Government Employees’ Housing Cooperative Society ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಶಿವಮೊಗ್ಗ ಇದರ ವತಿಯಿಂದ ಪ್ರತಿ ವರ್ಷದಂತೆ, ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕರಿಸಲು ಉದ್ದೇಶಿಸಲಾಗಿದೆ. ಅದರಂತೆ, ಅಂತಹ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ೨೦೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆದ್ದರಿಂದ ಈ ಕೆಳಕಂಡ ಪ್ರಕಟಣೆಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಈ ಮೂಲಕ ತಮ್ಮಲ್ಲಿ ಕೋರಿದೆ.
ಪತ್ರಿಕಾ ಪ್ರಕಟಣೆಗಾಗಿ
Government Employees’ Housing Cooperative Societyಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಶಿವಮೊಗ್ಗ ಇದರ ವತಿಯಿಂದ ನಡೆಸಲಿರುವ ಪ್ರತಿಭಾ ಪುರಸ್ಕಾರಕ್ಕಾಗಿ ಸಂಘದ ಸದಸ್ಯರಿಂದ ಅರ್ಜಿ ಆಹ್ವಾನ
ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಶಿವಮೊಗ್ಗ ಇದರ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕರಿಸುವ ಸಲುವಾಗಿ ೨೦೨೬ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ, ೧೦ನೇ ತರಗತಿ(ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ), ದ್ವಿತೀಯ ಪಿ.ಯು.ಸಿ ಹಾಗೂ ೧೨ನೇ ತರಗತಿ(ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ) ಪರೀಕ್ಷೆಯಲ್ಲಿ ಶೇಕಡ ೯೦ಕ್ಕೂ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪುರಸ್ಕರಿಸಲು ಸಂಘದ ಸದಸ್ಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು, ದಿನಾಂಕ:೧೫-೦೬-೨೦೨೬ರೊಳಗೆ ಈ ಮುಂದಿನ ಲಿಂಕನ್ನು ಬಳಸಿ hಣಣಠಿ://biಣ.ಟಥಿ/govಣemಠಿhousiಟಿg ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಶ್ರೀ ಬಿ.ಹೆಚ್. ನಿರಂಜನ್ ಮೂರ್ತಿ, (ಮೊ.ಸಂ. ೯೪೪೯೦೫೦೯೮೬) ಹಾಗೂ ಶ್ರೀ ಲಿಂಗೇಶ್ ಬಿ., (ಮೊ.ಸಂ. ೯೯೮೬೨೬೮೬೨೮) ಇವರನ್ನು ಸಂಪರ್ಕಿಸಲು ಸಂಘದ ಅಧ್ಯಕ್ಷರಾದ ಶ್ರೀಯುತ ಸಿ.ಎಸ್. ಷಡಾಕ್ಷರಿರವರು ತಿಳಿಸಿದ್ದಾರೆ.
Government Employees’ Housing Cooperative Society ಪ್ರತಿಭಾ ಪುರಸ್ಕಾರ ಕ್ಕಾಗಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಂದ ಅರ್ಜಿ ಆಹ್ವಾನ.
Date:
