Monday, August 10, 2026
Monday, August 10, 2026

S.N. Channabasappa ಮುಂದಿನ ವರ್ಷ ಯೋಗ ದಿನಾಚರಣೆಗೆ ಮುನ್ನ ರಾಷ್ಟ್ರಮಟ್ಟದ ಯೋಗ ಸ್ಪರ್ಧೆ ಏರ್ಪಡಿಸೋಣ- ಎಸ್.ಎನ್.ಚನ್ನಬಸಪ್ಪ

Date:

S.N. Channabasappa ವಸುದೈವ ಕುಟುಂಬಕಂ ಎಂದು ನಂಬಿರುವ ಭಾರತ ದೇಶ ಪ್ರಪಂಚಕ್ಕೆ ನೀಡಿರುವ ಶಕ್ತಿ ‘ಯೋಗ’ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.
ಭಾರತ ಸರ್ಕಾರ, ಆಯುಷ್ ಮಂತ್ರಾಲಯ, ಕನಾಟಕ ಸರ್ಕಾರ, ಜಿಲ್ಲಾಡಳಿತ, ಶಿವಮೊಗ್ಗ ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತ ಬೋಧನಾ ಆಸ್ಪತ್ರೆ ಇವರುಗಳ ಸಹಯೋಗದಲ್ಲಿ ಭಾನುವಾರ ಬೆಳಗ್ಗೆ 6.30ಕ್ಕೆ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಿಗೂ ಶಾಂತಿ, ನೆಮ್ಮದಿ ದೊರಕಬೇಕು ಎಂದು ಬಯಸುವ ನಮ್ಮ ದೇಶ ಪ್ರಪಂಚಕ್ಕೆ ಒಳ್ಳೆಯ ಸಂಗತಿಗಳನ್ನು ನೀಡುವ ಕೆಲಸ ಮಾಡುತ್ತಾ ಬಂದಿದೆ.
ನಮ್ಮ ದೇಶ ಪ್ರಪಂಚಕ್ಕೆ ಯೋಗ ವನ್ನು ನೀಡುವ ಮೂಲಕ ಶಕ್ತಿ ತುಂಬಿದೆ. ಪ್ರಪಂಚಕ್ಕೆ ಯೋಗ ಪರಿಚಯಿಸಿದ ನಮ್ಮ ಪ್ರಧಾನಿಯವರಿಗೆ ಈ ಮೂಲಕ
ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ‌ ಎಂದರು.
ಕೊರೊನಾದಂತಹ ವೇಳೆಯಲ್ಲಿ ನಮ್ಮ‌ದೇಶ ಇತರೆ ದೇಶಗಳಿಗೆ ಲಸಿಕೆಯನ್ನು‌ ಹಂಚಿದ್ದು, ಇದೇ ರೀತಿ ಉತ್ತಮ ಅಂಶಗಳನ್ನು ನೀಡುತ್ತಾ ಬಂದಿದ್ದೇವೆ ಎಂದರು.
ಮುಂದಿನ ವರ್ಷ ಯೋಗ ದಿನಾಚರಣೆಗೂ‌ ಮುನ್ನ ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯನ್ನು ಏರ್ಪಡಿಸುವ ಭರವಸೆ ನೀಡಿದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ಇಂದು‌ ೧೯೦ ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯ.
ದೇಹ, ಮನಸ್ಸು ಮತ್ತು ಆತ್ಮ‌ವನ್ನು ಸಮತೋಲನೆಯಲ್ಲಿಡುವ ಯೋಗವನ್ನು ನಾವೆಲ್ಲರೂ ಅಭ್ಯಾಸ ಮಾಡಬೇಕು.
ಸಂಸ್ಕೃತಿ ಉಳಿಯಬೇಕಾದರೆ
ನಮ್ಮ‌ ಪರಂಪರೆ, ನಮ್ಮ ನಂಬಿಕೆಗಳು ಉಳಿಯಬೇಕು. ಇಂತಹ ಸಂಸ್ಕೃತಿಯನ್ನು ನಾವು ವಿಶ್ವಕ್ಕೆ ಹಂಚುತ್ತಿದ್ದೇವೆ. ನಮ್ಮ ಪ್ರಧಾನಿಯವರು ಇಂದು ಕೊಲ್ಕತ್ತಾ ದಲ್ಲಿ ೧ ಲಕ್ಕೂ ಅಧಿಕ‌ ಜನರೊಂದಿಗೆ ಯೋಗಾಭ್ಯಾಸ ಮಾಡಿದ್ದಾರೆ ಎಂದರು.
