Thursday, October 22, 2026
Thursday, October 22, 2026

ಯಶಸ್ವಿಯಾಗಿ ನಡೆದ “ದತ್ತು ಮಾರ್ಗಸೂಚಿ 2022” ಕಾರ್ಯಾಗಾರ

Date:

ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಡಾನ್ ಬಾಸ್ಕೊ ಪುನರ್ವಸತಿ ಕೇಂದ್ರ ಭದ್ರಾವತಿ ಇವುಗಳ ಸಂಯುಕ್ತಾಶ್ರಯದಲ್ಲಿ ‘ದತ್ತು ಮಾರ್ಗಸೂಚಿ 2022, ಪೋಷಕತ್ವ ಯೋಜನೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಇತರೆ ಕಾಯ್ದೆಗಳ ಕುರಿತು’ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಶಿವಮೊಗ್ಗದ ಆಲ್ಕೊಳ 100 ಅಡಿ ರಸ್ತೆಯಲ್ಲಿರುವ ಬಾಲ ನ್ಯಾಯ ಮಂಡಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ಮಕ್ಕಳ ಕಲ್ಯಾಣ ಸಮಿತಿಯ ಮಾನ್ಯ ಅಧ್ಯಕ್ಷರಾದ ತಾಜುದ್ದೀನ್ ಖಾನ್ ನೆರವೇರಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಂಜುನಾಥ್ ಆರ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಾಲನ್ಯಾಯ ಮಂಡಳಿಯ ಸದಸ್ಯರಾದರೇಖಾ ಜಿ. ಎಂ., ಬೆಂಗಳೂರಿನ ಭಾಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ವರ್ಗೀಸ್ ಪಲ್ಲಿಪುರಂ ಹಾಗೂ ಭದ್ರಾವತಿ ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ಕ್ರಿಸ್ತ ರಾಜ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ತಾಜುದ್ದೀನ್ ಖಾನ್ ,ಅಧ್ಯಕ್ಷರು, ಸಿ.ಡಬ್ಲ್ಯೂ.ಸಿ ಶಿವಮೊಗ್ಗ ಇವರು ದತ್ತು ಹಾಗೂ ಪೋಷಕತ್ವ ಯೋಜನೆಯ ಕುರಿತು ಉಪನ್ಯಾಸ ನೀಡಿದರು.

ಗಣೇಶ್ ಹೆಚ್ ರಕ್ಷಣಾಧಿಕಾರಿಗಳು – ಅಸಾಂಸ್ಥಿಕ, ಡಿ.ಸಿ.ಪಿ.ಯು ಶಿವಮೊಗ್ಗ ಇಬರು ದತ್ತು ಮಾರ್ಗಸೂಚಿ 2022, ದತ್ತು ಪ್ರಕ್ರಿಯೆ ಹಾಗೂ ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆದಲ್ಲಿ ಎದುರಿಸಬೇಕಾಗುವ ಶಿಕ್ಷೆ ಮತ್ತು ದಂಡದ ಕುರಿತು ವಿವರವಾದ ಮಾಹಿತಿ ನೀಡಿದರು.

ಶಿವಮಲ್ಲು ರಾಜ್ಯ ಯೋಜನಾ ಸಂಯೋಜಕರು, ಭಾಸ್ಕೋ ಬೆಂಗಳೂರು ಇವರು ಪೋಷಕತ್ವ ಯೋಜನೆಯ ಜಾರಿ ಮತ್ತು ಅದರ ಮಹತ್ವದ ಕುರಿತು ತಿಳಿಸಿಕೊಟ್ಟರು.
ಈ ತರಬೇತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಶುಶ್ರೂಷಕರು, ಜಿಲ್ಲೆಯ ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ಪೋಷಕತ್ವ ಯೋಜನೆಯ ಸಂಭಾವನೆಯ ಪೋಷಕರು ಸಕ್ರಿಯವಾಗಿ ಭಾಗವಹಿಸಿದ್ದರು.

ಪ್ರಮೋದ್ , ಆಪ್ತ ಸಮಾಲೋಚಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗ ಇವರು ಸ್ವಾಗತಿಸಿದರು.
ಭರತ್ ಎಸ್. ಎಂ. ರಕ್ಷಣಾಧಿಕಾರಿಗಳು – ಅಸಾಂಸ್ಥಿಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗ ಇವರು ನಿರೂಪಿಸಿದರು.
ರಮೇಶ್, ಕ್ಷೇತ್ರ ಕಾರ್ಯಕರ್ತರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗ ಇವರು ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...

Klive Special Article ಶರನ್ನರಾತ್ರಿ…-೯.ಸಿದ್ಧಿಧಾತ್ರಿ ದೇವಿ ಆರಾಧನೆ. ಲೇ: ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article "ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ...