Friday, August 28, 2026
Friday, August 28, 2026

National Sports Day ಆಗಸ್ಟ್ 29, ” ಖೇಲೇಗಾ ಭಾರತ್,ಜಿತೇಗಾ ಭಾರತ್ “ಧ್ಯೇಯವಾಕ್ಯದ” ಕ್ರೀಡಾ ದಿನಾಚರಣೆ”ಗೆ ಸಿದ್ಧತೆ

Date:

National Sports Day ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಶ್ರಾಯದಲ್ಲಿ ಆಗಸ್ಟ್ 29 ರಂದು ಬೆಳಿಗ್ಗೆ 6.30 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ಮೇಜರ್ ಧ್ಯಾನ್‌ಚಂದ್ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ನವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎಸ್. ಚನ್ನಬಸಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ. ಸಿಇಓ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಅಧಿಕಾರಿ ವರ್ಗದವರು ಹಾಗೂ ಸಿಬ್ಬಂದಿಗಳು ಮತ್ತು ವಿವಿಧ ಸಂಘಟನೆಯ ಮುಖಂಡರು ಭಾಗವಹಿಸುವರು.
National Sports Day ಖೇಲೇಗಾ ಭಾರತ್, ಜಿತೇಗಾ ಭಾರತ್ ಎಂಬ ಧ್ಯೇಯವಾಕ್ಯದೊಂದಿಗೆ ಆ. 28 ರಿಂದ 30 ರವರೆಗೆ 3 ದಿನಗಳ ಕಾಲ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದ್ದು, ಈ ಅಭಿಯಾನದ ಮುಖ್ಯ ಉದ್ದೇಶ “ಏಕ್ ಘಂಟಾ ಖೇಲ್ ಕೆ ಮೈದಾನ್ ಮೇನ್” ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬ ನಾಗರೀಕರು ಕನಿಷ್ಠ ಒಂದು ಗಂಟೆ ಆಟದ ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದಾಗಿದೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ರಾಜ್ಯದ ಶಾಲಾ ಕಾಲೇಜುಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನೆಹರು ಕ್ರೀಡಾಂಗಣದಲ್ಲಿ ಆ. 28 ರಂದು ಬೆಳಿಗ್ಗೆ 6 ಕ್ಕೆ ಯೋಗ ಅರಿವು, ಆ.29 ರಂದು ಬೆಳಿಗ್ಗೆ 7ಕ್ಕೆ ಮ್ಯಾರಾಥಾನ್ (5.ಕೆ) ಹಾಗೂ ಆ. 30 ರಂದು ಬೆಳಿಗ್ಗೆ 7 ಕ್ಕೆ ಸೈಕ್ಲೋಥಾನ್, ಬೆಳಿಗ್ಗೆ 08ಕ್ಕೆ ಜುಂಬಾ ಮತ್ತು ಬೆಳಿಗ್ಗೆ 10 ಕ್ಕೆ ಗೋಪಾಳ ಕ್ರೀಡಾ ಸಂಕೀರ್ಣದಲ್ಲಿ ಟೇಬಲ್ ಟೆನ್ನಿಸ್ ಸ್ಫರ್ಧೆ ಏರ್ಪಡಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕಾ.ತ.ಚಿಕ್ಕಣ್ಣನವರ ‘ಮನಸು ಮುಗಿಲು’

-ಡಾ. ರವಿ ಎಂ. ಸಿದ್ಲಿಪುರ Klive Special Article ಕನ್ನಡ ಸಣ್ಣಕಥಾ ಪರಂಪರೆಯಲ್ಲಿ...

Rotary Club Shimoga ಇಂಟರಾಕ್ಟ್ ಕ್ಲಬ್ ಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆ: ಸುಮತಿ ಜಿ.ಕುಮಾರಸ್ವಾಮಿ

Rotary Club Shimoga ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಾರ್ವಜನಿಕ...