹಿಸಲು ಅಸಾಧ್ಯವಾದುದಾಗಿದೆ ಎಂದರು.
ಅಡಿಕೆಯಲ್ಲಿ ಯಾವುದೇ ಕೃತಕ ಬಣ್ಣ ಹಾಕುವುದು ಸಂಪೂರ್ಣ ನಿಷೇಧ. ಹೊರ ರಾಜ್ಯಗಳಿಗೆ ಮತ್ತು ವಿದೇಶಕ್ಕೆ ರಫ್ತು ಮಾಡುವಾಗ ಬಣ್ಣ ಬಳಕೆಯಾಗಿರುವುದು ಪತ್ತೆಯಾಗಿ ಅನೇಕ ಕಡೆಗಳಲ್ಲಿ ಅಡಿಕೆಯ ಇಡೀ ಲಾಟ್ ತಿರಸ್ಕೃತವಾಗಿರುವುದು ತಿಳಿದುಬಂದಿದೆ. ಕೇರಳ ಮತ್ತು ಕರ್ನಾಟಕದಿಂದ ಹೋದ ಹಲವು ಲಾಟ್ ಗಳು ಈ ಕಾರಣಕ್ಕೆ ತಿರಸ್ಕೃತಗೊಂಡಿವೆ ಎಂದರು.
ರಾಸಾಯನಿಕ ಹಾಕಿದ ಅಡಿಕೆ ಬೇಗನೆ ಹಾಳಾಗುತ್ತದೆ, ಫಂಗಸ್ ಬರುತ್ತದೆ. ನೈಸರ್ಗಿಕ ಸುವಾಸನೆ ಮತ್ತು ರುಚಿ ಕಳೆದುಕೊಳ್ಳುತ್ತದೆ. ಅಡಿಕೆ ಬೆಳೆಗಾರರು ಅಥವಾ ವ್ಯಾಪಾರಿಗಳು ಅಡಿಕೆಯನ್ನು ಸರಿಯಾಗಿ ಒಣಗಿಸುವುದು, ಉತ್ತಮ ತಳಿ ಆಯ್ಕೆ ಮತ್ತು ಶುಚಿಯಾದ ಸಂಸ್ಕರಣೆಯಿಂದಲೇ ನೈಸರ್ಗಿಕ ಬಣ್ಣ ತರುವುದು ಸುರಕ್ಷಿತ ವಿಧಾನವಾಗಿದೆ ಎಂದರು.
ಅಡಿಕೆಯ ಕೆಲವು ಮಾದರಿಗಳನ್ನು ಪಡೆದುಕೊಂಡ ಅವರು, ಅಡಿಕೆಗೆ ಬಣ್ಣ ಬಳಸಿರುವುದು ಖಚಿತವಾದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದ ಅವರು, ರಸಾಯನಿಕಗಳಿಲ್ಲದೆ ಅಡಿಕೆಯನ್ನು ಸರಿಯಾದ ವಿಧಾನದಲ್ಲಿ ಸಂಸ್ಕರಿಸಿ, ವಹಿವಾಟು ನಡೆಸುವಂತೆ ಹಾಗೂ ರೈತರ ಶ್ರಮಕ್ಕೆ ನ್ಯಾಯ ಒದಗಿಸುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್‌ ರಾಜೀವ್‌, ಕಂದಾಯ ಇಲಾಖೆಯ ಅಧಿಕಾರಿಗಳಾದ ಲಿಂಗರಾಜ್‌, ಕೀರ್ತಿಕುಮಾರ್‌, ಶ್ರವಣಕುಮಾರ್‌, ಶ್ವೇತಾ, ಸುಮಾ ಮತ್ತು ಮನೋಜ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...