Thursday, July 23, 2026
Thursday, July 23, 2026

Akashavani Bhadravati ಜೂನ್ ತಿಂಗಳ ಪ್ರತೀ ಭಾನುವಾರ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ” ಜೈಲು ಹಕ್ಕಿಗಳ ಗಾನಸುಧೆ” ಆಲಿಸಿ.

Date:

Akashavani Bhadravati ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00 ರಿಂದ 5.00ರವರೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಬಂದಿ ಕಲಾವಿದರಿಂದ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಜೈಲು ಹಕ್ಕಿಗಳ ಗಾನಸುಧೆ ಎಂಬ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಅಪರಾಧವನ್ನು ದ್ವೇಷಿಸು, ಅಪರಾಧಿಯನ್ನಲ್ಲ ಎಂಬ ತತ್ವದಡಿಯಲ್ಲಿ ಬಂದಿಗಳ ಮನಃಪರಿವರ್ತನೆಗಾಗಿ ಸಕಾರಾತ್ಮಕ ಸುಧಾರಣೆಯೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಸೇರಿಸುವುದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಧ್ಯೇಯವಾಗಿರುತ್ತದೆ. 20 ಜನ ಬಂದಿಗಳನ್ನು ಉತ್ತಮ ಹಾಡುಗಾರರೆಂದು ಗುರುತಿಸಿ ಹಾಡುಗಳನ್ನು ಹಾಡಲು ಅಕಾಶ ಕಲ್ಪಿಸಲಾಗಿದ್ದು, Akashavani Bhadravati ಹಾಡುಗಳೊಂದಿಗೆ ಅವರ ಬದುಕಿನ ಪರಿವರ್ತನ ಸನ್ನಿವೇಶಗಳನ್ನು ಮತ್ತು ಮುಕ್ತ ಮನಸ್ಸಿನ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಆಸಕ್ತ ಕೇಳುಗರು ತಮ್ಮ ಮೊಬೈಲ್‌ನಲ್ಲಿ “NEWS ON AIR APP” ಡೌನ್ಲೋಡ್ ಮಾಡಿಕೊಂಡು 103.5 MHz and 101.4 MHz Frequency ಇಲ್ಲಿ ಕಾರ್ಯಕ್ರಮವನ್ನು ಕೇಳಬಹುದಾಗಿರುತ್ತದೆ.
ಪ್ರಚಾರದ ಆಡಿಯೋ ಲಿಂಕ್ https://www.image2url.com/r2/default/audio/1780556525429-149a6f75-62fb-4bf0-b385-3f0f40966105.mp3
ಸಾರ್ವಜನಿಕರು ಈ ಕಾರ್ಯಕ್ರಮವನ್ನು ಕೇಳಿ, ಆನಂದಿಸಿ, ಪ್ರೋತ್ಸಾಹಿಸುವಂತೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...

Dr. G. Parameshwara ಎಸ್ ಐ ಆರ್ ಪ್ರಕ್ರಿಯೆ: ಜನರಿಗೆ ತೊಂದರೆಯಾಗದಂತೆ ಕ್ರಮ- ಡಾ.ಜಿ.ಪರಮೇಶ್ವರ

Dr. G. Parameshwara ಕೇಂದ್ರ ಸರ್ಕಾರದ ಎಸ್‌ಐಆರ್‌ ಪ್ರಕ್ರಿಯೆಗೆ ಅಗತ್ಯ...