Saturday, August 1, 2026
Saturday, August 1, 2026

ಶಿವಮೊಗ್ಗದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆಯಿಂದ “ಮಾನ್ಸೂನ್ ಮಾರಾಟ ಮೇಳ”

Date:

ಶಿವಮೊಗ್ಗ ನಗರದ ಪಂಪನಗರ 2ನೇ ತಿರುವು ಗುತ್ತ್ಯಪ್ಪ ಕಾಲೋನಿ, ಇಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾನ್ಸೂನ್ ಮಾರಾಟ ಮೇಳವನ್ನು ಆ.05 ರಂದು ಆಯೋಜಿಸಲಾಗಿದೆ.

ಸುಮಾರು 36 ವರ್ಷದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಕೊಡುತ್ತಾ ಬರುತ್ತಿರುವ ಈ ಸಂಘವು ಕಾಂಚಿಪುರಂನಿಂದ ಬರುತ್ತಿರುವ ರೇಷ್ಮೆ ಸೀರೆಗಳ ನೇರ ಮಾರಾಟ, ಕಾಶಿ ಇಂದ ಬನಾರಸ್ ಸೀರೆಗಳು, ಫ್ಯಾನ್ಸಿ ಸೀರೆಗಳು, ಡ್ರೆಸ್ ಗಳು, ಬೆಡ್ ಲೈನರ್, ಗೃಹಪಯೋಗಿ ವಸ್ತುಗಳು, ಅಲಂಕಾರಿಕ ಸಾಮಾಗ್ರಿಗಳು, ಮನೆಯಲ್ಲಿ ತಯಾರಿಸಿದ ರುಚಿಕರ ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟವನ್ನು ನಡೆಸಲಿದೆ.

ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಿರುವ ಮಹಿಳಾ ಉದ್ಯಮಿಗಳನ್ನು ಕಾರ್ಯಕ್ರಮಕ್ಕೆ ಹುರಿದುಂಬಿಸಲು ಆಹ್ವಾನಿಸಲಾಗುತ್ತಿದೆ. ಮಲೆನಾಡಿನ ತಿಂಡಿ ತಿನಿಸುಗಳ ಸ್ಟಾಲ್ ಗಳನ್ನು ಹಳೆಯ ಝರಿ ಸೀರೆಯನ್ನು ಒಳ್ಳೆಯ ಬೆಲೆಯಲ್ಲಿ ತೆಗೆದುಕೊಳ್ಳಲಾಗುವುದು.

ಸಂಘದ ಅಧ್ಯಕ್ಷೆ ಸುಮಿತ್ರಾ ಕೇಶವ್ ಮೂರ್ತಿ,
ಕಾರ್ಯದರ್ಶಿ ನಳಿನಿ ಜಯರಾಮ್ ಹಾಗೂ ಖಜಾಂಜಿ ಸುಜಾತ ವೆಂಕಟೇಶ್, ಕಮಿಟಿ ಹಾಗೂ ಸಂಘದ ಸದಸ್ಯನಿಯರು ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9448912789, 9448792064, 7019750556 ನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...

Klive Special Article ವ್ಯಸನಮುಕ್ತ ಸಮಾಜದ ಕನಸು ಕಂಡ ಸಂತ. ಡಾ.ಮಹಾಂತ ಶಿವಯೋಗಿ.ವಿಶೇಷ ಬರಹ- ಬಿ.ವಿ.ತುಕಾರಾಂ. ಶಿವಮೊಗ್ಗ

Klive Special Article ದೇಶ ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿನ ದುಶ್ಚಟಗಳನ್ನೇ...