2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ ವ್ಯಾಪ್ತಿಯ ವಿವಿದ ಕಾಲೇಜುಗಳ ಪಿಜಿ ಕೇಂದ್ರಗಳಲ್ಲಿರುವ ಎಲ್ಲಾ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಇದೇ ಆಗಸ್ಟ್ 13 ಮತ್ತು 14 ರಂದು ಪ್ರವೇಶಾತಿ ಕೌನ್ಸಿಲಿಂಗ್ ನಡೆಯಲಿದೆ. ಜ್ಞಾನ ಸಹ್ಯಾದ್ರಿ ಆವರಣದಲ್ಲಿರುವ ಆಯಾ ವಿಭಾಗಗಳಲ್ಲಿಯೇ ಕೇಂದ್ರಿಕೃತ ಕೌನ್ಸಿಲಿಂಗ್ ಮೂಲಕ ವಿಶ್ವವಿದ್ಯಾಲಯ ಮತ್ತು ಎಲ್ಲಾ ಕಾಲೇಜುಗಳ ಪ್ರವೇಶಾತಿ ನಡೆಯಲಿದೆ.
Kuvempu University ಈಗಾಗಲೇ ವಿಷಯವಾರು ಕ್ರೋಢೀಕೃತ ಮೆರಿಟ್ ಪಟ್ಟಿಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಯಾ ವಿಭಾಗಗಳಲ್ಲಿ ಬೆಳಗ್ಗೆ 9.30ಕ್ಕೆ ಹಾಜರಿರಲು ತಿಳಿಸಲಾಗಿದೆ. ಆಗಸ್ಟ್ 13ರಂದು ಮೆರಿಟ್ ಕೋಟಾದಲ್ಲಿ ಪ್ರವೇಶಾತಿ ನಡೆಯಲಿದ್ದು, ಆ. 14ರಂದು ಮೆರಿಟ್ ಕಂ ಪೇಮೆಂಟ್ ಕೋಟದಲ್ಲಿ ಪ್ರವೇಶಾತಿ ಪಡೆಯಬಹುದು ಎಂದು ವಿವಿಯ ಶೈಕ್ಷಣಿಕ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