೨೦೪೭ ಕ್ಕೆ ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರ ಆಗಲಿದೆ. ಈ ನಿಟ್ಟಿನಲ್ಲಿ‌ ನಮ್ಮ‌ ಮತ್ತು ದೇಶದ ಆರೋಗ್ಯ ಮಹತ್ವದ ಪಾತ್ರ ವಹಿಸುತ್ತದೆ. ಆರೋಗ್ಯಯುತ ನಾಗರೀಕರೊಂದಿಗೆ, ಆರೋಗ್ಯಕರ ಬೆಳವಣಿಗೆಯೊಂದಿಗೆ ದೇಶ ಆರೋಗ್ಯಕರವಾಗಿರುತ್ತದೆ ಎಂದು ವಿಶ್ವಾಸ ವ್ತಕ್ತಪಡಿಸಿದರು.‌
ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ‌ ಮಾತನಾಡಿ, ಯೋಗ ಭಾರತದ ಶಕ್ತಿ. ‌ಹಾಗೂ ನಾವು ಪ್ರಪಂಚಕ್ಕೆ ನೀಡದೆ ಕೊಡುಗೆ. ಇಂತಹ ಪ್ರಾಚೀನ‌‌ ವಿಜ್ಞಾನವನ್ನು ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದ್ದು ಇದು ಎಲ್ಲರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಯೋಗಾಭ್ಯಾಸ ಮಾಡಲು ಯಾವುದೇ ಖರ್ಚು ಇಲ್ಲ. ಮನೆಯಲ್ಲಿಯೇ ಎಲ್ಲ ವಯೋಮಾನದವರು ಮಾಡಬಹುದು. ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ ಯೋಗಾಭ್ಯಾಸ ಮಾಡಿಸಿದರೆ ಸದೃಢ ಮಕ್ಕಳನ್ನು ಸಿದ್ದಪಡಿಸಬಹುದು . ನಮ್ಮ ವರನಟ ಡಾ. ರಾಜ್ ಕುಮಾರ್ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದು ಯುವಕರಿಗೆ ಮಾದರಿಯಾಗಿದ್ದಾರೆ ಎಂದ ಅವರು ಒಲಂಪಿಕ್ಸ್ ಲ್ಲೂ ಯೋಗವನ್ನು ಪರಿಚಯಿಸಬೇಕೆಂದು ಮನವಿ ಮಾಡಿದರು.
ತೀರ್ಥಹಳ್ಳಿ ವೈದ್ಯಾಧಿಕಾರಿ ಡಾ. ರವಿಶಂಕರ್ ಉಡುಪ ಪ್ರಾಸ್ತಾವಿಕವಾಗಿ ಯೋಗ ಒಂದು ಅದ್ಭುತ ವಿಜ್ಞಾನ. ಇದಕ್ಕೆ ೫೦೦೦ ವರ್ಷಗಳ ಇತಿಹಾಸವಿದೆ. ಹಿಂದೆ ಯೋಗಿಗಳು ಮಾನಸಿಕ ಸ್ಥೈರ್ಯ ಮತ್ತು ಆಧ್ಯಾತ್ಮ ಸಾಧನೆ ಮಾಡಲು ಇದನ್ನು ಅಭ್ಯಾಸ ಮಾಡುತ್ತಿದ್ದರು. ನಂತರದಲ್ಲಿ ಪತಂಜಲಿ ಗುರುಗಳು ಸಾಮಾನ್ಯರೂ ಈ ಅಭ್ಯಾಸ ಮಾಡಲು ಅಷ್ಟಾಂಗ ಯೋಗ ಪರಿಚಯಿಸಿದರು. ಆದ್ದರಿಂದ ಇವರನ್ನು ಯೋಗದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.
S.N. Channabasappa ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ನಮ್ಮ ಪ್ರಧಾನಿಯವರು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ೨೦೧೪ ರ ಸೆಪ್ಟೆಂಬರ್ ಮಾಹೆಯಲ್ಲಿ ವಿಷಯ ಮಂಡನೆ ಮಾಡುತ್ತಾರೆ. ೧೭೭ ರಾಷ್ಟ್ರಗಳು ಇದಕ್ಕೆ ಒಪ್ಪಿ ಸಹಿ ಮಾಡುತ್ತಾರೆ.ದೀರ್ಘವಾದ ಹಗಲು ಹೊಂದಿರುವ ಜೂನ್ ೨೧ ನ್ನು ಯೋಗ ದಿನವಾಗಿ ಆಚರಿಸಲು ನಿರ್ಧರಿಸಿ 2015 ರಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆರಂಭಿಸಲಾಗುತ್ತದೆ. ಈ ವರ್ಷ ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಸಣ್ಣ ವಯಸ್ಸಿನಿಂದಲೇ ಯೋಗಾಭ್ಯಾಸ ಆರಂಭಿಸಿದರೆ ವೃದ್ಧಾಪ್ಯ ಆರೋಗ್ಯಕರವಾಗಿರುತ್ತದೆ ಎಂದರು.
ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಕಿ ವಿಜಢತರಾದವರಿಗೆ ಹಾಗೂ ಯೋಗಾಭ್ಯಾಸದಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಯೋಗ ಕಾರ್ಯಕ್ರಮದ ವಿವರ: ಬೆಳಗ್ಗೆ 6.45 ರಿಂದ 7.00 – ಯೋಗಗೀತೆ, ಬೆಳಗ್ಗೆ 7.00 ರಿಂದ 7.45 -ಯೋಗ ಪ್ರದರ್ಶನ, ಬೆಳಗ್ಗೆ 8.00 ರಿಂದ 8.45 – ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆಯುಷ್ ಅಧಿಕಾರಿ ಡಾ.ಲಿಂಗರಾಜ್ ಹಿಂಡಸಗಟ್ಟಿ, ಡಿಡಿಪಿಐ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಕೆಎಸ್ ಆರ್ ಪಿ ಡೆಪ್ಯುಟಿ ಕಮಾಂಡೆಂಟ್ ಮಂಜುನಾಥ್ ಅಣತಿ,
ಸರ್ಕಾರಿ ಆಯುರ್ವೇದ ವೈದಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯ ಪ್ರಾಚಾರ್ಯರಾದ ಡಾ. ವೀಣಾ ಎಂ.ಎಸ್, ಬಾಪೂಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ
ಡಾ. ಶೀಲಾ, ಡಾ.ಮಹೇಶ್, ವೈದ್ಯಾಧಿಕಾರಿಗಳು, ಕೆಎಸ್ ಆರ್ ಪಿ, ರ್ಯಾಪಿಡ್ ಆಕ್ಷನ್ ಫೋರ್ಸ್, ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ, ಜಿಲ್ಲಾ ಆಯುಷ್ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ತೀರ್ಥಹಳ್ಳಿ ಬಳಿ ಗುಡ್ಡ ಕುಸಿತದಿಂದ ಸಾವಿನ ಅವಘಡ: ಸಚಿವ ಮಧು ಬಂಗಾರಪ್ಪ ಮೌಖಿಕ ಪರಿಶೀಲನೆ, ಪರಿಹಾರಕ್ಕೆ ಶೀಘ್ರ ಕ್ರಮ

Madhu Bangarappa ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ...

Madhu Bangarappa ಗ್ರಾಮೀಣರಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಮನವರಿಕೆ ಮಾಡಿ, ಹೆಚ್ಚಿನ ಜನಕ್ಕೆ ಕೆಲಸ ನೀಡಿ- ಮಧು ಬಂಗಾರಪ್ಪ

Madhu Bangarappa ಬರಗಾಲದ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ...

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...