Monday, September 21, 2026
Monday, September 21, 2026

ಪತ್ರಿಕೋದ್ಯಮದಲ್ಲಿ ಎಐ ಬಳಕೆ ಅನಿವಾರ್ಯ: ಎನ್. ಗೋಪಿನಾಥ್

Date:

ಬದಲಾದ ಕಾಲಘಟ್ಟದಲ್ಲಿ ಪತ್ರಕರ್ತರು ಕಾರ್ಯನಿರ್ವಹಣೆಯ ವಿಧಾನಗಳು ಸಹ ಬದಲಾಗುತ್ತಿವೆ‌‌. ಅದರಲ್ಲೂ ಎಐ ಮಾಧ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತಂದಿದೆ ಎಂದು ಶಿವಮೊಗ್ಗ ರೋಟರಿ ಅಧ್ಯಕ್ಷ ಎನ್. ಗೋಪಿನಾಥ್ ತಿಳಿಸಿದರು.
ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ರೋಟರಿ ಶಿವಮೊಗ್ಗ, ಪ್ರೆಸ್ ಟ್ರಸ್ಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ಆಯೋಜಿಸಿದ್ದ ‘ಎಐ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಎಐನಿಂದ ಸಾಕಷ್ಟು ಅನುಕೂಲಗಳಾಗಿವೆ. ಜತೆಗೆ ಈ ನವ ತಂತ್ರಜ್ಞಾನ ಅನೇಕ ಆತಂಕಗಳನ್ನು ಸಹ ತಂದೊಡ್ಡಿದೆ. ಅವುಗಳನ್ನು ದಾಟಬೇಕಿದೆ ಎಂದರು.
ಪ್ರೊ. ರಂಗನಾಥ್ ಮಾತನಾಡಿ, ಎಐ ಉದ್ಯೋಗ ಕಡಿತಗೊಳಿಸುತ್ತದೆ ಎಂಬ ಚರ್ಚೆಗಳು ನಿರಂತರವಾಗಿ ನಡೆಯುತ್ತಿವೆ. ಅದು ಸತ್ಯ ಸಹ ಆಗಿದೆ. ಒಂದುವೇಳೆ ಈ ತಂತ್ರಜ್ಞಾನ ಬಳಕೆಯನ್ನು ಕಲಿತರೆ ಯಾವುದೇ ಆತಂಕವಿಲ್ಲ. ಪತ್ರಕರ್ತರು ತಮ್ಮ ವೃತ್ತಿಗೆ ಇದನ್ನು ಹೇಗೆ ಬಳಸಬೇಕಾದ ಅಗತ್ಯವಿದೆ. ಅದೇ ಕಾರಣಕ್ಕಾಗಿ ಕಾರ್ಯಾಗಾರ ಆಯೋಜಿಸಲಾಗಿದೆ. ಸದುಪಯೋಗ ಪಡೆದುಕೊಳ್ಳಬೇಕು. ಮಾಧ್ಯಮದ ಪ್ರತಿನಿಧಿಗಳಿಗಾಗಿ ಏರ್ಪಡಿಸಲಾದ ರಾಜ್ಯದ ಮೊದಲ ತರಬೇತಿ ಇದಾಗಿದೆ. ಎಂದರು.
ಎಐ ತರಬೇತುದಾರ ಡಾ. ಪವನ್ ಕುಮಾರ್ ಅವರು ಪತ್ರಿಕೋದ್ಯಮದಲ್ಲಿ ಎಐ ಬಳಕೆ ಕುರಿತು ಮಾಹಿತಿ ನೀಡಿದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿದರು. ಜಿಲ್ಲಾ ವಾರ್ತಾಧಿಕಾರಿ ಆರ್. ಮಾರುತಿ, ಪ್ರೆಸ್ ಟ್ರಸ್ಟ್ ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ರೋಟೇರಿಯನ್ ಲಕ್ಷ್ಮೀ ಗೋಪಿನಾಥ್, ಜನಾರ್ಧನ್ ಪೈ, ವೀರಣ್ಣ ಹುಗ್ಗಿ, ಶ್ರೀನಿವಾಸ್ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...