Thursday, June 25, 2026
Thursday, June 25, 2026

Manipal ಮಾಹೆ ಮತ್ತು ಸ್ಪೆಷಲ್ ಒಲಂಪಿಕ್ಸ್ ಭಾರತ್ ಪರಸ್ಪರ ಮಹತ್ವದ ಒಪ್ಪಂದಕ್ಕೆ ಸಹಿ.

Date:

Manipal ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಇತ್ತೀಚೆಗೆ ‘ಸ್ಪೆಷಲ್ ಒಲಿಂಪಿಕ್ಸ್ ಭಾರತ್’ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ, ಪರಸ್ಪರ ಸಹಕಾರ ಮತ್ತು ಸಾಮಾಜಿಕ ಸುಧಾರಣೆಯತ್ತ ಇಟ್ಟಿರುವ ಒಂದು ಮಹತ್ವದ ಹೆಜ್ಜೆ ಇದಾಗಿದೆ.
ಶಿಕ್ಷಣ ಮತ್ತು ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿಶೇಷ ಚೇತನರನ್ನು ಸಬಲೀಕರಿಸಲು ಈ ಒಪ್ಪಂದ ಸಹಕಾರಿಯಾಗಿದೆ. ಸಮಾಜದಲ್ಲಿ ಅವರಿಗೆ ಸಮಾನ ಸ್ಥಾನಮಾನ ಮತ್ತು ಗೌರವ ಸಿಗುವಂತೆ ಮಾಡುವಲ್ಲಿ ಹಾಗೂ ಅವರ ಸರ್ವತೋಮುಖ ಏಳಿಗೆಗಾಗಿ ಎರಡೂ ಸಂಸ್ಥೆಗಳು ಜೊತೆಯಾಗಿ ಕೆಲಸ ಮಾಡಲಿವೆ.
ಈ ಸಂದರ್ಭದಲ್ಲಿ ಸ್ಪೆಷಲ್ ಒಲಿಂಪಿಕ್ಸ್ ಏಷ್ಯಾ ಪೆಸಿಫಿಕ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ನಟಾಲಿ, ಸ್ಪೆಷಲ್ ಒಲಿಂಪಿಕ್ಸ್ ಭಾರತ್‌ನ ಅಧ್ಯಕ್ಷ ಡಾ| ಮಲ್ಲಿಕಾ ನಡ್ಡಾ, ಮಾಹೆ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್, ಲೆಫ್ಟಿನೆಂಟ್ ಜನರಲ್ (ಡಾ|) ಎಂ.ಡಿ. ವೆಂಕಟೇಶ್, ಸಲಹೆಗಾರರು, ಎಂಇಎಂಜಿ, ಮಾಹೆ ಕುಲಸಚಿವ ಡಾ| ಪಿ. ಗಿರಿಧರ್ ಕಿಣಿ ಹಾಗೂ ನಾರಾಯಣ ಸಭಾಹಿತ, ಸಹ ಕುಲಪತಿಗಳು ಮತ್ತು ಸ್ಪೆಷಲ್ ಒಲಿಂಪಿಕ್ಸ್ ಭಾರತ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಡಿ. ಜಿ. ಚೌಧರಿ ಅವರು ಉಪಸ್ಥಿತರಿದ್ದರು.
Manipal ಸಮಾರಂಭದ ಭಾಗವಾಗಿ ಡಾ. ಮಲ್ಲಿಕಾ ನಡ್ಡಾ ಮತ್ತು ಡಾ. ಪಿ. ಗಿರಿಧರ್ ಕಿನಿ ಅವರು ಸಾಂಕೇತಿಕವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದರು. ಸಮಾಜಕ್ಕೆ ಪ್ರಯೋಜನಕಾರಿಯಾದ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಎರಡೂ ಸಂಸ್ಥೆಗಳಿಗಿರುವ ಬದ್ಧತೆಯನ್ನು ಈ ಕಾರ್ಯವು ಎತ್ತಿ ತೋರಿಸಿತು.
ಮಾಹೆ ಮತ್ತು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಸಂಸ್ಥೆಗಳು ಒಟ್ಟಾಗಿ ಶಿಕ್ಷಣ ಮತ್ತು ಸಮಾಜದ ವಿವಿಧ ಹಂತಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಿವೆ. ಜನರಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಸಹಾನುಭೂತಿ ಬೆಳೆಸುವ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಭವಿಷ್ಯ ಕಟ್ಟಲು ಪ್ರೇರಣೆ ನೀಡುವುದು ಈ ಒಪ್ಪಂದದ ಗುರಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kodachadri Chits Pvt. Ltd ಗ್ರಾಹಕರೇ ಕೊಡಚಾದ್ರಿಚಿಟ್ಸ್ ನ ಹಿಂದಿರುವ ಶಕ್ತಿ- ಪರಶುರಾಮ್

Kodachadri Chits Pvt. Ltd ಕೊಡಚಾದ್ರಿ ಚಿಟ್ಸ್‌ನ ಯಶಸ್ಸಿನ ಹಿಂದಿನ ನಿಜವಾದ...

Rotary Club Shivamogga ಮಲೇರಿಯಾವನ್ನ ವೈಜ್ಞಾನಿಕ ಕ್ರಮಗಳಿಂದ ನಿರ್ಮೂಲನೆ ಮಾಡಲು ಸಾಧ್ಯ. ಈ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅನಿವಾರ್ಯ- ಡಾ.ಗುಡದಪ್ಪ ಕಸಬಿ

Rotary Club Shivamogga "ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವುದರಿಂದ ಸಾರ್ವಜನಿಕರಲ್ಲಿ...

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...