Sunday, August 23, 2026
Sunday, August 23, 2026

ಗ್ರಾಹಕ -ಕೇಂದ್ರಿತ ನಾವೀನ್ಯತೆಗಳೊಂದಿಗೆ ಭವಿಷ್ಯಕ್ಕೆ ಸಿದ್ಧವಾದ ಬಲವಾದ ಬಿಎಸ್ಎನ್ಎಲ್‌ ದೂರಸಂಪರ್ಕ ಜಾಲ ನಿರ್ಮಾಣ- ಬಿನಯ್ ಕುಮಾರ್ ಸಿನ್ಹ

Date:

ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ದೇಶದ ಪ್ರಮುಖ ಹಾಗೂ ವಿಶ್ವಾಸಾರ್ಹ ಸಾರ್ವಜನಿಕ ವಲಯದ ದೂರಸಂಪರ್ಕ ಸೇವಾ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಮೌಲ್ಯಯುತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.

ದೇಶದಾದ್ಯಂತ ಎಂತಹದ್ದೇ ಸವಾಲಿನ ಭೌಗೋಳಿಕ ಹಾಗೂ ಹವಾಮಾನ ಪರಿಸ್ಥಿತಿಗಳಿದ್ದರೂ ನಿರಂತರ, ಸುರಕ್ಷಿತ, ಕೈಗೆಟುಕುವ ಮತ್ತು ಅಂತರ್ಗತ ಡಿಜಿಟಲ್ ಸಂಪರ್ಕವನ್ನು ಒದಗಿಸಲು ಬಿ ಎಸ್ ಎನ್ ಎಲ್ ಬದ್ಧವಾಗಿದೆ. ‘ಆತ್ಮನಿರ್ಭರ ಭಾರತ’ ಮತ್ತು ‘ಡಿಜಿಟಲ್ ಇಂಡಿಯಾ’ ದೃಷ್ಟಿಕೋನದಿಂದ ಪ್ರೇರಿತಗೊಂಡು ಸ್ಥಳೀಯ ತಂತ್ರಜ್ಞಾನಗಳು ಹಾಗೂ ಗ್ರಾಹಕ-ಕೇಂದ್ರಿತ ನಾವೀನ್ಯತೆಗಳೊಂದಿಗೆ ಭವಿಷ್ಯಕ್ಕೆ ಸಿದ್ಧವಾದ ಬಲವಾದ ದೂರಸಂಪರ್ಕ ಜಾಲವನ್ನು ನಿರ್ಮಿಸಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಪ್ರಕಟಣೆಗಳು ಮತ್ತು ಕೊಡುಗೆಗಳು : ರೂ. ರೂ. ಫ್ರೀಡಂ 2.0ಆಫರ್ : ಹೊಸ ಗ್ರಾಹಕರು ಬಿಎಸ್ಎನ್ಎಲ್ ನೆಟ್‌ವರ್ಕ್ ಸೇವೆಯನ್ನು ಅನುಭವಿಸಲು ಕೇವಲ ರೂ. 1 ಕ್ಕೆ ಈ ಆಫರ್ ಲಭ್ಯವಿದೆ.
ದಿನಕ್ಕೆ 1 ಜಿಬಿ ಡೇಟಾ, ದಿನಕ್ಕೆ 100 ಎಸ್ ಎಂ ಎಸ್, ಅನಿಯಮಿತ ಧ್ವನಿ ಕರೆಗಳು ಹಾಗೂ 24 ದಿನಗಳ ಮಾನ್ಯತೆ ಒಳಗೊಂಡಿದೆ. ಬಿಎಸ್ಎನ್ಎಲ್ ಫೈಬರ್ ಫ್ರೀಡಂ ಪ್ಲಾನ್ : ತಿಂಗಳಿಗೆರೂ. 1,111 ರ ವಿಶೇಷ ಆರಂಭಿಕ ಬೆಲೆಯಲ್ಲಿ ಈ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಪ್ಲಾನ್ ದೊರೆಯಲಿದ್ದು, ಇದರೊಂದಿಗೆ ಪ್ರೀಮಿಯಂ ಡಿಜಿಟಲ್ ಮನರಂಜನಾ ಸೇವೆಗಳು ಲಭ್ಯವಿರುತ್ತವೆ.

ಬಿಎಸ್ಎನ್ಎಲ್ ಸೆಲ್ಫ್‌ಕೇರ್ & ಉಚಿತ ಎಂಟರ್‌ಟೈನ್‌ಮೆಂಟ್ ಟಿವಿ: ಬಿಎಸ್ ಎನ್ ಎಲ್ ಸೆಲ್ಫ್ ಕೇರ್ ಆ್ಯಪ್ ಮೂಲಕ ‘ಟ್ಯಾಂಗೋ’ ಚಾಲಿತ ಬಿ ಎಸ್ ಎನ್ ಎಲ್ ಎಂಟರ್‌ಟೈನ್‌ಮೆಂಟ್ ಟಿವಿಯನ್ನು ಬಳಸಿಕೊಂಡು ಉಚಿತ ಲೈವ್ ಟಿವಿ ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಸ್ಯಾಟಲೈಟ್ ಫೋನ್ ಸೇವೆ : ಸಾಮಾನ್ಯ ಮೊಬೈಲ್ ನೆಟ್‌ವರ್ಕ್‌ಗಳು ಲಭ್ಯವಿಲ್ಲದ ಅತ್ಯಂತ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಧ್ವನಿ ಕರೆಗಳಿಗಾಗಿ ಬಿ ಎಸ್ ಎನ್ ಎಲ್ ಜಾಗತಿಕ ಉಪಗ್ರಹ ದೂರವಾಣಿ ಸೇವೆಯನ್ನು (ಜಿಎಸ್ಪಿಎಸ್ ) ನೀಡುತ್ತಿದೆ ಎಂದು ಜಿ.ಎಂ. ಆದ ಬಿನಯ್ ಕುಮಾರ್ ಸಿನ್ಹ, ಡಿಜಿಎಂ ಎಸ್ ಬಿ ಕೂಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...