ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು ಇಂತಹ ಸಹಕಾರಿ ಸಂಸ್ಥೆಗಳು ಇನ್ನಷ್ಟು ಬಲಿಷ್ಠವಾಗಬೇಕು” ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ವಿನೋಬನಗರದ ಕರಿಯಣ್ಣ ಬಿಲ್ಡಿಂಗ್ ಸಮೀಪದ ಈಶ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ನಿರ್ಮಿಸಿದ “ಗೆಳೆಯರ ಬಳಗ ಸೌಹಾರ್ದ ಸಹಕಾರಿ ಸಂಘ”ಕ್ಕೆ ಆಗಮಿಸಿ ಶ್ರೀಗಳು ಆಶೀರ್ವದಿಸಿ ಮಾತನಾಡಿದರು.
“ಗೆಳೆಯರ ಬಳಗ ಎನ್ನುವುದು ಕೇವಲ ಸ್ನೇಹಿತರ ಗುಂಪಲ್ಲ; ಅದು ಪರಸ್ಪರ ವಿಶ್ವಾಸ, ಸಹಕಾರ, ಮಾನವೀಯತೆ ಮತ್ತು ಸಮಾಜಸೇವೆಯ ಜೀವಂತ ಪ್ರತೀಕವಾಗಿದೆ. ದ.ರಾ. ಬೇಂದ್ರೆಯವರು ಪ್ರತಿಪಾದಿಸಿದ ಈ ಆದರ್ಶವನ್ನು ಸಂಘವು ತನ್ನ ಕಾರ್ಯಚಟುವಟಿಕೆಗಳ ಮೂಲಕ ಇಂದು ಸಾಕಾರಗೊಳಿಸುತ್ತಿದೆ. ಸದಸ್ಯರ ಆರ್ಥಿಕ ಸಬಲೀಕರಣದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಈ ಸಂಘವು ಸಹಕಾರ ಕ್ಷೇತ್ರದಲ್ಲಿ ಮಾದರಿಯಾಗಿ ಬೆಳೆಯಲಿ. ಗೆಳೆಯರ ಬಳಗದ ಈ ಒಗ್ಗಟ್ಟು ಮತ್ತು ಸೇವಾ ಮನೋಭಾವ ಇನ್ನಷ್ಟು ವಿಸ್ತಾರವಾಗಿ ಸಮಾಜದ ಎಲ್ಲ ವರ್ಗಗಳಿಗೂ ತಲುಪಲಿ” ಎಂದು ಅವರು ಆಶೀರ್ವಚನ ನೀಡಿದರು.
ಸಹಕಾರ ತತ್ವ, ಸಮಾಜ ಸೇವೆ, ಮಾನವೀಯ ಮೌಲ್ಯಗಳು ಹಾಗೂ ಸಂಘದ ಬೆಳವಣಿಗೆಯ ಕುರಿತು ಅನುಭವಪೂರ್ಣ ಸಂದೇಶದ ಮೂಲಕ ಎಲ್ಲರಿಗೂ ಸ್ಫೂರ್ತಿ ತುಂಬಿದರು.
ಸಂಘದ ಅಧ್ಯಕ್ಷರಾದ ಎಂ.ಆರ್. ಅನಿಲ್ ಕುಂಚಿ, ಸತೀಶ್ ಗೌಡ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಸ್ವಾಮಿ ಎಂ.ಕೆ., ಆರ್.ಎಚ್. ಜಯವರ್ಧನ್ ಎನ್.ಎಲ್., ಶಾಶ್ವತಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾಂತ ಸುರೇಂದ್ರ, ನಿರ್ದೇಶಕರಾದ ಜಯಂತಿ, ಪುಷ್ಪ ಎಂ., ದೇವರಾಜ್ ಹೆಚ್.ಬಿ., ಗುಡ್ಡೋಜಿರಾವ್ ಪಿ., ನಾಗಭೂಷಣ್, ಕುಶಾಲ್, ವಿಜಯಕುಮಾರ್, ಕಾವ್ಯ, ಅನುಷಾ ಹಾಗೂ ಅಪೂರ್ವ ಅವರು ಉಪಸ್ಥಿತರಿದ್ದರು.
ಇದೇ ವೇಳೆ ಬಿಜೆಪಿ ಮುಖಂಡರಾದ ಉಮೇಶ್ ನಾಯ್ಕ್, ಮಲ್ಲಿಕ್ ಅಣ್ಣ, ಜಗದೀಶ್, ಶಿಲ್ಪ, ದೀಪ, ಲಲಿತ, ಚೇತನ್ ಶೆಟ್ಟಿ, ಲಕ್ಷ್ಮಿಕಾಂತ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ, ಶೇರುದಾರರು, ಗಣ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
