Wednesday, September 16, 2026
Wednesday, September 16, 2026

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

Date:

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್ ಆಫ್ ಪ್ರೊಟೆಸ್ಟ್’ ಇಂಗ್ಲಿಷ್ ಕೃತಿಯ ಕನ್ನಡ ಅನುವಾದಿತ ಕೃತಿ ‘ಪ್ರತಿಭಟನೆಯ ಧ್ವನಿಗಳು’ ಪುಸ್ತಕ ಬಿಡುಗಡೆ ಸಮಾರಂಭ ಶುಕ್ರವಾರ ಸಂಜೆ ಆಲ್ಕೊಳದ ರೋಟರಿ ಸೆಂ ಟ್ರಲ್ ಭವನದಲ್ಲಿ ನಡೆಯಿತು.

ವಾಲೆಮನೆ ಬಳಗದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಅನುವಾದಿತ ಕೃತಿ ಬಿಡುಗಡೆ ಜೊತೆಗೆ ಚನ್ನಪ್ಪ ಅವರ 62ನೇ ಜನ್ಮ ದಿನಾಚರಣೆ ಮತ್ತು ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ ಹಾಗೂ ಗೆಳೆಯರು ಮತ್ತು ಬಂಧುಗಳಿಂದ ಸನ್ಮಾನ ಕೂಡ ನಡೆಯಿತು.

ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ ಶಾಸಕ ಎಸ್.ಎನ್. ಚನ್ನಬಸಪ್ಪ, ನಿವೃತ್ತಿ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ.

ಇಂತಹ ಸಂದರ್ಭದಲ್ಲಿ ಅವರ ಕೃತಿ ಹೆಚ್ಚು ಮಹತ್ವ ಪಡೆಯಲಿ. ಅವರು ಮತ್ತಷ್ಟು ಬರೆಯಲಿ. ನಿವೃತ್ತಿ ಬದುಕು ಕ್ರಿಯಾಶೀಲವಾಗಿರಲಿ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪ್ರತಿಭಟನೆಗಳೇ ನಮ್ಮ ಹಕ್ಕುಗಳನ್ನು ಪಡೆಯುವ ಅಸ್ತ್ರವಾಗಿದೆ. ಈ ನಿಟ್ಟಿನಲ್ಲಿ ಅವರ ಕೃತಿ ಹೆಚ್ಚು ಮನ್ನಣೆ ಪಡೆದು ಯುವಕರ ತಲುಪಲಿ. ನಿವೃತ್ತಿ ಎಂದರೆ ಕೇವಲ ಹಾರ ಹಾಕಿ ಅವರನ್ನು ಅಭಿನಂದಿಸುವುದಲ್ಲ, ಅದು ಜ್ಞಾನ ಮತ್ತು ಸೇವೆಯನ್ನು ಗುರುತಿಸುವ ಕೆಲಸವೂ ಹೌದು ಎಂದರು.

ಕೃತಿಯ ಅನುವಾದಕ ಹಾಗೂ ಚಿಂತಕ ಡಾ.ಹೆಚ್.ಎಸ್. ನಾಗಭೂಷಣ್ ಮಾತನಾಡಿ, ಬರೆಯುವುದು ಕೂಡ ಸಾಮಾಜಿಕ ಹೊಣೆಗಾರಿಕೆ. ಸಾಹಿತ್ಯ ಎನ್ನುವುದು ಸಮಾಜದ ಕನ್ನಡಿ. ಹೂವು ಅರಳುವುದು, ಮಳೆ ಸುರಿಯುವುದು, ಹಕ್ಕಿ ಹಾಡುವುದು, ಹೇಗೆ ಸಹಜ ಕ್ರಿಯೆಯೋ ಹಾಗೆ ಬರೆಯುವುದು ಕೂಡ ಲೇಖಕನ ಸಹಜ ಕ್ರಿಯೆ ಎಂದರು.

ಕೀನ್ಯಾದ ಪ್ರಸಿದ್ಧ ಲೇಖಕ ನ್ಗೊಗಿ ಅವರು ಜಗತ್ತಿನ ನೋವುಗಳ ಕುರಿತು ಬರೆದ ಕೃತಿಯನ್ನು ಡಾ. ಸಿ. ಚನ್ನಪ್ಪ ವಾಲೆಮನೆ ಅವರು ‘ವಾಯ್ಸ್ ಆಫ್ ಪ್ರೊಟೆಸ್ಟ್’ ಬರೆದಿದ್ದಾರೆ. ನಾನು ಅದನ್ನು ‘ಪ್ರತಿಭಟನೆಯ ಧ್ವನಿಗಳು’ ಎಂಬ ಹೆಸರಿಟ್ಟು ಅನುವಾದಿಸಿದ್ದೇನೆ. ಕನ್ನಡಿಗರು ಅರ್ಥ ಮಾಡಿಕೊಳ್ಳಲಿ ಎಂಬ ಉದ್ದೇಶ ನನ್ನದು ಎಂದರು.

S.N. Channabasappa ಪ್ರತಿಭಟನೆಗಳನ್ನೇ ಹತ್ತಿಕ್ಕುವ ಕಾಲವಿದು. ಇದಕ್ಕೆ ಉದಾಹರಣೆ ಎಂದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಉಪವಾಸ ಸತ್ಯಾಗ್ರಹ. ವಿದ್ಯಾರ್ಥಿಗಳ ಹಿತಕ್ಕಾಗಿ ಉಪವಾಸ ಮಾಡುತ್ತಿರುವ ಒಬ್ಬ ನಾಯಕನ ಮಾತನ್ನೂ ಕೇಳಿಸಿಕೊಳ್ಳದೇ ಆ ಪ್ರತಿಭಟನೆಯ ಧ್ವನಿಯನ್ನು ರಂಪಾಟ ಎಂದು ಕರೆಯುವ ವ್ಯವಸ್ಥೆಯ ಕಾಲದಲ್ಲಿ ನಾವಿದ್ದೇವೆ. ಇಂತಹ ಸಮಯದಲ್ಲಿ ಚನ್ನಪ್ಪ ವಾಲೆಮನೆ ಅವರ ಕೃತಿ ಹೆಚ್ಚು ಪ್ರಸ್ತುತವಾಗುತ್ತದೆ. ದಮನಿತರ ಶೋಷಿತರ ಪರವಾಗಿ ಇಳಿಯುವುದೇ ಪ್ರತಿಭಟನೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿ.ಎನ್. ಪ್ರಕಾಶ್, ಜಿ.ಕಿರಣ್ ಕುಮಾರ್, ಸುರೇಖಾ ಮುರಳೀಧರ್, ಗೀತಾಂಜಲಿ ಪ್ರಕಾಶನದ ಮೋಹನ್ ಸೇರಿದಂತೆ ಹಲವರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಲಿರುವ ಡಾ.ಸಿ. ಚನ್ನಪ್ಪ ವಾಲೆಮನೆ ದಂಪತಿಗಳನ್ನು ಸನ್ಮಾನಿಸಲಾಯಿತು. ಮತ್ತು ಅವರ ಶಿಷ್ಯರು ಅವರ ಕುರಿತು ಮಾತನಾಡಿದರು.
ದೀಪಶ್ರೀ ಸ್ವಾಗತಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...