Shivamogga Police ಗಾಡಿಕೊಪ್ಪ,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ ಯಾವುದೇ ಹೆಸರಿಲ್ಲ. ಆದರೂ ಗಾಡಿಕೊಪ್ಪ ಸರ್ಕಲ್, ಆಟೋಸ್ಟ್ಯಾಂಡ್. ಪ್ರೈಮರಿ ಶಾಲೆ ಸಮೀಪ ,ಗುಂಡ ಕ್ಯಾಂಟೀನ ಬಳಿ ಎಂಬೆಲ್ಲ ವಿಳಾಸದ ಲೊಕೇಷನ್ ಹೊತ್ತಿದೆ.
ಅಲ್ಲಿ ಬಿ.ಹೆಚ್.ರಸ್ತೆ ಮತ್ತು ಗಾಡಿಕೊಪ್ಪ ಒಳಸಾಗುವ ಮಾರ್ಗದಿಂದಾಗಿ ವೃತ್ತ ನಿರ್ಮಾಣವಾಗಬೇಕು.
ಅಲ್ಲಿನ ವಾಹನಗಳ ಓಡಾಟ ಮಾತ್ರ ಲಂಗಿಲ್ಲ ಲಗಾಮಿಲ್ಲ.
ಈಗ್ಯೆ ನಾವೆಲ್ಲಾ ಗಮನಿಸಿದಂತೆ ಆರೇಳು ವರ್ಷಗಳಿಂದ ಗಾಡಿಕೊಪ್ಪದ ಫಾಸಲೆಯಲ್ಲಿ ಹಲವಾರು ಬಡಾವಣೆಗಳು ನಿರ್ಮಾಣವಾಗಿವೆ.
ಅಲ್ಲಿ ಹಾಹನಗಲಕ ನಿಯಂತ್ರಣ ಬೇಕಿತ್ತು.
ಇದನ್ನ ಸಾರ್ವಜನಿಕರು ಕೋರಿಕೆ ಸಲ್ಲಿಸಿಯಾಗಿತ್ತು.
ಇದೀಗ ಅಲ್ಲಿ ಸಂಚಾರಿ ದೀಪ ಬಂದಿದೆ. ಜಿಲ್ಲಾ ಪೊಲೀಸ್ ಇಲಾಖೆಯ ಈ ಕ್ರಮದಿಂದ ಅಪಘಾತಗಳು ಆಗದೇ ಇರಲಿ ಎಂದು ನಿಟ್ಟುಸಿರು ಬಿಡುವಂತಾಗಿದೆ.
ಮತ್ತೊಂದು ವಾಹನ ಚಾಲಕರಿಗೆ ಪೊಲೀಸ್ ನೆರವು ಬೇಕು. ಅದೆಂದರೆ ರಸ್ತೆ ಡಿವೈಡರ್ ಗಳ ಬಳಿ ಜನ ಇಳಿದು ರಸ್ತೆ ದಾಟುವ ಅಭ್ಯಾಸವಿದೆ.
ಎರಡೂ ರಸ್ತೆಗಳ ವಾಹನ ಸಂಚಾರದಿಂದ ಚಾಲಕರಿಗೆ ಹೆಡ್ ಲೈಟ್ ಗ್ಲೇರಿಂಗ್ ಪರಿಣಾಮದಿಂದ ವ್ಯಕ್ತಿಗಳು,ಪ್ರಾಣಿಗಳು
ವಾಹನಗಳ ಚಾಲಕರಿಗೆ
ಸ್ಪಷ್ಟ ಕಾಣಿಸುವುದಿಲ್ಲ.
ಇದೇ ಅಪಘಾತಕ್ಕೆ ಮತ್ತೊಂದು ಪ್ರಬಲ ಕಾರಣ. ಇದರ ಬಗ್ಗೆ ಸಂಚಾರಿ ಪೊಲೀಸ್ ವ್ಯವಸ್ಥೆ ತೀವ್ರ ಆಲೋಚಿಸಲಿ.
ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆಯುವ ಮತ್ತೊಂದು
ಸಲಹೆ .
ನಂಜಪ್ ಲೈಫ್ ಕೇರ್ ಆಸ್ಪತ್ರೆ ತಿರುವು ಪ್ರಖರ ಬೀದಿ ದೀಪವಿಲ್ಲ. ಅಲ್ಲಿ ದೀಪ ಬೇಕು.
