Sunday, June 7, 2026
Sunday, June 7, 2026

Backward Classes Welfare Department 2026-27 ನೇ ಸಾಲಿಗೆ ಸರ್ಕಾರದ ಬುಡಕಟ್ಟು ಆಶ್ರಮ ವಸತಿ ಶಾಲೆಗೆ ಒಂದು ವರ್ಷ ಅವಧಿಗೆ 8 ಅತಿಥಿ ಶಿಕ್ಷಕರ ನೇಮಕಾತಿ.

Date:

Backward Classes Welfare Department 2026-27ನೇ ಸಾಲಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ವಸತಿಶಾಲೆ-ಹಕ್ಕಿಪಿಕ್ಕಿ ಕ್ಯಾಂಪ್, ಸದಾಶಿವಪುರ ಶಿವಮೊಗ್ಗ ತಾಲೂಕು ಹಾಗೂ ಹಿರೇಮನೆ, ಸಾಗರ ತಾಲೂಕು ಇಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಒಂದು ವರ್ಷದ ಅವಧಿಗೆ ಖಾಲಿಯಿರುವ 8 ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಕನ್ನಡ, ಇಂಗ್ಲೀಷ್, ಗಣಿತ, ವಿಜ್ಞಾನ, ಹಿಂದಿ, ಸಮಾಜವಿಜ್ಞಾನ ಹಾಗೂ ದೈಹಿಕ ಶಿಕ್ಷಣ ವಿಷಯಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಪಿ.ಯು.ಸಿ., ಡಿ.ಇಡಿ ಮತ್ತು ಟಿಇಟಿ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಬಿಎ/ಬಿಎಸ್ಸಿ, ಬಿ.ಇಡಿ ಹಾಗೂ ಟಿಇಟಿ ವಿದ್ಯಾರ್ಹತೆ ಕಡ್ಡಾಯವಾಗಿದೆ.

Backward Classes Welfare Department ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಜೂ. 10 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08182-200266 ಹಾಗೂ ಶಿವಮೊಗ್ಗ ಮತ್ತು ಸಾಗರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadra Achukattu Area Development ರೈತರು ನೀರನ್ನ ಮಿತ ಬಳಸಿ,ಬಹುಬೆಳೆ ಮಾದರಿ ಅನುಸರಿಸಿ ಮಣ್ಣಿನ ಫಲವತ್ತತೆ ಕಾಪಾಡಬೇಕು,- ಡಾ.ಕೆ.ಪಿ.ಅಂಶುಮಂತ್.

Bhadra Achukattu Area Development ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ...

VISL ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳ ಶೈಕ್ಷಣಿಕ ಮತ್ತು ವೃತ್ತಿಪರ ಜೀವನವು ಯಶಸ್ವಿಯಾಗಲಿ- ಅನುಪ್ ಕುಮಾರ್

VISL ವಿಐಎಸ್‌ಎಲ್ ಉದ್ಯೋಗಿಗಳ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಸೈಲ್ ಸಂಸ್ಥೆಯು ತನ್ನ ಉದ್ಯೋಗಿಗಳ ಮಕ್ಕಳ...

SHARATH ANANTHAMURTHY ಶಿಕ್ಷಣದ ಜೊತೆ ಕೌಶಲ್ಯಾಭಿವೃದ್ಧಿ ಹೊಂದದಿದ್ದರೆ ಅದು ಅಪೂರ್ಣ- ಪ್ರೊ.ಶರತ್ ಅನಂತ ಮೂರ್ತಿ.

SHARATH ANANTHAMURTHY ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ ಹೊಂದದಿದ್ದರೆ ಅದು ಅಪೂರ್ಣವಾಗಿರುತ್ತದೆ. ಕೇವಲ...