Thursday, August 27, 2026
Thursday, August 27, 2026

Karnataka Janapada Academy “ಜಾನಪದ ಸಂಗಮ” ಯೋಜನೆಯಡಿ ಪರಿಶಿಷ್ಟ ಪಂಗಡದ ಜನಪದ ಕಲಾವಿದರು, ವಿದ್ವಾಂಸರು,ಗಾಯಕರಾಗಲು ತರಬೇತಿ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನ

Date:

Karnataka Janapada Academy ಕರ್ನಾಟಕ ಜಾನಪದ ಅಕಾಡೆಮಿಯು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ “ಜಾನಪದ ಸಂಗಮ” ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು, ಜಾನಪದ ಕಲಾಪ್ರಕಾರದ ಉಚಿತ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಜನಪದ ಕಲಾವಿದರು, ವಿದ್ವಾಂಸರು, ವಾದ್ಯಗಾರರು ಮತ್ತು ಬುಡಕಟ್ಟು ಜನರನ್ನು ಒಳಗೊಂಡ ಈ ಕಾರ್ಯಕ್ರಮವನ್ನು ರಾಜ್ಯದ 4 ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದೆ.
16 ರಿಂದ 40 ವರ್ಷ ವಯೋಮಾನದ ಪರಿಶಿಷ್ಟ ಪಂಗಡದ (ST) ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.16-09-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು
ಅರ್ಜಿ ನಮೂನೆಯನ್ನು ಅಕಾಡೆಮಿಯ ಅಧಿಕೃತ ವೆಬ್‌ಸೈಟ್ https://janapada.karnataka.gov.in ನಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು “ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು – 560002” ಈ ವಿಳಾಸಕ್ಕೆ 16-09-2026 ರೊಳಗಾಗಿ ತಲುಪಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಇ-ಮೇಲ್ registrar.janapada@gmail.com ಅಥವಾ ದೂರವಾಣಿ ಸಂಖ್ಯೆ 080-22215509 ಅನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್ ನಮ್ರತಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕಾ.ತ.ಚಿಕ್ಕಣ್ಣನವರ ‘ಮನಸು ಮುಗಿಲು’

-ಡಾ. ರವಿ ಎಂ. ಸಿದ್ಲಿಪುರ Klive Special Article ಕನ್ನಡ ಸಣ್ಣಕಥಾ ಪರಂಪರೆಯಲ್ಲಿ...

Rotary Club Shimoga ಇಂಟರಾಕ್ಟ್ ಕ್ಲಬ್ ಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆ: ಸುಮತಿ ಜಿ.ಕುಮಾರಸ್ವಾಮಿ

Rotary Club Shimoga ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಾರ್ವಜನಿಕ...

S.N. Channabasappa “ಮನರಂಜನೆ” ಮನುಷ್ಯ ಜೀವನದ ಭಾಗ.ಆ ಸಾಂಸ್ಕೃತಿಕ ಸೊಬಗು ಜೀವನದಲ್ಲಿ ಅಡಕವಾಗಿರಬೇಕು- ಎಸ್.ಎನ್.ಚನ್ನಬಸಪ್ಪ

S.N. Channabasappa ಮಾರ್ನಾಮಿಬೈಲು ಎನ್ನುವುದು ಒಂದು ಇತಿಹಾಸ ಪ್ರಸಿದ್ದತೆ ಪಡೆದಿದೆ, ನಗರದ...

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...