Wednesday, September 9, 2026
Wednesday, September 9, 2026

ನಾವು ಪಾರ್ಕಿನಲ್ಲಿ ನೆಟ್ಟ ಪ್ರತೀ ಗಿಡವೂ ಭವಿಷ್ಯದ ಜೊತೆ ನಾವು ಮಾಡಿಕೊಂಡ ಒಪ್ಪಂದ- ಕಲಗೋಡು ರತ್ನಾಕರ್

Date:

ಗೋಪಾಲಗೌಡ ಬಡಾವಣೆ ಯಲ್ಲಿರುವ ಚಂದನ ಆರೋಗ್ಯ ಪಾರ್ಕ್‌ ನಲ್ಲಿ ಇಂದು ಸಡಗರ ಸಂಭ್ರಮದಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಮುಂಜಾನೆ ಯಿಂದಲೇ ಸದಸ್ಯರು ಇಡೀ ಪಾರ್ಕನ್ನು ಸ್ವಚ್ಚಗೊಳಿಸಿದರು…ಪ್ಲಾಸ್ಟಿಕ್ ಮುಕ್ತ ಮಾಡಿದರು…ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಪಾರ್ಕ್ ನ ಗೌರವ ಅದ್ಯಕ್ಷ ಕಲಗೋಡು ರತ್ನಾಕರ್
ಚಂದನವನ ಪಾರ್ಕ್ – ಹೆಸರೇ ಒಂದು ವಾಗ್ದಾನ. ನಗರೀಕರಣದ ರಭಸದಲ್ಲಿ ಕಳೆದು ಹೋಗ್ತಿರುವ ಹಸಿರಿಗೆ ನಾವು ಕಟ್ಟಿದ ಸಣ್ಣ ಆಶ್ರಯ ಇದು. ಇಲ್ಲಿ ನೆಟ್ಟ ಪ್ರತೀ ಗಿಡವೂ ಭವಿಷ್ಯದ ಜೊತೆ ನಾವು ಮಾಡಿಕೊಂಡ ಒಪ್ಪಂದ ಎಂದರು.
ಪಾರ್ಕ್ ನ ಕಾರ್ಯದರ್ಶಿ
ಗುರುರಾಜ್ ಎಲ್ ಮಾತಾನಾಡಿ, ಪರಿಸರ ರಕ್ಷಣೆ ಅಂದರೆ ಸೆಲ್ಫಿ ತಗೊಂಡು ಗಿಡ ನೆಡೋದು ಅಲ್ಲ. ಅದು ದೈನಂದಿನ ಬದುಕಿನ ಅಭ್ಯಾಸ. ಪ್ಲಾಸ್ಟಿಕ್ ಕಡಿಮೆ ಮಾಡೋದು, ನೀರನ್ನು ಗೌರವಿಸೋದು, ಮಣ್ಣಿನ ಫಲವತ್ತತೆ ಕಾಪಾಡೋದು. ನಮ್ಮ ಕರ್ತವ್ಯ ಎಂದರು
ಅಭಿವೃದ್ಧಿ ಅಂದರೆ ಕಾಂಕ್ರೀಟ್ ಮಾತ್ರ ಅಲ್ಲ. ಅಭಿವೃದ್ಧಿ ಅಂದರೆ ಸಮತೋಲನ. ನಾವು ಕಟ್ಟಿದ ಕಟ್ಟಡಕ್ಕಿಂತ ಹೆಚ್ಚು ಗಿಡ ಬೆಳೆಸಿದ್ದೇವೆಯೇ? ನಾವು ಬಳಸಿದ ನೀರಿಗಿಂತ ಹೆಚ್ಚು ನೀರು ಉಳಿಸಿದ್ದೇವೆಯೇ? ಈ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾಗ ಮಾತ್ರ ನಮ್ಮ ಅಭಿವೃದ್ಧಿ ಸುಸ್ಥಿರವಾಗುತ್ತೆ. ಎಂದರು.
ಕ್ರೀಡಾ ಕಾರ್ಯದರ್ಶಿ ಜಿ ಎಸ್ ಶಿವಕುಮಾರ್ ಮಾತಾನಾಡಿ

ನಮ್ಮ ಪಾರ್ಕ್‌ನ ಪ್ರತೀ ಮರವೂ ಒಂದು ಪಾಠ ಹೇಳುತ್ತೆ – ಬೆಳೆಯಲು ಬೇರು ಬೇಕು, ಬದುಕಲು ಮಣ್ಣು ಬೇಕು. ಮಣ್ಣು ಸತ್ತರೆ ಸಂಸ್ಕೃತಿಯೂ ಬದುಕಲ್ಲ ಎಂದರು.
ಪಾರ್ಕ್ ನ ಹಲವು ಸದಸ್ಯರು ಮಾತಾಡಿ
ಇವತ್ತು ನಾವು ಇಲ್ಲಿ ಸೇರಿದ್ದು ಪ್ರತಿಜ್ಞೆಗಾಗಿ. “ನನ್ನಿಂದ ಒಂದು ಗಿಡ, ನನ್ನ ಮನೆಯಿಂದ ಒಂದು ಪ್ಲಾಸ್ಟಿಕ್ ಕಡಿಮೆ” – ಈ ಸಣ್ಣ ನಿರ್ಧಾರವೇ ದೊಡ್ಡ ಬದಲಾವಣೆಯ ಮೊದಲ ಹೆಜ್ಜೆ.

ಬನ್ನಿ, ಚಂದನವನವನ್ನು ಕೇವಲ ಪಾರ್ಕ್ ಆಗಿ ಉಳಿಸದೆ, ಪರಿಸರ ಪ್ರಜ್ಞೆಯ ಪಾಠಶಾಲೆಯನ್ನಾಗಿ ಮಾಡೋಣ. ಎಂದು ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಪಾರ್ಕಿನ ಸಂಘಟನಾ ಕಾರ್ಯದರ್ಶಿ ಅಶೋಕ್, ಸದಸ್ಯರುಗಳಾದ,ಚಂದ್ರು,ಬಸವರಾಜ್ ಎಚ್ .ಕೆ.
ರಂಗೇಗೌಡ್ರು,ಡಾ.ಗೌತಮ್,ಮಾಲತೇಶ್,ಎ. ಹಾಲೇಶಪ್ಪ,ಜಿ .ಕೆಂಚಪ್ಪ,ಪ್ರಕಾಶ್, ಮಂಜುನಾಥ್, ಸತೀಶ್, ಪಾಂಡುರಂಗ, ಬೋರೇಗೌಡರು,ದೇವರಾಜ್,ಚಂದ್ರನಾಯ್ಕ್,ಶಶಿಧರ್,ನವಿಲಪ್ಪ,ರಘು,ರೋಹಿತ್,ಸತೀಶ್,ಶಿವಪ್ಪ,ಚಂದ್ರಪ್ಪ,ರಾಜು,ವಿಜಯಕುಮಾರ್,ಸ್ವರ್ಣ,ರವಿ,ರಾಮಲಿಂಗ ಪ್ಪ,ಪ್ರಭಾಕರ್,ನಿರ್ಮಲ,ಲಕ್ಷೀದೇವಿ,ಸೇರಿದಂತೆ ಹಲವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...