ಮುಂದೆ ಸಾಗಿದರೆ ಪುರದಾಳ್ ಕ್ರಾಸ್ ನಲ್ಲಿ “ಮೃತ್ಯು ಸ್ಥಳ” ನಿರ್ಮಾಣವಾಗಿದೆ.
ಪುರದಾಳ್ ಕ್ರಾಸ್ ನಲ್ಲಿ ಸಾಗಿದರೆ ಐದು ಬಡಾವಣೆಗಳಿಗೆ ಅದೇ ಮುಖ್ಯಮಾರ್ಗ. ಅಲ್ಲಿ ತಿರುವನಲ್ಲೇ ರಸ್ತೆಪಕ್ಕ
ಜ್ಯೂಸ್ ಮಳಿಗೆ, ಕ್ಯಾಂಟೀನು ಶುರುವಾಗಿ ಅಲ್ಲಿ ಪ್ರಯಾಣಿಕರು ವಾಹನ ನಿಲ್ಲಿಸುತ್ತಾರೆ. ಪುರದಾಳ್ ಕ್ರಾಸ್ ನಿಂದ ಬಿ .ಹೆಚ್.ರಸ್ತೆ ಬರಲು ಶಿವಮೊಗ್ಗದ ಕಡೆಯಿಂದ ಬರುವ ವಾಹನಗಳು ಕಾಣಿಸುವುದೇ ಇಲ್ಲ.
ಈಗಾಗಲೇ ಈ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯೋರ್ವರು ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಈ ಸ್ಥಳದಲ್ಲೂ ಈಗ ಎಲ್ಲೋ ಲೈಟ್ ಬೇಕು.
ಮುಖ್ಯರಸ್ತೆ ತಿರುವು ಮರೆಯಾಗುವಂತೆ ಹರ್ಷ ದಿ ಫರ್ನ್ ಹೋಟೆಲ್ ಹೋರ್ಡಿಂಗ್ ನಿಲ್ಲಿಸಲಾಗಿದೆ. ಅದನ್ನೂ ಸ್ಥಳಾಂತರಗೊಳಿಸಬೇಕು.
ಪುರದಾಳ್ ಕ್ರಾಸ್ ರಸ್ತೆ ಬಿಸಿಎಂ ಹಾಸ್ಟೆಲ್ ಕಡೆ ಸಾಗುತ್ತದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನ, ಕಾರು ಲಾರಿಗಳ ಸಂಚಾರ ವೇಗವಾಗಿ ಬೆಳೆದಿದೆ. ಅಲ್ಲಿ ಸೂಕ್ತವಾದ ಎರಡು ಮೂರು ಹಂಪ್ ಗಳ ವ್ಯವಸ್ಥೆ ಮಾಡಬೇಕು.
ಅಲ್ಲಿರುವ ಸೋಷಿಯಲ್ ಆರ್ಬರ್ , ಅಂಬಿಯನ್ಸ್ ಹಾಲ್, ಹೊಟೇಲ್ ನಲ್ಲಿ ನಡೆಯುವ. ಮದುವೆ, ಇತ್ರೆ ಸಮಾರಂಭಗಳ ಅಬ್ಬರದ ಧ್ವನಿವರ್ಧಕದ ಹಾವಳಿಯನ್ನೂ ನಿಯಂತ್ರಿಸಬೇಕು.
Shivamogga Police ಶಿವಮೊಗ್ಗ ಸ್ಮಾರ್ಟ್ ಆಗುತ್ತಿದೆ. ಆದರೆ ದೀಪದ ಕೆಳಗೆ ಕತ್ತಲೆ ಎಂಬಂತೆ ಗಾಡಿಕೊಪ್ಪ ಫಾಸಲೆ ಹಾಗಾಗ ಬಾರದು.
ಸಾರ್ವಜನಿಕರೆಲ್ಲರ ಮನವಿ ಎಂದರೆ ಈ ಅಂಶಗಳನ್ನ ಗಮನಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಸಿರಿಮಲ್ಲಿಗೆ ವಸತಿ ಸಂಘವು ಕೋರುತ್ತದೆ.
