Monday, September 21, 2026
Monday, September 21, 2026

ಸೆಪ್ಟೆಂಬರ್ 22 ರಂದು ಶಿವಮೊಗ್ಗಕ್ಕೆ ಸ್ಪಾರ್ಕ್ ಚಿತ್ರತಂಡ, ಚಿತ್ರದ ವಿಶೇಷ ಪ್ರದರ್ಶನ

Date:

ನಿರಂಜನ್ ಸುಧೀಂದ್ರ ಅಭಿನಯದ ಬಹುನಿರೀಕ್ಷಿತ ‘ಸ್ಪಾರ್ಕ್’ ಸಿನಿಮಾದ ಮೊದಲ ಪ್ರದರ್ಶನಕ್ಕೆ ಶಿವಮೊಗ್ಗ ಸಾಕ್ಷಿಯಾಗಲಿದೆ. ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಚಿತ್ರವು, ಅದಕ್ಕೂ ಮೂರು ದಿನ ಮುನ್ನ ಅಂದರೆ ನಾಳೆ ಸೆಪ್ಟೆಂಬರ್ 22 ರಂದು ಮಂಗಳವಾರ ಸಂಜೆ 7 ಗಂಟೆಗೆ ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ವಿಶೇಷ ಪ್ರದರ್ಶನಗೊಳ್ಳಲಿದೆ.

ಶಿವಮೊಗ್ಗದ ಗುಡ್ಡೆಕಲ್ ದೇವಸ್ಥಾನದಲ್ಲಿ ಹುಟ್ಟಿ ಬೆಳೆದ ವಿಶ್ವಾಸ್ ಮುರಳೀಧರ ನಾಯರ್ ಅವರು ‘ಸ್ಪಾರ್ಕ್’ ಸಿನಿಮಾದಲ್ಲಿ ಲೈನ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದು, ಅವರ ಒತ್ತಾಯದ ಮೇರೆಗೆ ಸಿನಿಮಾದ ಮೊಟ್ಟಮೊದಲ ಪ್ರದರ್ಶನವನ್ನು ಹುಟ್ಟೂರಾದ ಶಿವಮೊಗ್ಗದಲ್ಲೇ ಆಯೋಜಿಸಲಾಗಿದೆ. ವಿಶೇಷ ಪ್ರದರ್ಶನದಲ್ಲಿ ಚಿತ್ರತಂಡದ ಸಂಪೂರ್ಣ ಬಳಗ ಪಾಲ್ಗೊಳ್ಳಲಿದೆ.

ನಿರಂಜನ್ ಸುಧೀಂದ್ರ ಅವರ ವೃತ್ತಿಜೀವನದ ವಿಭಿನ್ನ ಚಿತ್ರವೆಂದೇ ಹೇಳಲಾಗುತ್ತಿರುವ ‘ಸ್ಪಾರ್ಕ್’, ಕೇವಲ ಪ್ರೇಮಕಥೆಗೆ ಸೀಮಿತವಾಗದೆ ವಿಭಿನ್ನ ಕಥಾಹಂದರ ಹೊಂದಿದೆ. ಸಿನಿಮಾದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಸಚಿನ್ ಬಸ್ರೂರು ಸಂಗೀತ ನಿರ್ದೇಶನದಲ್ಲಿ ವೇಗದ ಹಾಡುಗಳ ಜತೆಗೆ ಮಾಧುರ್ಯಮಯ ಗೀತೆಗಳೂ ಮೂಡಿಬಂದಿವೆ. ನೃತ್ಯ ಹಾಗೂ ಸಾಹಸ ದೃಶ್ಯಗಳಲ್ಲಿ ನಿರಂಜನ್ ಅವರ ಸಮರ್ಪಣಾಭಾವ ಗಮನ ಸೆಳೆಯುತ್ತದೆ.

ಚಿತ್ರದ ಪ್ರತಿಯೊಂದು ಪಾತ್ರದಲ್ಲೂ ಒಂದೊಂದು ‘ಕಿಡಿ’ ಅಡಗಿದ್ದು, ಅದು ಯಾವಾಗ ಮತ್ತು ಏಕೆ ಸಿಡಿಯುತ್ತದೆ ಎಂಬುದೇ ಚಿತ್ರದ ಪ್ರಮುಖ ಕುತೂಹಲವಾಗಿದೆ. ಜಾಕಿ ಭಾವನಾ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಚನಾ ಇಂದರ್ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ.

‘ಸ್ಪಾರ್ಕ್’ ಚಿತ್ರದ ಮತ್ತೊಂದು ವಿಶೇಷವೆಂದರೆ ಲವ್ಲಿಸ್ಟಾರ್ ಪ್ರೇಮ್ ಮೊದಲ ಬಾರಿಗೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಅವರು ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಗಣೇಶ್ ರಾವ್ ಕೇಸರ್ಕರ್, ಅಶ್ವಿನ್ ಹಾಸನ್, ಧರ್ಮಣ್ಣ, ವಿಜಯ್ ಚೆಂಡೂರ್, ನೀನಾಸಂ ಅಶ್ವಥ್ ಸೇರಿದಂತೆ ಹಲವು ಪೋಷಕ ನಟರು ಚಿತ್ರದಲ್ಲಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಶುಭಂ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಾಂತೇಶ್ ಹಂದ್ರಾಳ್ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ನಿರ್ಮಾಪಕಿ ಗರೀಮಾ ಅವಿನಾಶ್ ವಸಿಷ್ಠ ಚಿತ್ರಕ್ಕೆ ಅಗತ್ಯವಾದ ಬಂಡವಾಳ ಹೂಡಿದ್ದಾರೆ. ಚಿತ್ರದ ಟ್ರೇಲರ್‌ಗೆ ನಟ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಪ್ರೀಮಿಯರ್ ಪ್ರದರ್ಶನಗಳು ಬೆಂಗಳೂರಿಗೆ ಸೀಮಿತವಾಗಿರುವ ಸಂದರ್ಭದಲ್ಲಿ ‘ಸ್ಪಾರ್ಕ್’ ಸಿನಿಮಾದ ಮೊದಲ ಪ್ರದರ್ಶನವನ್ನು ಶಿವಮೊಗ್ಗದಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಶಿವಮೊಗ್ಗ ಸಿನಿಮಾಸ್ ಅಡ್ಡದ ರಘು ಗುಂಡ್ಲು ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...