ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ಸಸ್ಯ ಸಂತೆ–2026’ ಆಯೋಜಿಸಲಾಗಿದೆ.
ತೋಟಗಾರಿಕಾ ಬೆಳೆಗಳ ಬೀಜ ಮತ್ತು ಸಸಿಗಳು, ವಿವಿಧ ಸಲಕರಣೆಗಳು ಹಾಗೂ ಪರಿಕರಗಳೊಂದಿಗೆ ಒಂದೇ ಸೂರಿನಡಿ ಸಸ್ಯಗಳ ಪ್ರದರ್ಶನ, ಮಾರಾಟ ಮತ್ತು ತಾಂತ್ರಿಕ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 5 ಮತ್ತು 6ರಂದು ಎರಡು ದಿನಗಳ ಕಾಲ ನಡೆಯಲಿರುವ ಸಸ್ಯ ಸಂತೆಯು ಬೆಳಗ್ಗೆ 9 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಕೃಷಿ ವಿಜ್ಞಾನ ಕೇಂದ್ರ, ನವಿಲೆ ಆವರಣ, ಶಿವಮೊಗ್ಗದಲ್ಲಿ ನಡೆಯಲಿದೆ.
ಸಸ್ಯ ಸಂತೆಯಲ್ಲಿ ಹಣ್ಣಿನ ಬೆಳೆಗಳ ಸಸಿಗಳು, ಸಸಿ ಮತ್ತು ಕಸಿ ಗಿಡಗಳು, ಹೂ ಹಾಗೂ ಅಲಂಕಾರಿಕ ಸಸ್ಯಗಳು, ಔಷಧೀಯ ಮತ್ತು ಸುಗಂಧ ಸಸ್ಯಗಳು, ತರಕಾರಿ ಬೀಜದ ಕಿಟ್, ಹೂ ಬೀಜದ ಕಿಟ್ ಹಾಗೂ ಮೈಕ್ರೋಗ್ರೀನ್ಸ್ ಬೀಜದ ಕಿಟ್ಗಳು ಲಭ್ಯವಿರಲಿವೆ.
ಇದರೊಂದಿಗೆ ತೋಟಗಾರಿಕಾ ಉಪಕರಣಗಳು, ಹೂಕುಂಡ ಮಿಶ್ರಣ, ಜೈವಿಕ ಉತ್ಕೃಷ್ಟಗಳು ಹಾಗೂ ಸಾವಯವ ಗೊಬ್ಬರ, ಮಾಲ್ಯವರ್ಧಿತ ಹಾಗೂ ಸಂಸ್ಕರಿತ ಉತ್ಪನ್ನಗಳು ಮತ್ತು ಆಹಾರ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ.
ರೈತರು, ತೋಟಗಾರಿಕೆ ಆಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಸ್ಯ ಸಂತೆಯ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9449069274, 9482024908, 9739916660, 9480751606, 9900091832 ಹಾಗೂ 9353493824 ಸಂಪರ್ಕಿಸಬಹುದು.
