Rotary Club Shivamogga ರೋಟರಿ ಸದಸ್ಯರುಗಳಲ್ಲಿ ನಾಯಕತ್ವ, ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ಆತ್ಮವಿಶ್ವಾಸ, ವಿವಿಧ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ ಇತರೆ ಸಂಘದ ಸದಸ್ಯರುಗಳಿಗೆ ಮಾದರಿ ಎಂದು ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಶಿವಮೊಗ್ಗ ನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಇವರು ಏರ್ಪಡಿಸಿದ್ದ “ಸಂಘ ಸಂಸ್ಥೆಗಳಲ್ಲಿ ಸದಸ್ಯರ ಪಾತ್ರ” ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ ರೋಟರಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಜ್ಞಾನ, ಶಿಸ್ತು, ಮೌಲ್ಯಗಳು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಸಮಾಜಕ್ಕೆ ದಾರಿದೀಪವಾಗಿರುವ ರೊಟೇರಿಯನ್ಸ್ ಗಳ ಕೊಡುಗೆ ಸದಾ ಸ್ಮರಣೀಯ. ಯಾವ ವ್ಯಕ್ತಿಯಲ್ಲಿ ಸಾಮಾಜಿಕ ಕಳಕಳಿಯ ಗುಣಗಳಿರುತ್ತವೆಯೋ ಅಂತವರಿಗೆ ಎಲ್ಲಾ ಸ್ಥಾನಮಾನಗಳು ಸಹಜವಾಗಿ ಹುಡುಕಿಕೊಂಡು ಬರುತ್ತವೆ ಸಾಧನೆ ಯಾರೊಬ್ಬರ ಸ್ವತ್ತಲ್ಲ. ಅದು ಸಾಧಕರ ಸ್ವತ್ತು. ಅಂತಹ ಸಾಧಕರ ಸಾಧನೆಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಅಧಿಕಾರ ಎನ್ನುವುದು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ. ತಾವು ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದಲ್ಲಿ ಆಗಿರುವ ಅಭಿವೃದ್ಧಿಯ ಪರ್ವದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ಅವರು, ಜಿಲ್ಲಾ ಕೇಂದ್ರದಿಂದ ರಾಜಧಾನಿಯವರೆಗೆ ಬೆಳೆಯುವಲ್ಲಿ ಸಿ.ಎಸ್.ಷಡಾಕ್ಷರಿಯವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ಸತತ ಪರಿಶ್ರಮಗಳೇ ಪ್ರಮುಖ ಕಾರಣ. ಇದರೊಂದಿಗೆ ಅವರಲಿದ್ದ ಸೇವಾ ಮನೋಭಾವ ಮತ್ತು ಹಿಡಿದ ಕೆಲಸ ಸಾಧಿಸಬೇಕೆಂಬ ಛಲ ಅವರನ್ನು ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡಿದವು ಎಂದರು.
Rotary Club Shivamogga ಈ ಸಂದರ್ಭದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್ ಮನೋಹರ, ಪದಾಧಿಕಾರಿಗಳು, ಮಾಜಿ ಅಸಿಸ್ಟೆಂಟ್ ಅಂಡ್ ಝೋನಲ್ ಲೆಫ್ಟಿನೆಂಟ್ಸ್ ಗವರ್ನರ್, ಮಾಜಿ ಅಧ್ಯಕ್ಷರಾದ ಆದಿಮೂರ್ತಿ, ಎಚ್ ಬಿ ಗಣೇಶ್, ಎಸ್, ಶ್ರೀಕಾಂತ್ ಎನ್ ಎಚ್ , ಚಂದ್ರಹಾಸ್ ಪಿ ರಾಯ್ಕರ್, ಸುಮತಿ ಕುಮಾರಸ್ವಾಮಿ, ಕಾಸಲ ವಿ ಸುರೇಂದ್ರ, ಡಾ. ಗುಡುದಪ್ಪ ಕಸಬಿ, ಸಂತೋಷಕುಮಾರ್ ಬಿ ಎನ್ , ನಿಕಟ ಪೂರ್ವ ಅಧ್ಯಕ್ಷರಾದ ಡಿ ಕಿಶೋರ್ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಬಿ ಆರ್ ಧನಂಜಯ್ , ರಘುರಾಜ್ ಎಚ್ ಕೆ, ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್ , ಕೆ ಎನ್ ರಾಜಶೇಖರ್, ಜಗದೀಶ್, ರವಿಶಂಕರ್, ಡಿ ಎಸ್ , ಸಾಧ್ವಿ ಸಿ ಕಾಂತ್, ಸಂಜೀವ್ ಎಸ್ ಎನ್, ಅಜಿತ್ ಎಚ್ ಎಸ್, ಹೇಮಂತ್ ಎಂ ಸಿ, ಡಾ. ಅರುಣ್ ಎಂ, ಸಪ್ನಾ ಬದರಿನಾಥ್ , ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ರೊಟೇರಿಯನ್ಸ್ ಆನ್ಸ್ ಉಪಸ್ಥಿತರಿದ್ದರು.
