ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ನಾವು ಸದ್ಯ ಇರುವ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಜಾಗ ಗುರುತಿಸಿ, ಒಪ್ಪಂದದ ಕರಡು ತಯಾರಿಸಿ ಕೇಂದ್ರಕ್ಕೆ ಕಳುಹಿಸಿ ವರ್ಷವಾಗುತ್ತಾ ಬಂದಿದೆ ಪ್ರಕ್ರಿಯೆಗಳು ನಡೆಯಬೇಕಿದೆ. ಪ್ರಕ್ರಿಯೆ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ಕನ್ನಡಕ್ಕೆ 13 ವರ್ಷಗಳ ಹಿಂದೆ ಈ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಅನುದಾನ ಹಾಗೂ ಸೌಲಭ್ಯ ಪಡೆಯುವ ವಿಷಯದಲ್ಲಿ ಮಾತ್ರ ಇದೇ ಗೌರವಕ್ಕೆ ಪಾತ್ರವಾಗಿರುವ ಇತರೆ ಭಾಷೆಗಳಿಗಿಂತ ಕನ್ನಡ ಬಹಳ ಹಿಂದೆ ಬಿದ್ದಿದೆ ಎಂದರೆ ತಪ್ಪಾಗಲಾರದು.
ಶಾಸ್ತ್ರೀಯ ಸ್ಥಾನಮಾನ ಪಡೆದ ತಮಿಳು ಸ್ವಾಯತ್ತ ಅಧ್ಯಯನ ಕೇಂದ್ರ ಹೊಂದಿದೆ. ಕಳೆದ ಏಳು ವರ್ಷಗಳಲ್ಲಿ 50 ಕೋಟಿ ರೂಪಾಯಿ ಅನುದಾನ ಪಡೆದಿದೆ. ಇಲ್ಲಿನ ರಾಜಕಾರಣಿಗಳು ಪಟ್ಟುಹಿಡಿದು ಇದನ್ನ ಸಾಧಿಸಿದ್ದಾರೆ. ಆದರೆ ಕರ್ನಾಟಕ ರಾಜ್ಯದ ಯಾವ ಪಕ್ಷದ ನಾಯಕರು ಸಂಸದರು ಈ ಬಗ್ಗೆ ಮೌನ ತೋರಿರುವುದು ಕೇಂದ್ರ ನೀಡುವ ವಿಶೇಷ ಅನುದಾನ ಕನ್ನಡಿಗರಿಗೆ ಕನಸಿನ ಗಂಟಾಗಿದೆ.
ಕೇಂದ್ರ ಸರ್ಕಾರದ ತಾರತಮ್ಯ ನೀತಿ ಪರಿಣಾಮ ಕನ್ನಡ ಶಾಸ್ತ್ರೀಯ ಭಾಷೆಗೆ ಈ ಅವಧಿಯಲ್ಲಿ 8 ಕೋಟಿ ರೂಪಾಯಿ ಅನುದಾನ ವಷ್ಟೇ ಬಂದಿದೆ. ಆದರೆ ಇದೇ ವೇಳೆ ಕನ್ನಡಕ್ಕಿಂತ ಒಂದಿಷ್ಟು ವರ್ಷ ಮುಂಚಿತವಾಗಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆದಿದ್ದ ತಮಿಳು ಭಾಷೆಗೆ 50 ಕೋಟಿ ರೂ. ಹಾಗೂ ಇನ್ನಿತರ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡಿದೆ. ಸಂಸ್ಕೃತ ಭಾಷೆಯು 1200 ಕೋಟಿ ರೂಪಾಯಿ ಅನುದಾನವನ್ನು ಪಡೆದಿದೆ.
ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರಕ್ಕೆ ಯೋಜನಾ ನಿರ್ದೇಶಕರು, ಆಡಳಿತ ಸಿಬ್ಬಂದಿ ಹಾಗೂ 15 ಮಂದಿ ಸಂಶೋಧಕರು ಇದ್ದಾರೆ. ಸಿಐಐಎಲ್ ಗೆ 4 ಶಾಸ್ತ್ರೀಯ ಭಾಷೆಗೆ ಸೇರಿ ಬರುತ್ತಿರುವ ಅನುದಾನದ ಒಂದು ಭಾಗದಲ್ಲಿ ಕನ್ನಡದ ಚಟುವಟಿಕೆಯು ನಡೆಯಬೇಕು ಆದರೆ ಆಡಳಿತ ವೆಚ್ಚಕ್ಕೆ ಇದು ಸುರಿದುಗೊತ್ತಿದೆ. ಹೊಸ ಅನುದಾನ ಇಲ್ಲದೆ ಸಂಶೋಧನೆ ಪ್ರಕಟಣೆ ಸೇರಿದಂತೆ ಯಾವುದೇ ಪ್ರಮುಖ ಕಾರ್ಯವು ನಡೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.