Thursday, August 6, 2026
Thursday, August 6, 2026

ಶಾಸಕ ಚನ್ನಿ ಅವರಿಂದ ಗೆಳೆಯರ ಬಳಗ ಸೌಹಾರ್ದ ಸಹಕಾರಿ ಸಂಘದ ಕಛೇರಿ ಉದ್ಘಾಟನೆ

Date:

ವಿನೋಬಾ ನಗರದ ಕರಿಯಣ್ಣ ಬಿಲ್ಡಿಂಗ್ ಬಳಿ ಈಶ ಕಾಂಪ್ಲೆಕ್ಸ್ನಲ್ಲಿ ಗೆಳೆಯರ ಬಳಗ ಸೌಹಾರ್ದ ಸಹಕಾರಿ ಸಂಘ(ಜಿಬಿಎಸ್‌ಎಸ್‌ಎನ್) ದ ಕಚೇರಿ ಉದ್ಘಾಟನೆ ಆಯಿತು. ಶಿವಮೊಗ್ಗ ಕ್ಷೇತ್ರದ ಶಾಸಕರಾದ ಚನ್ನಬಸಪ್ಪನವರು ಕಚೇರಿಯನ್ನು ಉದ್ಘಾಟಿಸಿದರು.
ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ದೇಶದ ಆರ್ಥಿಕ ಅಭಿವೃದ್ದಿ ಸಹಕಾರ ಸಂಘಗಳ ಪಾತ್ರ ಅಪಾರವಾದದು. ಸ್ಥಳೀಯ ಜನರ ಆರ್ಥಿಕ ಮತ್ತು ಸಾಮಾಜಿಕ ಬೆಳೆವಣಿಗೆಗೆ ಸಹಕಾರ ಸಂಘಗಳು ಪ್ರೇರಕ ಮತ್ತು ಪೂರಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಸಹಕಾರ ಸಂಘಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ,
ಎಂಆರ್ ಅನಿಲ್ ಕುಂಚಿ ಅವರ ಈ ಸಹಕಾರಿ ಸಂಘ ಸಾರ್ವðಜನಿಕರಿಗೆ ಗುಣಮಟ್ಟದ ಸೇವೆಯನ್ನ ನೀಡಲಿ ಎಂದರು.

ಸಹಕಾರ ಸಂಘದ ಅಧ್ಯಕ್ಷ ಎಂ.ಆರ್ ಅನಿಲ್ ಕುಂಚಿ ಮಾತನಾಡಿ, ಗೆಳೆಯ ಬಳಗವು ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಸ್ವಾವಲಂಬನೆ ಸಾಧಿಸಲು ಪ್ರೇರಣೆ ನೀಡುವುದಕ್ಕಾಗಿ ಸ್ಥಾಪನೆಗೊಂಡಿದೆ. ಇಲ್ಲಿ ಜಾತಿ, ಮತ, ಧರ್ಮದ ಬೇಧವಿಲ್ಲ. ಕೇವಲ ಆರ್ಥಿಕ ವಹಿವಾಟು ಅಲ್ಲದೆ ಸಾಮಾಜಿಕ ಚಿಂತನೆಗಳನ್ನು ಇಲ್ಲಿ ಬೆಳೆಸಲಾಗುತ್ತದೆ. ಸುಲಭ ದರದಲ್ಲಿ ಸಾಲ ನೀಡುವುದು, ಠೇವಣಿ ಸಂಗ್ರಹಿಸುವುದು ಆ ಮೂಲಕ ದೇಶದ ಆರ್ಥಿಕ ಅಭಿವೃದ್ದಿಗೆ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿಗಳಾದ ಈಶ್ವರಪ್ಪ ನವರು, ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಕಚೇರಿಗೆ ಭೇಟಿ ನೀಡಿ ಶುಭ ಹರಿಸಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಶ್ರೀನಿವಾಸ, ಯೋಗ ಗುರು ಸಿ.ವಿ.ರುದ್ರರಾಧ್ಯ, ನಿರ್ದೇಶಕರುಗಳಾದ ವಿ. ಜಯಂತಿ, ಎಂ.ಪುಷ್ಪ, ಹೆಚ್.ಪಿ. ಜಿಶಾನ್ ಅಲಿಖಾನ್, ಲಕ್ಕಪ್ಪ, ರಾಘವೇಂದ್ರ, ದೇವರಾಜ್, ಜಯವರ್ಧನ್, ಲೋಕಯ್ಯ,ಉಮೇಶ್ ನಾಯ್ಕ, ರಾಮಚಂದ್ರಪ್ಪ, ಪ್ರೇಮ, ಸಿಇಓ ಎನ್.ಕೆ.ಪ್ರತೀಕ್ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....

DC Shivamogga ಮುಂದಿನ 61 ವಾರಗಳಿಗೆ ಜಾನುವಾರುಗಳ ಅಗತ್ಯ ಮೇವಿಗೆ ಕೊರತೆಯಿಲ್ಲ : ಪ್ರಭುಲಿಂಗ ಕವಳಿಕಟ್ಟಿ

DC Shivamogga ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಗಸ್ಟ್...